ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಮತ್ತೊಂದು ಫ್ಲೈ ಓವರ್‌ನಲ್ಲಿ ಗುಂಡಿ

|
Google Oneindia Kannada News

ಬೆಂಗಳೂರು, ನವೆಂಬರ್ 04 : ಸುಮನಹಳ್ಳಿ ಫ್ಲೈ ಓವರ್‌ನಲ್ಲಿ ಗುಂಡಿ ಕಾಣಿಸಿಕೊಂಡು ವಾಹನ ಸಂಚಾರ ಬಂದ್ ಮಾಡಲಾಗಿದೆ. ಬೆಂಗಳೂರು ನಗರದ ಮತ್ತೊಂದು ಫ್ಲೈ ಓವರ್‌ ಮೇಲೆ ಕಬ್ಬಿಣದ ರಾಡ್ ಹೊರಬಂದಿದ್ದು, ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಇಎಲ್ ರಸ್ತೆ- ತುಮಕೂರು ರಸ್ತೆ ಸಂಪರ್ಕಿಸುವ ಗೊರಗುಂಟೆಪಾಳ್ಯ ಫ್ಲೈ ಓವರ್‌ನಲ್ಲಿ ಗುಂಡಿ ಬೀಳುವ ಆತಂಕ ಎದುರಾಗಿದೆ. ರಸ್ತೆಯ ಡಾಂಬರ್ ಹಲವು ಅಡಿಗಳಷ್ಟು ಕಿತ್ತು ಬಂದಿದ್ದು, ಕಬ್ಬಿಣದ ರಾಡ್ ಕಾಣುತ್ತಿದೆ.

ಸುಮನಹಳ್ಳಿ ಫ್ಲೈ ಓವರ್‌ನಲ್ಲಿ ಗುಂಡಿ, ಸಂಚಾರ ದಟ್ಟಣೆ ಸುಮನಹಳ್ಳಿ ಫ್ಲೈ ಓವರ್‌ನಲ್ಲಿ ಗುಂಡಿ, ಸಂಚಾರ ದಟ್ಟಣೆ

ಗೊರಗುಂಟೆಪಾಳ್ಯ ಫ್ಲೈ ಓವರ್ ನಿರ್ವಹಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೋಡಿಕೊಳ್ಳುತ್ತಿದೆ. ಸತತವಾಗಿ ಸುರಿದ ಮಳೆಯಿಂದಾಗಿ ಡಾಂಬರ್ ಕಿತ್ತು ಹೋಗಿತ್ತು. ಶನಿವಾರ ರಾತ್ರಿಯೇ ಅದನ್ನು ಸರಿಪಡಿಸುವ ಕೆಲಸವನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ ಬೆಂಗಳೂರಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ

Iron Rods Exposed On Gorguntepalya flyover

ಈಗಾಗಲೇ ಸಮನಹಳ್ಳಿ ಫ್ಲೈ ಓವರ್‌ನಲ್ಲಿ ಗುಂಡಿ ಕಾಣಿಸಿಕೊಂಡಿದ್ದು, ವಾಹನ ಸಂಚಾರವನ್ನು 10 ದಿನಗಳ ಕಾಲ ಬಂದ್ ಮಾಡಲಾಗಿದೆ. ತಜ್ಞರ ತಂಡ ಸೋಮವಾರ ಸುಮನಹಳ್ಳಿ ಫ್ಲೈ ಓವರ್ ವೀಕ್ಷಣೆ ಮಾಡಲಿದ್ದು, ಗುಂಡಿಯನ್ನು ಯಾವ ರೀತಿ ಮುಚ್ಚಬೇಕು ಎಂದು ಸೂಚನೆ ನೀಡಲಿದೆ.

ಶಿವಮೊಗ್ಗ-ತುಮಕೂರು 6 ಪಥದ ರಸ್ತೆ ಕಾಮಗಾರಿ ಶೀಘ್ರ : ಈಶ್ವರಪ್ಪ ಶಿವಮೊಗ್ಗ-ತುಮಕೂರು 6 ಪಥದ ರಸ್ತೆ ಕಾಮಗಾರಿ ಶೀಘ್ರ : ಈಶ್ವರಪ್ಪ

ಬೆಂಗಳೂರು ನಗರದಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿವೆ. ಬಿಬಿಎಂಪಿ ಹಗಲುರಾತ್ರಿ ಎನ್ನದೇ ಗುಂಡಿ ಮುಚ್ಚುವ ಕೆಲಸವನ್ನು ಕೈಗೊಂಡಿದೆ. ನವೆಂಬರ್ 10ರೊಳಗೆ ನಗರದ ರಸ್ತೆಗಳನ್ನು ಗುಂಡಿ ಮುಕ್ತ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವರಾಗಿದ್ದಾರೆ. "ಬೆಂಗಳೂರು ನಗರದ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ. ನಗರದಲ್ಲಿ ಮೂಲ ಸೌಕರ್ಯದ ವ್ಯವಸ್ಥೆ ಮಾಡಲು ಅಗತ್ಯ ಅನುದಾನ ನೀಡಲಾಗಿದೆ" ಎಂದು ಅವರು ಹೇಳಿದ್ದಾರೆ.

English summary
After Sumanahali flyover iron rods exposed on the Gorguntepalya flyover. The flyover connects BEL Road to Tumakuru Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X