• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ವಿಟ್ಟರಲ್ಲಿ ಗುಣಗಾನ! ದೇವದತ್ ಅಭಿನವ ಯುವರಾಜ್ ಸಿಂಗ್!

|

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ನೇ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬ್ಯಾಟ್ ಬೀಸುತ್ತಿರುವ 20ರ ಹರೆಯದ ದೇವದತ್ ಪಡಿಕ್ಕಲ್ ಆಟವನ್ನು ಕಣ್ತುಂಬಿಕೊಂಡ ಕ್ರಿಕೆಟ್ ಪ್ರೇಮಿಗಳು ತುಂಬು ಹೃದಯದಿಂದ ಯುವಪ್ರತಿಭೆಗೆ ಶುಭ ಹಾರೈಸಿದ್ದಾರೆ.

ಮೊದಲ ಪಂದ್ಯವಾಡಿದ ಕರ್ನಾಟಕದ ದೇವದತ್ ಪಡಿಕ್ಕಲ್ ಮಿಂಚಿನ ಆಟದ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಮೊದಲ ಪಂದ್ಯದಲ್ಲೆ 50ಪ್ಲಸ್ ರನ್ ಸ್ಕೋರ್ ಮಾಡಿ, ಈ ಸಾಧನೆ ಮಾಡಿದ ಹಲವು ದಿಗ್ಗಜರ ಸಾಲಿಗೆ ಸೇರಿದ್ದಾರೆ. ದೇವದತ್ ಪಡಿಕ್ಕಲ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಂದ ಟ್ವೀಟ್ ಗಳ ಸಂಗ್ರಹ ಇಲ್ಲಿದೆ.

ಐಪಿಎಲ್ ಮೊದಲ ಪಂದ್ಯದಲ್ಲಿ 50+: ಮೆಕಲಮ್‌ನಿಂದ ದೇವದತ್ ತನಕ

2019ರ ದೇಶಿ ಸೀಸನ್ ನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಮೆಂಟ್, ವಿಜಯ್ ಹಜಾರೆ 50 ಓವರ್ ಗಳ ಟೂರ್ನಮೆಂಟ್, ರಣಜಿ, ಕೆಂಪು, ಬಿಳಿ ಎಲ್ಲ ಚೆಂಡುಗಳನ್ನು ಚೆಚ್ಚಿ ರನ್ ಹೊಳೆ ಹರಿಸಿದ್ದ ಪಡಿಕ್ಕಲ್ ಸಾಮರ್ಥ್ಯದ ಬಗ್ಗೆ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತೇ ಇದೆ. ಆದರೆ ಇಂದು ಐಪಿಎಲ್ 13ರ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಓಪನರ್ ಆಗಿ ಕಣಕ್ಕಿಳಿದು ಭರ್ಜರಿ ಆರಂಭ ಪಡೆದುಕೊಂಡರು.

 ಪ್ರತಿ ಹಂತದಲ್ಲೂ ದಾಖಲೆ ಬರೆದಿರುವ ದೇವದತ್

ಪ್ರತಿ ಹಂತದಲ್ಲೂ ದಾಖಲೆ ಬರೆದಿರುವ ದೇವದತ್

20 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್ ಮನ್ ಪಡಿಕ್ಕಲ್ ಅವರು 42 ಎಸೆತಗಳಲ್ಲಿ 56ರನ್ (8 ಬೌಂಡರಿ) ಚೆಚ್ಚಿದರು. ಪಡಿಕ್ಕಲ್ ಅವರು ಐಪಿಎಲ್ ಗೂ ಮುನ್ನ ಪ್ರಥಮ ದರ್ಜೆ, ಲಿಸ್ಟ್ ಎ ಹಾಗೂ ಟಿ20 ಪಂದ್ಯ ಟೂರ್ನಮೆಂಟ್ ಗಳ ಮೊದಲ ಪಂದ್ಯದಲ್ಲೂ 50 ಪ್ಲಸ್ ರನ್ ಸ್ಖೋರ್ ಮಾಡಿದ ದಾಖಲೆ ಹೊಂದಿದ್ದಾರೆ.

ಯುವರಾಜ್ ಸಿಂಗ್ ನೋಡಿದಂತೆ ಆಗುತ್ತದೆ

ಯುವರಾಜ್ ಸಿಂಗ್ ಬಹುಶಃ ಮೊದಲ ಪಂದ್ಯವಾಡಿದಾಗ ಇದೇ ರೀತಿ ಚೆಂಡುಗಳನ್ನು ಮೈದಾನ ಎಲ್ಲೆಡೆ ಚೆಚ್ಚುತ್ತಿದ್ದರು. ದೇವದತ್ ನೋಡಿದರೆ ಯುವರಾಜ್ ಸಿಂಗ್ ಆಟ ನೆನಪಾಗುತ್ತದೆ. ಇಬ್ಬರು ಎತ್ತರ ನಿಲುವು, ತೀಕ್ಷ್ಣ ದೃಷ್ಟಿಯ ಮೊನಚು ಸ್ಟ್ರೈಕರ್ ಗಳಾಗಿದ್ದಾರೆ, ಭಾರತಕ್ಕೆ ಇಂಥ ಯುವಪ್ರತಿಭೆಯ ಅಗತ್ಯವಿದೆ

ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ?

ದೇವದತ್ ಆಟ ನೋಡಿ ಮನಸೋತ ಪ್ರೇಕ್ಷಕರು

ದೇವದತ್ ಆಟ ನೋಡಿ ಮನಸೋತ ಆರ್ ಸಿಬಿ ಅಪ್ಪಟ ಅಭಿಮಾನಿಗಳು, ಹಾಳಾದ ಕಣ್ಣು ಬೀಳದಂತೆ ದೃಷ್ಟಿ ತೆಗೆಯಬೇಕು, ಎಷ್ಟು ಚೆಂದ ಬ್ಯಾಟ್ ಮಾಡುತ್ತಾನೆ ಎಂದಿದ್ದಾರೆ.

ಭವಿಷ್ಯದ ತಾರೆ ಎಂದ ಟ್ವೀಟ್ ಲೋಕ

ಭವಿಷ್ಯದ ತಾರೆ ಎಂಬ ಪಟ್ಟವನ್ನು ಟ್ವೀಟ್ ಲೋಕ ಈಗಾಗಲೇ ಕಟ್ಟಿದೆ. ಕೆಲವರು ಮೊದಲ ಪಂದ್ಯದಲ್ಲೇ ಇಷ್ಟು ಹೊಗಳಿಕೆ ಬೇಡ, ಪ್ರತಿಭೆ ಇದೆ, ಅವಕಾಶ ಸಿಕ್ಕಿದೆ, ಇನ್ನಷ್ಟು ಇನ್ನಿಂಗ್ಸ್ ಚೆನ್ನಾಗಿ ಆಡಲಿ ಎಂದಿದ್ದಾರೆ. ಶಿವಂ ದುಬೆ ಮೊದ ಮೊದಲು ಆಡಲು ಬಂದಾಗ ಇದೇ ರೀತಿ ಯುವರಾಜ್ ಸಿಂಗ್ ರೀತಿ ಆಡುತ್ತಾರೆ ಎಂದು ಹೋಲಿಸಲಾಗಿತ್ತು. ಆದರೆ, ಪಡಿಕ್ಕಲ್ ಆಟ ನೋಡಿದರೆ 2007ರಲ್ಲಿ ಯುವಿ ಟಿ20 ವಿಶ್ವಕಪ್ ಇನ್ನಿಂಗ್ಸ್ ನೆನಪಾಗುತ್ತದೆ ಎಂದು ಅಭಿಮಾನಿಗಳು ಸ್ಮರಿಸಿದ್ದಾರೆ. ಕಾಮೆಂಟೆಟರ್ ಆಗಿರುವ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡಾ ದೇವದತ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ

English summary
IPL 2020: Here is how Twitter reacted to 20 year old Devdutt Padikkal’s sensational Debut innings who scored 50+ on IPL debut against SRH.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X