• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಪಚುನಾವಣೆ: ಇಬ್ಬರು ಪ್ರಭಾವಿ ಕಾಂಗ್ರೆಸ್ ಮುಖಂಡರನ್ನು ದೂರವಿಟ್ಟ ಡಿ.ಕೆ.ಶಿವಕುಮಾರ್

|

ಕೆಲವೊಂದು ವರ್ಗದ ಮತವನ್ನು ಸೆಳೆಯಲು ನಿರ್ಣಾಯಕವಾಗಿದ್ದರೂ, ಇಬ್ಬರು, ಬೆಂಗಳೂರು ನಗರ ವ್ಯಾಪ್ತಿಯ ಪ್ರಭಾವೀ ಶಾಸಕರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉಪಚುನಾವಣೆಯ ವೇಳೆ ದೂರವಿಡುತ್ತಿದ್ದಾರೆಯೇ?

ಹಲವು ಕಾರಣಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಾರ್ಟಿ, ಬಿಜೆಪಿ ಬಾಯಿಗೆ ಆಹಾರವಾಗದೇ ಇರಲು, ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಇಬ್ಬರು ಶಾಸಕರನ್ನು ಉದ್ದೇಶಪೂರ್ವಕವಾಗಿಯೇ ದೂರವಿಡುತ್ತಿದೆ ಎನ್ನುವ ಮಾತು ಚಾಲ್ತಿಯಲ್ಲಿದೆ.

ಆರ್.ಆರ್.ನಗರ ಚುನಾವಣೆಯಲ್ಲಿ ವಿಭಿನ್ನ ಕಾರ್ಯತಂತ್ರ: ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದ ಡಿಕೆಶಿ

ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ವಿಧಾನದ ಬಗ್ಗೆಯೂ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರಿಗೆ ಅಸಮಾಧಾನವಿದೆ ಎನ್ನುವ ಮಾತಿನ ನಡುವೆ, ಕೆಪಿಸಿಸಿ ಅಧ್ಯಕ್ಷರು, ಹೈಕಮಾಂಡ್ ಅಣತಿಯಂತೆಯೇ ಇಬ್ಬರನ್ನು ದೂರವಿಡುವ ನಿರ್ಧಾರಕ್ಕೆ ಬಂದಿದ್ದಾರೆಯೇ?

ಕಾಂಗ್ರೆಸ್ ವೋಟ್ ಬ್ಯಾಂಕಿನ ಪ್ರಮುಖ ಸಮುದಾಯದ ಇಬ್ಬರು ಮುಖಂಡರನ್ನು ಉಪಚುನಾವಣೆ ಪ್ರಕ್ರಿಯೆಯಿಂದ ದೂರವಿಡಲು ನಿರ್ಧರಿಸಿರುವುದು ಕಾಂಗ್ರೆಸ್ಸಿನ ಗೇಂ ಪ್ಲಾನ್ ಆಗಿದೆಯೇ? ಸದ್ಯದ ಮಟ್ಟಿಗೆ ಚುನಾವಣೆಯ ವಿಚಾರದಲ್ಲಿ ದೂರವಿರುವ ಇಬ್ಬರು ನಾಯಕರಾರು? ಮುಂದೆ ಓದಿ..

ಶಿರಾ ಉಪಚುನಾವಣೆ: ಕಾಂಗ್ರೆಸ್ ನೆಮ್ಮದಿಗೆ ಭಂಗ ತಂದ 'ಪವಿತ್ರ ಸ್ನೇಹ'

ರಾಜರಾಜೇಶ್ವರಿ ನಗರದ ಕಣಕ್ಕೆ ಕುಸುಮಾ ಅವರಿಗೆ ಬಿ-ಫಾರಂ

ರಾಜರಾಜೇಶ್ವರಿ ನಗರದ ಕಣಕ್ಕೆ ಕುಸುಮಾ ಅವರಿಗೆ ಬಿ-ಫಾರಂ

ಕಾಂಗ್ರೆಸ್ ಹಿಂದಿನಿಂದಲೂ ಅನುಸರಿಸಿಕೊಂಡು ಬರುತ್ತಿರುವ ಸಂಪ್ರದಾಯವನ್ನು ಮುರಿಯಲಾಗಿದೆ ಎನ್ನುವ ಆರೋಪವೂ ಕೇಳಿಬರುತ್ತಿದೆ. ಸಾಮಾನ್ಯವಾಗಿ, ಯಾವುದೇ ಕ್ಷೇತ್ರಕ್ಕೆ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗುತ್ತಿದೆ. ಆದರೆ, ರಾಜರಾಜೇಶ್ವರಿ ನಗರದ ಕಣಕ್ಕೆ ಕುಸುಮಾ ಅವರನ್ನು ಮಾತ್ರ ಶಿಫಾರಸು ಮಾಡಲಾಗಿದೆ, ಮತ್ತು ಅವರಿಗೆ ಬಿ-ಫಾರಂ ನೀಡಲಾಗಿದೆ.

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್

ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್

ಸದ್ಯದ ಉಪಚುನಾವಣೆಯ ಪ್ರಚಾರ ಅಥವಾ ಪ್ರಕ್ರಿಯೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಕಾಣಿಸಿಕೊಳ್ಳುತ್ತಿಲ್ಲ. ಕೊರೊನಾ ವಿಚಾರದಲ್ಲಿ ಅದರಲ್ಲೂ ಪ್ರಮುಖವಾಗಿ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಘಟನೆಯ ವಿಚಾರದಲ್ಲಿ, ಬಿಜೆಪಿ, ಕಾಂಗ್ರೆಸ್ ಮುಖಂಡರನ್ನೇ ಟಾರ್ಗೆಟ್ ಮಾಡಿತ್ತು. ಅದರಲ್ಲಿ ಪ್ರಮುಖವಾಗಿ ಜಮೀರ್ ಅಹ್ಮದ್.

ಸಿದ್ದರಾಮಯ್ಯ ಇವರ ಕಿವಿಹಿಂಡಿದ ಉಲ್ಟಾ ಹೊಡೆದ ಜಮೀರ್

ಸಿದ್ದರಾಮಯ್ಯ ಇವರ ಕಿವಿಹಿಂಡಿದ ಉಲ್ಟಾ ಹೊಡೆದ ಜಮೀರ್

ಇನ್ನು, ಕಾಂಗ್ರೆಸ್ಸಿಗೆ ಬಹಳ ಮುಜುಗರ ತಂದ ಘಟನೆ, ಕೊರೊನಾ ವಾರಿಯರ್ಸ್ ಮೇಲೆ ಪಾದರಾಯನಪುರದಲ್ಲಿ ನಡೆದ ಹಲ್ಲೆ. ಈ ವಿಚಾರದಲ್ಲಿ ಜಮೀರ್ ಅಹ್ಮದ್ ಖಾನ್ ತೀವ್ರ ಟೀಕೆಗೆ ಗುರಿಯಾಗಿದ್ದರು. ನಂತರ, ಸಿದ್ದರಾಮಯ್ಯ ಇವರ ಕಿವಿಹಿಂಡಿದ ನಂತರ ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದರು. ಹಾಗಾಗಿ, ಜಮೀರ್ ಪ್ರಚಾರಕ್ಕೆ ಬಂದರೆ, ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯಿಲ್ಲದಿಲ್ಲ.

  ಹೇಳ್ದೆ ಕೇಳ್ದೆ ಕೊಟ್ರು ನೋಡಿ Ramuluge Shock!! | Oneindia Kannada
  ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಜಾರ್ಜ್ ಹೆಸರು

  ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಜಾರ್ಜ್ ಹೆಸರು

  ಇನ್ನು, ಸರ್ವಜ್ಞ ನಗರ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್ ಅವರನ್ನೂ ಸದ್ಯದ ಮಟ್ಟಿಗೆ ದೂರವಿಡಲಾಗಿದೆ. ಚುನಾವಣಾ ಪ್ರಚಾರದ ಕಾವು ಹೆಚ್ಚಾಗುವ ವೇಳೆ ಜಮೀರ್ ಮತ್ತು ಜಾರ್ಜ್, ಪಕ್ಷದ ಪರವಾಗಿ ಎಂಟ್ರಿ ಕೊಡುತ್ತಾರಾ? ಗೊತ್ತಿಲ್ಲ. ಆದರೆ, ಸದ್ಯದ ಮಟ್ಟಿಗೆ ಇಬ್ಬರನ್ನೂ ದೂರವಿಡಲಾಗಿದೆ. ಜಾರ್ಜ್ ಅವರ ಹೆಸರು ದಿವಂಗತ ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಕೇಳಿ ಬಂದಿದ್ದರಿಂದ, ಇವರನ್ನು ಡಿಕೆಶಿ ದೂರವಿಟ್ಟಿರುವ ಸಾಧ್ಯತೆಯಿದೆ.

  English summary
  Is KPCC Chief DK Shivakumar Intentionally Kept Away Two Senior Leaders From By Election,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X