• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತಪ್ಪನಿಂದ ಕಿತ್ತಳೆ ಟೋಪಿ ಶಾಪ ವಿಮೋಚನೆ

By Mahesh
|

ಬೆಂಗಳೂರು, ಜೂ.2: ಕರ್ನಾಟಕದ ಕಲಿ ರಾಬಿನ್ ಉತ್ತಪ್ಪ ಐಪಿಎಲ್ 7 ಟೂರ್ನಿಯ ಅಂತಿಮ ಹಣಾಹಣಿಯಲ್ಲಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿರಬಹುದು ಆದರೆ, ಆರೆಂಜ್ ಕ್ಯಾಪ್ ಮಾತ್ರ ರಾಬಿನ್ ತಲೆಯಲ್ಲೇ ಉಳಿಯಿತು ಜತೆಗೆ ಐಪಿಎಲ್ 7 ಕಪ್ ಕೂಡಾ ಎತ್ತಿದರು ಈ ಮೂಲಕ ಕಿತ್ತಳೆ ಟೋಪಿಗೆ ಅಂಟಿದ್ದ ಶಾಪವನ್ನು ಕೊಡಗಿನ ಕುವರ ಕಳಚಿಹಾಕಿದ್ದಾನೆ.

ಇಂಡಿಯನ್ ಪ್ರಿಮಿಯರ್ ಲೀಗ್ ನ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸುವ ಆಟಗಾರನಿಗೆ ಕಿತ್ತಳೆ ಟೋಪಿ ನೀಡಲಾಗುತ್ತದೆ. ಈ ಟೋಪಿ ಧರಿಸಿದವರಿದ್ದ ತಂಡ ಇದುವರೆವಿಗೂ ಕಪ್ ಗೆದ್ದಿರಲಿಲ್ಲ. ಆದರೆ, ಬೆಂಗಳೂರು ಹುಡುಗ ರಾಬಿನ್ ಉತ್ತಪ್ಪ ಅವರು ಕೋಲ್ಕತ್ತಾ ಪರ ಟೂರ್ನಿಯುದ್ಧಕ್ಕೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಐಪಿಎಲ್ ಚಾಂಪಿಯನ್ ತಂಡದಲ್ಲಿ ಕಿತ್ತಳೆ ಟೋಪಿ ಧರಿಸಿ ಕುಣಿದಾಡಿದ್ದಾರೆ.

ಸ್ಕೋರ್ ಕಾರ್ಡ್ | ಪಂದ್ಯದ ವರದಿ ಓದಿ

ಐಪಿಎಲ್ 6ರ ಆವೃತ್ತಿಯಲ್ಲಿ ಕಿತ್ತಳೆ ಟೋಪಿ ಶಾಪ ವಿಮೋಚನೆಯಾಗುವ ನಿರೀಕ್ಷೆ ಇತ್ತು. ಆದರೆ, ಆರೇಂಜ್ ಕ್ಯಾಪ್ ಧರಿಸಿದ್ದ ಹಸ್ಸಿ ಅವರಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೊಮ್ಮೆ ಫೈನಲ್ ತನಕ ಬಂದು ಸೋತಿತ್ತು. ಆರೇಂಜ್ ಹಾಗೂ ಪರ್ಪಲ್ ಕ್ಯಾಪ್ ಎರಡೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒಲಿದಿತ್ತು. ಈ ಶಾಪದ ಜಾಡು ಹಿಡಿದು ಹೊರಟರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ವಿಂಡೀಸ್ ಆಟಗಾರ ಕ್ರಿಸ್ ಗೇಲ್ ಅವರಂತೂ ಆರೇಂಜ್ ಕ್ಯಾಪ್ ಶಾಪಕ್ಕೆ ಹೆಚ್ಚು ಬಾರಿ ಬಲಿಯಾಗಿದ್ದಾರೆ.

ಒಟ್ಟಾರೆ ರಾಬಿನ ನೈಜ ಪ್ರತಿಭೆ, ಅದೃಷ್ಟಬಲದಿಂದ ಕೆಕೆಆರ್ ತಂಡ ಪಂಜಾಬ್ ಮಣಿಸಿ ಎರಡನೇ ಬಾರಿ ಕಪ್ ಎತ್ತಿದೆ. ಆದರೆ, ಇದುವರೆವಿಗೂ ಆರೇಂಜ್ ಕ್ಯಾಪ್ ಧರಿಸಿ ನಿರಾಶೆ ಅನುಭವಿಸಿದವರ ಬಗ್ಗೆ ಮುಂದೆ ಓದಿ...

ಐಪಿಎಲ್ 7 ನಲ್ಲಿ ಉತ್ತಪ್ಪ ದಾಖಲೆಗಳ ಸುರಿಮಳೆ

ಐಪಿಎಲ್ 7 ನಲ್ಲಿ ಉತ್ತಪ್ಪ ದಾಖಲೆಗಳ ಸುರಿಮಳೆ

ಐಎಪಿಲ್ 7 ನಲ್ಲಿ ಕೆಕೆಆರ್ ಪರ ಇನ್ನಿಂಗ್ಸ್ ಆರಂಭಿಸಿದ ರಾಬಿನ್ ಉತ್ತಪ್ಪ 15 ಪಂದ್ಯಗಳಲ್ಲಿ 660 ರನ್ 83 ಅತ್ಯಧಿಕ ಸ್ಕೋರ್, 46.78 ರನ್ ಸರಾಸರಿ, 137.60 ಸ್ತ್ರೈಕ್ ರೇಟ್, 5 ಅರ್ಧಶತಕ ಗಳಿಸಿದ್ದಾರೆ.

* ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಚೆಚ್ಚಿದ್ದಾರೆ. (73), 18 ಸಿಕ್ಸರ್ಸ್

* ಸಚಿನ್ ನಂತರ ಕಿತ್ತಳೆ ಟೋಪಿ ಧರಿಸಿದ ಭಾರತದ ಎರಡನೇ ಆಟಗಾರ

* ವಿರಾಟ್ ಕೊಹ್ಲಿ ದಾಖಲೆ ಟೂರ್ನಿಯಲ್ಲಿ ಭಾರತೀಯ ಕ್ರಿಕೆಟರ್ ಗಳಿಸಿದ ಅಧಿಕ ಸ್ಕೋರ್ ಮುರಿದ ರಾಬಿನ್.

* 2008 ರಿಂದ ಇಲ್ಲಿ ತನಕ ರಾಬಿನ್ ಶ್ರೇಷ್ಠ ಸಾಧನೆ(660 ರನ್) ಇದಾಗಿದೆ. 83 ನಾಟೌಟ್ ಕೂಡಾ ರಾಬಿನ್ ವೈಯಕ್ತಿಕ ದಾಖಲೆಯಾಗಿದೆ.

* ಟೂರ್ನಿಯಲ್ಲಿ 10 ಬಾರಿ 40 ಪ್ಲಸ್ ಸ್ಕೋರ್ ಮಾಡಿ ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

PTI Photo by Shailendra Bhojak

2013ರ ಆರೇಂಜ್ ಕ್ಯಾಪ್ ಧರಿಸಿದ್ದ ಹಸ್ಸಿ

2013ರ ಆರೇಂಜ್ ಕ್ಯಾಪ್ ಧರಿಸಿದ್ದ ಹಸ್ಸಿ

2013: ಐಪಿಎಲ್ 6ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ ಆರಂಭಿಕ ಆಟಗಾರ ಮೈಕಲ್ ಹಸ್ಸಿ ಅವರು 733 ರನ್ ಚೆಚ್ಚಿ ಭರ್ಜರಿ ಸಾಧನೆ ಮಾಡಿದ್ದಾರೆ.ಇದು ಐಪಿಎಲ್ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ರನ್ ಗೆ ಸಮನಾಗಿದೆ.

17 ಪಂದ್ಯಗಳಲ್ಲಿ 3 ಬಾರಿ ನಾಟೌಟ್ ಆಗಿ ಉಳಿದು 129.50 ಸ್ಟೈಕ್ ರೇಟ್ ನೊಂದಿಗೆ 733 ರನ್ ಗಳಿಸಿದರು., ವೈಯಕ್ತಿಕ 95 ಅತಿ ಹೆಚ್ಚು ರನ್ ಆಗಿದೆ. ಆರ್ ಸಿಬಿಯ ಗೇಲ್ 708 ರನ್ ಗಳಿಸಿ ಸಮೀಪದ ಸ್ಪರ್ಧಿಯಾಗಿದ್ದರು.

2012ರ ನತದೃಷ್ಟ ಹೀರೋ ಕ್ರಿಸ್ ಗೇಲ್

2012ರ ನತದೃಷ್ಟ ಹೀರೋ ಕ್ರಿಸ್ ಗೇಲ್

2012: ಐಪಿಎಲ್ 5 ರಲ್ಲಿ ಕ್ರಿಸ್ ಗೇಲ್ ಮತ್ತೊಮ್ಮೆ ಭರ್ಜರಿ ಆಟ ಪ್ರದರ್ಶಿಸಿ ಮೊಟ್ಟ ಮೊದಲ ಬಾರಿಗೆ 700 ರನ್ ಗಡಿ ದಾಟಿದರು.733 ರನ್ ಬಾರಿಸಿದ ಗೇಲ್ ಈಗ ವೆಸ್ಟ್ ಇಂಡೀಸ್ ಗೆ ತೆರಳಿದ್ದರು.ಪ್ಲೇ ಆಫ್ ಗೆ ಆಡುವ ಅರ್ಹತೆಯನ್ನು ಆರ್ ಸಿಬಿ ಕಳೆದುಕೊಂಡಿತು.

ಚೆನ್ನೈ ಮತ್ತೊಮ್ಮೆ ಕಪ್ ಗಾಗಿ ಕೆಕೆಅರ್ ಜೊತೆ ಸೆಣೆಸಿತ್ತು. ಫೈನಲ್ ತಲುಪಿರುವ ಕೋಲ್ಕತ್ತಾ ತಂಡದ ನಾಯಕ ಗೌತಮ್ ಗಂಭೀರ್ ಟೂರ್ನಿಯಲ್ಲಿ 588 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರು. ಆದರೆ, ಐಪಿಎಲ್ ಕಪ್ ಎತ್ತುವಲ್ಲಿ ಗಂಭೀರ್ ಯಶಸ್ವಿಯಾದರು.

2011ರಲ್ಲಿ ಫೈನಲ್ ನಲ್ಲಿ ಆರ್ ಸಿಬಿಗೆ ಸೋಲು

2011ರಲ್ಲಿ ಫೈನಲ್ ನಲ್ಲಿ ಆರ್ ಸಿಬಿಗೆ ಸೋಲು

2011: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪದ್ಭಾಂದವ ವಿಂಡೀಸ್ ನ ಎಡಗೈ ಆಟಗಾರ ಕ್ರಿಸ್ ಗೇಲ್ 608 ರನ್ ಚೆಚ್ಚಿದರೂ ಫೈನಲ್ ನಲ್ಲಿ ಆರ್ ಸಿಬಿ ಸೋಲು ಕಂಡಿತ್ತು. ಚೆನ್ನೈ ಕಪ್ ಎತ್ತಿದರೆ ಗೇಲ್ ಆರೇಂಜ್ ಕಪ್ ಧರಿಸಿದ್ದರು.

ಸಚಿನ್ :ಕಿತ್ತಳೆ ಟೋಪಿ ಧರಿಸಿದ ಭಾರತೀಯ

ಸಚಿನ್ :ಕಿತ್ತಳೆ ಟೋಪಿ ಧರಿಸಿದ ಭಾರತೀಯ

2010: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅದ್ಭುತ ಆಟ ಪ್ರದರ್ಶಿಸಿ ಮುಂಬೈ ಇಂಡಿಯನ್ಸ್ ಪರ 618 ರನ್ ಗಳಿಸಿದ್ದರು. ಮೊಟ್ಟ ಮೊದಲ ಬಾರಿಗೆ ಬಲಗೈ ಬ್ಯಾಟ್ಸ್ ಮನ್ 600 ಗಡಿ ದಾಟಿ ಕಿತ್ತಳೆ ಟೋಪಿ ಧರಿಸಿದರು. ಆದರೆ, ಮುಂಬೈ ತಂಡ ಫೈನಲ್ ತಲುಪುವಲ್ಲಿ ವಿಫಲವಾಯಿತು.

ಡೆಕ್ಕನ್ ಗೆ ಅಚ್ಚರಿಯ ಗೆಲುವು, ಹೇಡನ್ ಗೆ ನಿರಾಶೆ

ಡೆಕ್ಕನ್ ಗೆ ಅಚ್ಚರಿಯ ಗೆಲುವು, ಹೇಡನ್ ಗೆ ನಿರಾಶೆ

2009: ಮತ್ತೊಮ್ಮೆ ಆಸ್ಟ್ರೇಲಿಯಾದ ಆಟಗಾರನ ತಲೆ ಮೇಲೆ ಕಿತ್ತಳೆ ಟೋಪಿ ಹತ್ತಿ ಕುಳಿತು ಕೊಂಡಿತ್ತು. ಐಪಿಎಲ್ ನ ಲಕ್ಕಿ ಟೀಮ್ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ಅದೃಷ್ಟಹೀನವಾಗಿ ಬಿಟ್ಟಿತು. ಚೆನ್ನೈ ಪರ ಆರಂಭಿಕ ಎಡಗೈ ಬ್ಯಾಟ್ಸ್ ಮನ್ ಮ್ಯಾಥ್ಯೂ ಹೇಡನ್ ಅವರು 572 ರನ್ ಗಳಿಸಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ಸೆಮಿಸ್ ನಲ್ಲಿ ಚೆನ್ನೈ ಹೊರಬಿದ್ದಿತ್ತು, ಡೆಕ್ಕನ್ ಚಾರ್ಜರ್ಸ್ ತಂಡ ಕಪ್ ಗೆದ್ದುಕೊಂಡಿತ್ತು.

ಶಾನ್ ಮಾರ್ಷ್ ಆಚ್ಚರಿಯ ಪ್ಯಾಕೇಜ್

ಶಾನ್ ಮಾರ್ಷ್ ಆಚ್ಚರಿಯ ಪ್ಯಾಕೇಜ್

2008: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಎಡಗೈ ಬ್ಯಾಟ್ಸ್ ಮನ್ ಶಾನ್ ಮಾರ್ಷ್ ಕಿತ್ತಳೆ ಟ್ರೋಪಿ ಧರಿಸಿದ್ದರು. ಕಿಂಗ್ಸ್ XI ಪಂಜಾಬ್ ತಂಡದ ಪರ ಆಡಿದ ಶಾನ್ 616 ರನ್ ಗಳಿಸಿದ್ದರು. ಆದರೆ, ಪಂಜಾಬ್ ಫೈನಲ್ ಕೂಡಾ ಪ್ರವೇಶಿಸಿರಲಿಲ್ಲ. ಬದಲಿಗೆ ರಾಜಸ್ಥಾನ ರಾಯಲ್ಸ್ ತಂಡ ಕಪ್ ಗೆದ್ದುಗೊಂಡಿತು. ಖಾಲಿ ಕೈಯಿಂದ ಆರೇಂಜ್ ಟೋಪಿಯೊಂದಿಗೆ ಶಾನ್ ಸ್ವದೇಶಕ್ಕೆ ಮರಳಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The curse of the Orange Cap was lifted at the M Chinnaswamy Stadium on Sunday night with KKR winning the IPL 7 trophy beating Kings XI Punjab. Never in the history of Indian Premier League, the winner of Orange Cap has gone on to pick up the trophy in the same season. But Robin Uthappa lifted the curse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more