ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಪಿಎಲ್ ಬೆಟ್ಟಿಂಗ್, ಸಿಸಿಬಿಯಿಂದ ಒಟ್ಟು 1.45 ಕೋಟಿ ರು ವಶ

|
Google Oneindia Kannada News

ಬೆಂಗಳೂರು ನ. 11: ಐಪಿಎಲ್ 2020 ಕ್ರಿಕೆಟ್‌ ಬೆಟ್ಟಿಂಗ್ ದಂಧೆ ವಿರುದ್ಧ ಸಿಸಿಬಿ ಪೊಲೀಸರ ಕಾರ್ಯಾಚರಣೆ ನಿರಂತರ ಮುಂದುವರೆದಿದೆ. ಐಪಿಎಲ್ ಪಂದ್ಯಾವಳಿಗಳು ಆರಂಭವಾದಾಗಿನಿಂದ ಈವರೆಗೂ 25 ಕೇಸು ದಾಖಲಿಸಿ 45 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಕೋಟಿ ಐವತ್ತು ನಾಲ್ಕು ಲಕ್ಷ ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್: ಮೂವರ ಬಂಧನ ಶಿವಮೊಗ್ಗದಲ್ಲಿ ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್: ಮೂವರ ಬಂಧನ

ಈ ವಿಷಯವನ್ನು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್ ತಿಳಿಸಿದ್ದಾರೆ. ಐಪಿಎಲ್ ಕ್ರಿಕೆಟ್‌ ಪಂದ್ಯಾವಳಿ ಹೆಸರಿನಲ್ಲಿ ಆನ್‌ಲೈನ್‌ ವೇದಿಕೆಗಳಲ್ಲಿ ಸಹ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದು, ಬೆಟ್ಟಿಂಗ್ ಆಫ್‌ಗಳ ಮೇಲೂ ನಿಗಾ ವಹಿಸಲಾಗಿದೆ. ಬೆಟ್ಟಿಂಗ್ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಲಾಗುತ್ತಿದೆ.

IPL Betting racket busted Rs 1.45 Cr seized, 45 arrested

ಬೆಟ್ಟಿಂಗ್ ಮತ್ತೊಬ್ಬ ಸೆರೆ:

Recommended Video

BJP ನ ಒಣಗಿದ ಮರಕ್ಕೆ ಹೋಲಿಸಿದ Digvijay singh!! | Oneindia Kannada

ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಆರ್.ಟಿ.ನಗರ ನಿವಾಸಿ ಕಿರಣ್ ಕುಮಾರ್‌ ಎಂಬಾತನನ್ನು ಬಂಧಿಸಿದ್ದು, ಆತನಿಂದ 15 ಲಕ್ಷ ರೂಪಾಯಿ ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಆರ್‌.ಟಿ ನಗರದ ಗಿಡ್ಡಪ್ಪ ಬ್ಲಾಕ್‌ನಲ್ಲಿ ತಂಗಿದ್ದ ಕಿರಣ್, ಆನ್‌ಲೈನ್‌ ಆಪ್‌ಗಳ ಮೂಲಕ ಬೆಟ್ಟಿಂಗ್ ಮಾಹಿತಿ ಪಡೆದು ಮೊಬೈಲ್‌ ಹಾಗೂ ಮೊಬೈಲ್‌ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ಜೂಜು ಆಡಿಸುತ್ತಿದ್ದ. ನ. 11 ರಂದು ಮುಂಬಯಿ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಬಗ್ಗೆ ಬೆಟ್ಟಿಂಗ್ ಆಡುತ್ತಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಆರ್‌.ಟಿನಗರ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

English summary
IPL 2020 cricket Betting racket busted by Bengaluru CCB police Rs 1.45 Cr seized, 45 arrested and 25 cases booked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X