ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಜಪೇಯಿ 10 ದಿನಗಳ ವಿಶ್ವಾಸ ಮತ: ಸಿಎಂ ಹೇಳಿದ್ದೇನು, ನಿಜಕ್ಕೂ ನಡೆದಿದ್ದೇನು?

|
Google Oneindia Kannada News

Recommended Video

Karnataka Crisis : ಅಟಲ್ ಬಿಹಾರಿ ವಾಜಪೇಯಿ ವಿಶ್ವಸಮತಯಾಚನೆಗೆ ನಿಜಕ್ಕೂ 10 ದಿನಗಳು ತೆಗೆದುಕೊಂಡಿದ್ರಾ?

ಬೆಂಗಳೂರು, ಜುಲೈ 19: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಿಶ್ವಾಸಮತ ಸಾಬೀತು ಪಡಿಸುವ ಸಮಯದಲ್ಲಿ ವಾಜಪೇಯಿ ಅವರು 10 ದಿನಗಳ ಕಾಲಾವಕಾಶ ಪಡೆದಿದ್ದರು ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಹಾಗೂ ರೇವಣ್ಣ ಅವರ ಹೇಳಿಕೆಯಲ್ಲಿ ಎಷ್ಟರ ಮಟ್ಟಿಗೆ ಸತ್ಯ ಅಡಗಿದೆ.

Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

ನಿಜಕ್ಕೂ ವಾಜಪೇಯಿ ಅವರು 10 ದಿನ ತೆಗೆದುಕೊಂಡಿದ್ದರೇ ಅಥವಾ ವಾಜಪೇಯಿ ಅವರ ಹೆಸರನ್ನು ಕರ್ನಾಟಕದ ಸಮ್ಮಿಶ್ರ ಸರ್ಕಾರ ಗುರಾಣಿಯನ್ನಾಗಿ ಬಳಸಿತೇ ಎನ್ನುವುದೇ ಈಗಿನ ವಾದವಾಗಿದೆ.

ವಿಶ್ವಾಸಮತ LIVE: ಸಂಜೆ 6 ಗಂಟೆ ಒಳಗೆ ವಿಶ್ವಾಸಮತ ಸಾಬೀತು ಮಾಡಲು ರಾಜ್ಯಪಾಲರ ಸೂಚನೆವಿಶ್ವಾಸಮತ LIVE: ಸಂಜೆ 6 ಗಂಟೆ ಒಳಗೆ ವಿಶ್ವಾಸಮತ ಸಾಬೀತು ಮಾಡಲು ರಾಜ್ಯಪಾಲರ ಸೂಚನೆ

1996ರಲ್ಲಿ ಅಟಲ್ ಬಿಹಾರ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ವಿಶ್ವಾಸಮತ ಸಾಬೀತು ಪಡಿಸುವುದಕ್ಕೂ ಮುನ್ನ 10 ದಿನಗಳು ಚರ್ಚೆ ನಡೆದಿತ್ತು. ಎನ್ನುವ ವಿಚಾರವನ್ನು ತಪ್ಪಾಗಿ ಅರ್ಥೈಸಿಕೊಂಡು ಅವರು ವಿಶ್ವಾಸಮತ ಯಾಚನೆಗೇ 10 ದಿನ ತೆಗೆದುಕೊಂಡಿದ್ದರು ಎಂದು ಹೇಳಿದ್ದಾರೆ.

Is really vajpayee took ten days to get vote of confidence

ಯಾಕಿಷ್ಟು ಹರಿಬರಿ ಮಾಡುತ್ತಿದ್ದೀರಾ, ಚರ್ಚೆ ಮಾಡಲು ಯಾಕೆ ಸಮಯ ನೀಡುತ್ತಿಲ್ಲ, ಚರ್ಚೆ ಮಾಡದೆ ವಿಶ್ವಾಸಮತ ಯಾಚಿಸುವುದು ತಪ್ಪು , ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ ಅದರ ಬಗ್ಗೆ ತಿಳಿಸುವುದು ನಮ್ಮ ಕರ್ತವ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಆದರೆ ಅಂದಿನ ಸಂದರ್ಭವೇ ಬೇರೆ ಇಂದಿನ ಸಂದರ್ಭವೇ ಬೇರೆ ಅಂದು ವಿಶ್ವಾಸಮತ ಯಾಚನೆಗೂ ಮುನ್ನ ಚರ್ಚೆಗೆ ಸಮಯ ತೆಗೆದುಕೊಂಡಿದ್ದು ಹೌದು, ಆದರೆ ನಿಗದಿಯಾಗಿದ್ದ ದಿನದಂದೇ ವಿಶ್ವಾಸ ಮತ ಯಾಚನೆ ಮಾಡಿ ಬಳಿಕ ಒಂದು ಮತದಿಂದ ಸೋತಿದ್ದರು.

ವಾಜಪೇಯಿ ವಿಶ್ವಾಸ ಮತ ಯಾಚನೆಗೆ 10 ದಿನ ತೆಗೆದುಕೊಂಡಿದ್ದರು ಎಂದ ರೇವಣ್ಣವಾಜಪೇಯಿ ವಿಶ್ವಾಸ ಮತ ಯಾಚನೆಗೆ 10 ದಿನ ತೆಗೆದುಕೊಂಡಿದ್ದರು ಎಂದ ರೇವಣ್ಣ

ಆದರೆ ಇಂದು ಕುಮಾರಸ್ವಾಮಿ ದಿನಾಕವನ್ನು ನಿಗದಿ ಮಾಡಿಯೂ ವಿಶ್ವಾಸ ಮತ ಯಾಚನೆ ಮಾಡದೆ ಸಮಯವನ್ನು ಕಳೆಯುತ್ತಿರುವುದು ವಿಪರ್ಯಾಸ. ವಿಶ್ವಾಸ ಮಂಡನೆ ಮಾಡುವುದಿಲ್ಲ ಎನ್ನುವುದಾಗಿದ್ದರೆ ವಿಧಾನಸಭೆಯಲ್ಲಿ ತಾವಾಗಿಯೇ ಈ ದಿನಾಂಕದಂದು ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಸ್ಪೀಕರ್ ಬಳಿ ಹೇಳಿದ್ದೇ ತಪ್ಪು ಎನ್ನಬಹುದಲ್ಲವೆ.

ವಾಜಪೇಯಿ ಸರ್ಕಾರವು ಒಂದು ಮತದಿಂದ ಸೋಲನನ್ನುಭವಿಸಿತ್ತು. 1996ರ ಮೇ 16ರಂದು ವಾಜಪೇಯಿ ಅವರ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ವಿಶ್ವಾಸ ಮತ ಸಾಬೀತು ಪಡಿಸುವಲ್ಲಿ ವಿಫಲರಾಗಿ ಅಧಿಕಾರ ಸ್ವೀಕರಿಸಿದ 13 ದಿನಗಳಲ್ಲೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಒಮ್ಮೆ 13 ತಿಂಗಳಿಗೆ ಅಧಿಕಾರ ಕಳೆದುಕೊಂಡಿದ್ದರು. 1996ರಲ್ಲಿ ಸಂಸತ್‌ನಲ್ಲಿ ಪಕ್ಷಕ್ಕೆ ಬಹುಮತವಿಲ್ಲ ಎನ್ನುವುದು ಗೊತ್ತಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ವಿಶ್ವಾಸ-ಅವಿಶ್ವಾಸ ಮತ: ರಾಜ್ಯದ ಇತಿಹಾಸದಲ್ಲಿ ಎಷ್ಟೆಷ್ಟು ದಿನ ಚರ್ಚೆ ನಡೆದಿತ್ತು?ವಿಶ್ವಾಸ-ಅವಿಶ್ವಾಸ ಮತ: ರಾಜ್ಯದ ಇತಿಹಾಸದಲ್ಲಿ ಎಷ್ಟೆಷ್ಟು ದಿನ ಚರ್ಚೆ ನಡೆದಿತ್ತು?

ಇಷ್ಟಾದರೂ ವಾಜಪೇಯಿಯವರ ರಾಜಕೀಯ ಬದುಕಿನಲ್ಲಿ ನಡೆದ ಘಟನೆಯೊಂದು ಅವರನ್ನು ಕೊರಗಿಸಿರಬಹುದೇನೋ! 2004 ರ ಚುನಾವಣೆಯಲ್ಲಿ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಗೊತ್ತಿದ್ದೋ ಗೊತ್ತಿಲ್ಲದೆಯೋ ಹಾದಿ ನಿರ್ಮಿಸಿಕೊಟ್ಟ ಆ ಘಟನೆಯಿಂದ, ಮುಂದಿನ 10 ವರ್ಷಗಳ ಕಾಲ ನರಕ ಅನುಭವಿಸುವಂತಾಗಿ ಹೋಯಿತು.

ಪರಿಶ್ರಮದಿಂದ ಆಡಳಿತದ ಚುಕ್ಕಾಣಿ ಹಿಡಿದಿದ್ದ ವಾಜಪೇಯಿಯವರು ಚಿಕ್ಕ ತಪ್ಪಿನಿಂದ ಕಾಂಗ್ರೆಸ್ ಕೈ ಗೆ ಅಧಿಕಾರ ನೀಡುವ ಹಾಗಾಯಿತು ಕಾಂಗ್ರೆಸ್ ಆಳಿದ ಆ ಹತ್ತು ವರ್ಷಗಳು, ಭಾರತವನ್ನು ಸೈದ್ಧಾಂತಿಕವಾಗಿ, ಆರ್ಥಿಕವಾಗಿ ಹಿಂಡಿ ಹಿಪ್ಪೆ ಮಾಡಿತು ಎನ್ನುವುದು ಕೆಲವರ ವಾದವಾಗಿದೆ.

ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ?ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಭ್ರಷ್ಟಾಚಾರ, ಉಗ್ರರ ಬೆಂಬಲ, ಕಾಶ್ಮೀರಿ ಪ್ರತ್ಯೇಕತಾವಾದಿಗಳ ಬೆಂಬಲ, ರಕ್ಷಣೆಗಳಿಲ್ಲದ ಗಡಿ ಭಾಗಗಳು! ಒಂದೇ ಎರಡೇ? ಭಾರತ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಮತ್ತೆ 'ಕೈ' ಯೊಳಗೆ ಹಿಂಸೆಗೊಳಗಾಗಿತ್ತು! ಶೇ.8.6 ಇದ್ದ ಆರ್ಥಿಕ ನೆಲೆ ಶೇ.4.3 ಗೆ ಬಂದಿಳಿದಿತ್ತು ಹತ್ತೇ ವರ್ಷಗಳಲ್ಲಿ.

English summary
Chief minister HD Kumaraswamy alleges that Vajpayee took ten days to get vote of confidence and then what's the problem now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X