ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೇಟಿಎಂ, ಗೂಗಲ್ ಪೇ ಬಳಸಲು ಸರ್ಕಾರವೇ ಬಲವಂತ ಪಡಿಸುತ್ತಿದೆಯಾ?

|
Google Oneindia Kannada News

ಬೆಂಗಳೂರು, ಮಾರ್ಚ್ 24: ಇದು ವೈಯಕ್ತಿಕ ಅನುಭವ. ಆದ್ದರಿಂದ ನಿಮ್ಮ ಜತೆಗೆ ಈ ಕ್ಷಣವೇ ಹಂಚಿಕೊಳ್ಳಬೇಕು ಎಂದೆನಿಸಿದ್ದರಿಂದ ಇದನ್ನು ಓದುತ್ತಿದ್ದೀರಿ. ಅದೊಂದು ದಿನಸಿ ಅಂಗಡಿ. ಮನೆಗೆ ತುರ್ತಾಗಿ ಅಕ್ಕಿ ಬೇಕಾಗಿದ್ದರಿಂದ ಹೊರಗೆ ಹೋಗಬೇಕಾಯಿತು. ಅಲ್ಲಿ ನೋಡಿದರೆ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಎಲ್ಲಕ್ಕೂ ಅಲ್ಲಿ ಕ್ಯೂಆರ್ ಕೋಡ್ ಅನ್ನು ಮೆತ್ತಲಾಗಿದೆ.

ಸರಿ, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ತೆಗೆದುಕೊಳ್ತೀರಾ ಅಂತ ಪ್ರಶ್ನೆ ಮಾಡಿದರೆ, ಈ ಹಿಂದೆ ನಮ್ಮ ಹತ್ತಿರ ಮಷೀನ್ ಇತ್ತು. ಆದರೆ ಈಗ ಎಲ್ಲರೂ ಪೇಟಿಎಂ, ಗೂಗಲ್ ಪೇ ಅಂಥದ್ದರಲ್ಲೇ ಹಣ ಟ್ರಾನ್ಸ್ ಫರ್ ಮಾಡುವುದರಿಂದ ಮಷೀನ್ ವಾಪಸ್ ಮಾಡಿದೆವು ಎಂಬ ಉತ್ತರ ಬರುತ್ತದೆ.

ಎರಡು ಸಾವಿರಕ್ಕಿಂತ ಹೆಚ್ಚು ವಿಥ್ ಡ್ರಾ ಸಾಧ್ಯವಿಲ್ಲ

ಸರಿ, ನಿಮ್ಮ ಹತ್ತಿರ ಡೆಬಿಟ್ ಕಾರ್ಡ್ ಇದ್ದರೆ ಎದುರಿನಲ್ಲೇ ಎಟಿಎಂ ಇದೆ. ಹಣ ಡ್ರಾ ಮಾಡಿಕೊಂಡು ಬನ್ನಿ ಅಂದರು ಅಂತ ಅಲ್ಲಿಗೆ ಹೋದರೆ, ಎರಡು ಸಾವಿರ ರುಪಾಯಿಗಿಂತ ಹೆಚ್ಚು ಹಣ ಒಂದು ಸಲಕ್ಕೆ ಬರಲ್ಲ. ಬೇರೆ ಬ್ಯಾಂಕ್ ನ ಎಟಿಎಂ ಆದರಂತೂ ತಿಂಗಳಲ್ಲಿ ಇಂತಿಷ್ಟು ವ್ಯವಹಾರ ಅಂತಾದ ಮೇಲೆ, ಪ್ರತಿ ಟ್ರಾನ್ಸಾಕ್ಷನ್ ಗೆ 23.50 ರುಪಾಯಿ ಚಾರ್ಜ್. ಇದು ಒಂದೊಂದು ಬ್ಯಾಂಕ್ ನಲ್ಲಿ ಒಂದೊಂದು ರೀತಿ ಇದೆ.

Is Government Pushing To Use Paytm, Google Pay And Other Payment Mode?

ಕೊರೊನಾ ಪ್ರಭಾವ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇನ್ನು ಮೂರು ತಿಂಗಳು ಯಾವ ಎಟಿಎಂನಲ್ಲಿ, ಎಷ್ಟು ಬಾರಿಯಾದರೂ ಎಷ್ಟು ಹಣ ವಿಥ್ ಡ್ರಾ ಮಾಡಿದರೂ ಶುಲ್ಕ ಹಾಕುವುದಿಲ್ಲ ಎಂದು ಭಾಷಣ ಮಾಡುವ ಹೊತ್ತಿಗೇ ನಡೆದ ಘಟನೆ ಇದು.

ಅವರ ಪತ್ರಿಕಾಗೋಷ್ಠಿ ನಡೆಯುತ್ತಿರುವ ಹೊತ್ತಿನಲ್ಲೇ ನನ್ನಂತೆ ಅದೆಷ್ಟು ಮಂದಿಯ ಖಾತೆಯಿಂದ ಪ್ರತಿ ಟ್ರಾನ್ಸಾಕ್ಷನ್ ಗೆ 23.50 ರುಪಾಯಿ ಶುಲ್ಕ ಕಡಿತವಾಯಿತೋ?

ಸರ್ಕಾರವೇ ಅನಿವಾರ್ಯ ಸೃಷ್ಟಿಸುತ್ತಿದೆಯಾ?

ಪೇಟಿಎಂ, ಫೋನ್ ಪೇ, ಗೂಗಲ್ ಪೇದಂಥದ್ದನ್ನು ಬಳಸಲು ಸರ್ಕಾರದ ನಿಯಮಗಳೇ ಜನರಿಗೆ ಅನಿವಾರ್ಯ ಸೃಷ್ಟಿ ಮಾಡುತ್ತದೆಯಾ ಎಂಬ ಪ್ರಶ್ನೆ ಮೂಡಿಸುತ್ತದೆ. ಸರಿ, ತಿಂಗಳಿಗೆ ಇಂತಿಷ್ಟೇ ಬಾರಿ ಹಣ ವಿಥ್ ಡ್ರಾ ಮಾಡಬೇಕು ಎಂಬ ನಿಯಮ ಇದೆಯಲ್ಲಾ, ಅದರ ಹಿಂದೆ ಯಾವುದಾದರೂ ವೈಜ್ಞಾನಿಕ ಅಧ್ಯಯನ ನಡೆದಿದೆಯಾ? ಗೊತ್ತಿಲ್ಲ.

ಈಗಂತೂ ಇನ್ನು ಮೂರು ತಿಂಗಳು ಎಟಿಎಂ ಶುಲ್ಕ ಇಲ್ಲ ಎಂದು ಕೇಂದ್ರ ಸಚಿವೆ ಹೇಳಿದ್ದಾರೆ. ಆ ನಿಯಮ ಯಾವ ದಿನದ, ಯಾವ ಕ್ಷಣದಿಂದ ಜಾರಿಗೆ ಬರುತ್ತದೆ ಎಂಬ ಬಗ್ಗೆಯೂ ತಿಳಿಸಬೇಕಿತ್ತು. ಇನ್ನು ಮಳಿಗೆಗಳಲ್ಲಿ ಪಿಒಎಸ್ (ಪಾಯಿಂಟ್ ಆಫ್ ಸೇಲ್ಸ್) ಮಷೀನ್ ಕಡ್ಡಾಯಗೊಳಿಸಬೇಕು. ಇಲ್ಲದಿದ್ದರೆ ಒಮ್ಮೆ ಎರಡು ಸಾವಿರ ರುಪಾಯಿಯನ್ನು ಎಟಿಎಂನಲ್ಲಿ ವಿಥ್ ಡ್ರಾ ಮಾಡಬಹುದೇನೋ ನಿಜ. ಹತ್ತು ಸಾವಿರ ರುಪಾಯಿಗೆ ಎಷ್ಟು ಸಲ, ಎಷ್ಟು ಸಮಯ?

ಸ್ಮಾರ್ಟ್ ಫೋನ್ ಕಡ್ಡಾಯವಾಗಿ ಖರೀದಿಸಿ, ವೈಯಕ್ತಿಕ ಮಾಹಿತಿ ನೀಡಬೇಕು

ಇಡೀ ದೇಶದಲ್ಲಿ ವ್ಯವಹಾರಗಳು ನಡೆಯುತ್ತಿರುವುದೇ ಹೀಗೆ ಇವರದೇನು ಸ್ಪೆಷಲ್ ಅಂತ ಕೆಲವರಿಗೆ ಅನಿಸಬಹುದು. ಸರಿ, ಪೇಟಿಎಂ, ಗೂಗಲ್ ಪೇಗೆ ಸ್ಮಾರ್ಟ್ ಫೋನ್ ಬೇಕೇ ಬೇಕು, ಜತೆಗೆ ಆ ಅಪ್ಲಿಕೇಷನ್ ಗಳನ್ನು ಡೌನ್ ಲೋಡ್ ಮಾಡಿಕೊಂಡಿರಬೇಕು. ಅವುಗಳಿಗೆ ಬ್ಯಾಂಕ್ ಖಾತೆ ಮಾಹಿತಿಯೂ ಸೇರಿದ ಹಾಗೆ ಆಧಾರ್, ಪ್ಯಾನ್ ಕಾರ್ಡ್ ಮಾಹಿತಿ ನೀಡಬೇಕು.

ಇಷ್ಟೆಲ್ಲ ಅವಲಂಬನೆಯನ್ನು ಸರ್ಕಾರ ಕೂಡ ಉತ್ತೇಜನ ಮಾಡುತ್ತದೆ ಅಂದರೆ ಹೇಗೆ? ಇನ್ನು ಡೆಬಿಟ್ ಕಾರ್ಡ್- ಕ್ರೆಡಿಟ್ ಕಾರ್ಡ್ ಬಳಸಿದರೆ ನಮಗೆ ಚಾರ್ಜ್ ಬೀಳುತ್ತದೆ ಎನ್ನುತ್ತಾರಲ್ಲ, ಅಂಗಡಿಯವರು ಅದರಲ್ಲಿ ಎಷ್ಟು ಸತ್ಯವಿದೆಯೋ ಗೊತ್ತಿಲ್ಲ.

English summary
Recent development has raising question that, is government pushing people to use Paytm, Google Pay and other such payment mode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X