ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 'ಡಿಜಿಟಲ್' ಭಯೋತ್ಪಾದಕ? ಬಂಧಿತ ವ್ಯಕ್ತಿಗೆ ಪಾಕ್ ನಂಟು

|
Google Oneindia Kannada News

ಬೆಂಗಳೂರು, ಜನವರಿ 24: ಭಾರತೀಯ ರೈಲ್ವೆಗೆ ಡಿಜಿಟಲ್ ಭಯೋತ್ಪಾದಕರ ಕಾಟ ಎದುರಾಗಿರುವ ಅನುಮಾನ ಉದ್ಭವಿಸಿದೆ.

ಐಆರ್‌ಸಿಟಿಸಿ ವೆಬ್‌ತಾಣವನ್ನು ಹ್ಯಾಕ್ ಮಾಡಿ ನಕಲಿ ಇ-ಬುಕಿಂಗ್ ಮಾಡುತ್ತಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನಿಗೆ ಭಯೋತ್ಪಾದಕ ಸಂಘಟನೆಯ ನಂಟು ಇರುವ ಬಗ್ಗೆ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಗುಂಡ್ಲುಪೇಟೆಯಲ್ಲಿ ಉಗ್ರರ ವಾಸ್ತವ್ಯದ ವರದಿ ಮಾಡಿದ ಪತ್ರಕರ್ತರಿಗೆ ಧಮ್ಕಿಗುಂಡ್ಲುಪೇಟೆಯಲ್ಲಿ ಉಗ್ರರ ವಾಸ್ತವ್ಯದ ವರದಿ ಮಾಡಿದ ಪತ್ರಕರ್ತರಿಗೆ ಧಮ್ಕಿ

ಭಾರತೀಯ ರೈಲ್ವೆಯ ವೆಬ್‌ಸೈಟ್ (ಐಆರ್‌ಸಿಟಿಸಿ) ಖನ್ನ ಹಾಕಿ ಇ-ಟಿಕೆಟ್ ಬುಕಿಂಗ್ ಮಾಡಿ ಇಲಾಖೆಗೆ ನಷ್ಟ ಮಾಡುತ್ತಿದ್ದ ಗುಲಾಮ್ ಮುಸ್ತಫಾ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದು, ಈತನಿಂದ ಲ್ಯಾಪ್‌ ಟಾಪ್, ಮೊಬೈಲ್ ಸೇರಿ ಇನ್ನೂ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

IRCTC Website Hacker Arrested In Bengaluru

ರಾಜಗೋಪಾಲನಗರದ ಮಸೀದಿ ಒಂದರಿಂದ ಈತ ಈ ಚಟುವಟಿಕೆಗಳನ್ನು ನಡೆಸಿದ್ದನಂತೆ. ಕಳೆದ ಎರಡು ವರ್ಷಗಳಿಂದ ಐಆರ್‌ಸಿಟಿಸಿ ವೆಬ್‌ಸೈಟ್ ಬಗ್ಗೆ ಮತ್ತು ಅದರಲ್ಲಿರುವ ಕೊರತೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾನೆ.

ಬೆಂಗಳೂರು; ಶಂಕಿತ ಉಗ್ರರು 10 ದಿನ ಸಿಸಿಬಿ ವಶಕ್ಕೆಬೆಂಗಳೂರು; ಶಂಕಿತ ಉಗ್ರರು 10 ದಿನ ಸಿಸಿಬಿ ವಶಕ್ಕೆ

ಈತನು ಡಾರ್ಕ್‌ವೆಬ್ ಮೂಲಕ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕೆಲವರೆಡೆ ಸಂಪರ್ಕ ಹೊಂದಿದ್ದು, ಭಯೋತ್ಪಾದನೆ ಸಂಘಟನೆಗಳೊಂದಿಗೂ ಲಿಂಕ್ ಹೊಂದಿದ್ದ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

ಅವಳು ಕಾಂಡೋಮ್ ಹಾಕಬೇಕು ಎಂದಿದ್ದಕ್ಕೆ ಕೊಲೆಯನ್ನೇ ಮಾಡಿದ..!ಅವಳು ಕಾಂಡೋಮ್ ಹಾಕಬೇಕು ಎಂದಿದ್ದಕ್ಕೆ ಕೊಲೆಯನ್ನೇ ಮಾಡಿದ..!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಒಡಿಸ್ಸಾದಲ್ಲಿ ಭಯೋತ್ಪಾದಕ ಕೃತ್ಯ ನಡೆಸಿದವರ ಜೊತೆ ಈತ ನಂಟು ಹೊಂದಿದ್ದಾನೆ ಎನ್ನಲಾಗಿದೆ. ಈತನ ಡಿಜಿಟಲ್ ಫುಟ್ ಪ್ರಿಂಟ್ ನ ತನಿಖೆ ನಡೆಸಲಾಗುತ್ತಿದೆ.

English summary
IRCTC website hacker arrested in Bengaluru. He had connections with terrorist organizations police investigation says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X