• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಕಿಯಲ್ಲಿ ಭಸ್ಮವಾದ ಕಾರುಗಳು: ಮಾಲೀಕರಿಗೆ ವಿಮಾ ಮೊತ್ತ ಸಿಗುತ್ತಾ?

|

ಬೆಂಗಳೂರು, ಫೆಬ್ರವರಿ 23: ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನೋಡಲೆಂದು ಬಂದಿದ್ದ ಪ್ರೇಕ್ಷಕರ ಕಾರುಗಳು ಬೆಂಕಿಯಲ್ಲಿ ಸುಟ್ಟು ಭಸ್ಮವವಾಗಿವೆ ಹಾಗಾದರೆ ಕಾರುಗಳಿಗೆ ವಿಮೆ ಸಿಗುತ್ತಾ, ಪಡೆಯುವುದು ಹೇಗೆ ಎನ್ನುವುದನ್ನು ನೋಡೋಣ..

ಘಟನೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಕಾರುಗಳು ಬೆಂದು ಹೋಗಿವೆ. ಏರೋ ಇಂಡಿಯಾ ಶೋ ಪಾರ್ಕಿಂಗ್‌‍ನಲ್ಲಿನ ಬೆಂಕಿ ಅವಘಡ ಆಕಸ್ಮಕವಾಗಿ ಸಂಭವಿಸಿದೆ. ಇದು ಕಾರಿನಿಂದಾಗಿ ಅಥವಾ ಮಾಲೀಕರಿಂದಾಗಿ ನಡೆದ ಅನಾಹುತವಲ್ಲ. ಈ ಕಾರುಗಳಿಗೆ OD(Own damage) ಅಥವಾ Natural Disasters ವಿಮೆ ಅಡಿಯಲ್ಲಿ ಮಾಲೀಕರಿಗೆ ಮೊತ್ತ ಸಿಗಲಿದೆ.

ಏರೋ ಇಂಡಿಯಾ : ಅಗ್ನಿಯ ಆಕ್ರೋಶಕ್ಕೆ ಬಲಿಯಾದ ವಾಹನಗಳೆಷ್ಟು?

ಏರೋ ಇಂಡಿಯಾಕ್ಕೆ ತೆರಳುವ ಗೇಟ್‌ ನಂಬರ್ 5ರ ಬಳಿ ಇರುವ ಪಾರ್ಕಿಂಗ್‌ನಲ್ಲಿ ಘಟನೆ ಸಂಭವಿಸಿದೆ. ಮೋಟಾರು ವಾಹನ ಕಾಯ್ದೆ ಪ್ರಕಾರ ಎಲ್ಲ ವಾಹನಗಳ ಮಾಲೀಕರು ಥರ್ಡ್ ಪಾರ್ಟಿ ಒಳಗೊಳ್ಳುವಂತಹ ವಿಮೆ ಮಾಡಿಸಬೇಕು.

ಕಾನೂನಿನ ಪ್ರಕಾರ ವಿಮೆ ಕಡ್ಡಾಯ. ಒಂದು ವೇಳೆ ಅಪಘಾತವಾದಾಗ ವ್ಯಕ್ತಿಯ ಸುರಕ್ಷತೆ ಮತ್ತು ಆತನಿಗೆ ಪರಿಹಾರ ಕೊಡುವುದು ವಿಮೆಯಲ್ಲಿ ಮುಖ್ಯ. ಅಲ್ಲದೆ ಇದರಿಂದ ಮೂರನೇ ವ್ಯಕ್ತಿಗೆ ನೈಸರ್ಗಿಕ ರಕ್ಷಣೆಯೂ ಸಿಗುತ್ತದೆ.

ಸೀಮಿತ ಅವಧಿವರೆಗೆ ಚಾಲ್ತಿಯಲ್ಲಿದ್ದ ವಿಮಾ ಅವಧಿ ಮೀರುವುದರೊಳಗಾಗಿ ವಿಮೆಯನ್ನು ನವೀಕರಿಸಬೇಕು. ಇದರಿಂದ ಅನಿರೀಕ್ಷಿತವಾಗಿ ಕಾರುಗಳಿಗೆ ಆಗುವ ಹಾನಿ/ ನಷ್ಟವನ್ನು ಭರಿಸಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ವೇಳೆ ಪಾಲಿಸಿಯ ಅವಧಿ ಮುಗಿದು ಹೋಗಿದ್ದರೆ ಹೊಸ ಪಾಲಿಸಿ ಮಾಡಿಸಬೆಕಾಗುತ್ತದೆ.

ಆಗ ವಿಮೆ ನೀಡುತ್ತಿರುವ ಸಂಸ್ಥೆಯ ಅಧಿಕಾರಿಗಳು ನಿಮ್ಮ ಕಾರಿನ ಭೌತಿಕ ಸ್ಥಿತಿಗತಿಯನ್ನು ಪರೀಶೀಲನಗೆ ಒಳಪಡಿಸಿ ವಿಮೆಗೆ ಶಿಫಾರಸ್ಸು ಮಾಡುತ್ತಾರೆ. ಆಗ ವಿಮೆ ಎನ್‌ಸಿಬಿಯ ನಿಯಮಗಳಂತೆ ಚಾಲ್ತಿ ಪಡೆದುಕೊಳ್ಳುತ್ತದೆ.

ಕೆಲ ವಿಮಾ ಕಂಪೆನಿಗಳಿಗೆ ಮಾಲೀಕರು ಹಣ ಕ್ಲೈಮ್ ಮಾಡಲು ಕ್ಲೈಮ್ ಫಾರ್ಮ್ ಜೊತೆಗೆ FIR(First Information reprt) ಕಾಪಿ ಕೂಡ ನೀಡಬೇಕು. ಕಾರು ಮಾಲೀಕರು FIR ದಾಖಲಿಸಬೇಕು.

ಬಳಿಕ ವಿಮೆ ಕಂಪೆನಿಗೆ ಕ್ಲೈಮ್ ಮಾಡಬೇಕು. ಆಯಾ ವಿಮಾ ಕಂಪೆನಿ ಇನ್ವಿಸ್ಟಿಗೇಶನ್ ನಡೆಸುತ್ತೆ. ಇದರ ಗರಿಷ್ಠ ಅವಧಿ 20 ರಿಂದ 30 ದಿನ. 30 ದಿನದ ಬಳಿಕ ವಿಮಾ ಕಂಪೆನಿ ಕಾರಿನ IDV ಮೊತ್ತದ ಗರಿಷ್ಠ 80 ರಿಂದ 90 ಶೇಕಡಾ ಮೊತ್ತವನ್ನ ಕಾರಿನ ಮಾಲೀಕರಿಗೆ ನೀಡುತ್ತೆ.

ಒಂದು ವೇಳೆ ಅಪಘಾತವಾಗಿ ಕಾರು ಹಾನಿಯಾದರೆ ಅಥವಾ ವ್ಯಕ್ತಿಗಳಿಗೆ ಗಾಯ, ಮರಣ ಅಥವಾ ಆಸ್ತಿಗಳಿಗೆ ನಷ್ಟವುಂಟಾದಲ್ಲಿ ಕೂಡಲೇ ಪೋಲಿಸರಿಗೆ ತಿಳಿಸಬೇಕು. ಜತೆಗೆ ವಿಮೆ ನೀಡಿದ ಸಂಸ್ಥೆಗೆ ಮಾಹಿತಿ ನೀಡಿ ವಿಮಾ ಪರಿಹಾರ ವೊತ್ತವನ್ನು ನೀಡುವಂತೆ ಕೋರಿ ಅರ್ಜಿ ಹಾಕಬೇಕಾಗುತ್ತದೆ.

English summary
There are many questions about car insurance which destroyed in fire. Clear answer is owner will get the IDV after 20-30 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more