ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡದಲ್ಲಿ ಉಗುಳಿದರೆ 500 ರೂ ದಂಡ, ಇಂಗ್ಲಿಷಿನಲ್ಲಿ ಉಗುಳಿದರೆ 100 ರೂ.

|
Google Oneindia Kannada News

ಬೆಂಗಳೂರು, ಜುಲೈ 26: ಕನ್ನಡದಲ್ಲಿ ಉಗುಳಿದರೆ 500 ರೂ, ಇಂಗ್ಲಿಷ್‌ನಲ್ಲಿ ಉಗುಳಿದರೆ 100 ರೂ. ಇದೇನಪ್ಪಾ ಎಂದು ಯೋಚಿಸುತ್ತಿದ್ದೀರಾ, ಬಿಎಂಟಿಸಿಯ ಬ್ಯಾನರ್ ನೋಡಿ ಎಲ್ಲರಿಗೂ ಆಶ್ಚರ್ಯವಾಗಿರುವುದಂತೂ ಸತ್ಯ.

ಬಿಎಂಟಿಸಿ ಭಾಷಾ ಶುದ್ಧತೆಯನ್ನು ಐಪಿಎಸ್ ಅಧಿಕಾರಿ ಡಿ ರೂಪಾ ಬಿಚ್ಚಿಟ್ಟಿದ್ದಾರೆ.ಬಿಎಂಟಿಸಿಯು ಸಾಮಾಜಿಕ, ಸ್ವಚ್ಛತಾ ಕಳಕಳಿಯಿಂದ ಒಂದು ಬ್ಯಾನರ್ ಹಾಕಿದೆ. ಇಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದಲ್ಲಿ 500 ರೂ ದಂಡ ವಿಧಿಸಲಾಗುವುದು ಎಂದು ಬರೆದಿದೆ.

ಆದರೆ ಅದರ ಕೆಳಗೆ ಇಂಗ್ಲಿಷ್‌ನಲ್ಲಿ ಬರೆಯಲಾಗಿದ್ದು ಅದನ್ನೇ ತರ್ಜುಮೆ ಮಾಡಲಾಗಿದ್ದು, ಅದರಲ್ಲಿ ಇಲ್ಲಿ ಉಗುಳಿದರೆ 100 ರೂ ದಂಡ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.

IPS Officer Roopa Took Dig at BMTC Over Translation

ಅದಕ್ಕೆ ಕನ್ನಡದಲ್ಲಿ ಉಗುಳಿದರೆ 500 ರೂ ಇಂಗ್ಲಿಷ್‌ನಲ್ಲಿ ಉಗುಳಿದರೆ 100 ರೂ ನಾ ಎಂದು ಕಾಲೆಳೆದಿದ್ದಾರೆ. ಬಿಎಂಟಿಸಿಯ ಕಾಳಜಿ ಉತ್ತಮವಾದದ್ದೇ ಆದರೆ ಒಂದೇ ಬ್ಯಾನರ್‌ನಲ್ಲಿ ಒಂದೇ ವಿಷಯ ಬೇರೆ ಬೇರೆ ರೀತಿಯ ಅರ್ಥವನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.

ಬಿಎಂಟಿಸಿ ಭಾಷಾ ಶುದ್ಧತೆ ಬಗ್ಗೆ ಪ್ರಶ್ನೆ ಮಾಡಿದ್ದು, ನೀವು ಈ ಫಲಕವನ್ನು ಸರಿ ಮಾಡಿಕೊಳ್ಳಿ, ಇದರ ಅರ್ಥವೇ ಬದಲಾಗುತ್ತದೆ ಎಂದು ತಿಳಿ ಹೇಳಿದ್ದಾರೆ.

English summary
Ips officer D Roopa took dig at bmtc over it's translation of sign board, She says that you may correct this. It gives an impression that if you spit in Kannada, you are fined Rs 500 and if you spit in English, you are fined Rs 100.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X