ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಲಿಯನೇರ್‌ಗಳ ಕಣ್ಣಿಗೆ ಬೀದಿನಾಯಿಗಳು ಬೀಳಂಗಿಲ್ಲ!

By ಮೈತ್ರಿಯಿ
|
Google Oneindia Kannada News

ಬೆಂಗಳೂರು, ಫೆಬ್ರವರಿ 04 : ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಬೀದಿ ನಾಯಿಗಳ ಕಾಟದಿಂದ ಮುಕ್ತಿ ಸಿಕ್ಕಿದೆ. ಆದರೆ, ಇದು ಎಲ್ಲಾ ಬಡಾವಣೆಗಳಲ್ಲೂ ಅಲ್ಲ. ಕೇವಲ ಅರಮನೆ ಮೈದಾನದ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾತ್ರ. ಇದಕ್ಕೆ ಕಾರಣ ಬಿಲಿಯನೇರ್‌ಗಳು!

ಅರಮನೆ ಮೈದಾನದಲ್ಲಿ ಮೂರು ದಿನಗಳ ಇನ್ವೆಸ್ಟ್ ಕರ್ನಾಟಕ 2016 ಸಮಾವೇಶಕ್ಕೆ ಚಾಲನೆ ಸಿಕ್ಕಿದ್ದು, ಕೋಟಿ-ಕೋಟಿ ರೂ.ಗಳ ಬಂಡವಾಳ ರಾಜ್ಯಕ್ಕೆ ಹರಿದುಬರುತ್ತಿದೆ. ಪ್ರತಿಷ್ಠಿತ ಸಮಾವೇಶಕ್ಕೆ ಬಂದಿರುವ ಬಿಲಿಯನೇರ್‌ಗಳ ಕಣ್ಣಿಗೆ ಬೀದಿನಾಯಿಗಳು ಬೀಳದಂತೆ ಬಿಬಿಎಂಪಿ ವ್ಯವಸ್ಥೆ ಮಾಡಿದೆ. [ಚಿತ್ರ : ಅರಮನೆ ಮೈದಾನದಲ್ಲಿ ಉದ್ಯಮಿಗಳ ದಂಡು]

dog

ಇನ್ವೆಸ್ಟ್ ಕರ್ನಾಟಕ 2016 ಸಮಾವೇಶದ ವೇದಿಕೆ ಮತ್ತು ಸುತ್ತ-ಮುತ್ತಲಿನ ರಸ್ತೆಗಳಲ್ಲಿ ಅಡ್ಡಾಡಿಕೊಂಡಿದ್ದ 150ಕ್ಕೂ ಅಧಿಕ ಬೀದಿನಾಯಿಗಳನ್ನು ಕಾಯಲು ಬಿಬಿಎಂಪಿ ಜನರನ್ನು ನಿಯೋಜನೆ ಮಾಡಿದೆ. ಅಪ್ಪಿತಪ್ಪಿಯೂ ಬೀದಿ ನಾಯಿಗಳು ಅರಮನೆ ಮೈದಾನದ ಸುತ್ತ-ಮುತ್ತ ಕಾಲಿಡದಂತೆ ಕಣ್ಣಿಟ್ಟು ನೋಡಿಕೊಳ್ಳಲಾಗುತ್ತಿದೆ. [ಇನ್ವೆಸ್ಟ್‌ ಕರ್ನಾಟಕ : ಉದ್ಯಮಿಗಳು ಹೇಳಿದ್ದೇನು?]

ಸಮಾವೇಶಕ್ಕೆ ಆಗಮಿಸಿರುವ ಗಣ್ಯರಿಗೆ ಉದ್ಯಾನ ನಗರಿಯ ನಿಜವಾದ ಮುಖವನ್ನು ತೋರಿಸದಂತೆ ರಸ್ತೆಗಳಿಗೆ ಡಾಂಬರು ಬಳಿಯಲಾಗಿದೆ. ಫುಟ್‌ಪಾತ್ ದುರಸ್ತಿಗೊಳಿಸಲಾಗಿದೆ. ಅರಮನೆ ಮೈದಾನದ ಸುತ್ತಮುತ್ತಲಿದ್ದ ಬೀದಿನಾಯಿಗಳನ್ನು ಸ್ಥಳಾಂತರಗೊಳಿಸಲಾಗಿದೆ. ನಾಯಿಗಳು ಸಮಾವೇಶದ ವೇದಿಕೆ ಸುತ್ತಮುತ್ತ ಹೋಗದಂತೆ ವ್ಯವಸ್ಥೆ ಮಾಡಲಾಗಿದೆ. [ಬೆಂಗ್ಳೂರಲ್ಲಿ ಸಾಕು ನಾಯಿ ಸುಸು ಮಾಡಿದರೂ ದಂಡ ಕಟ್ಬೇಕು!]

ಭಿಕ್ಷುಕರು ಅತ್ತ ಸುಳಿಯುವಂತಿಲ್ಲ : ಬಿಬಿಎಂಪಿಯ ಸಿಬ್ಬಂದಿಗಳು ಬೀದಿ ನಾಯಿಗಳ ಮೇಲೆ ಕಣ್ಣಿಟ್ಟಿದ್ದರೆ ಪೊಲೀಸರು ಭಿಕ್ಷುಕರ ಮೇಲೆ ಕಣ್ಣಿಟ್ಟಿದ್ದಾರೆ. ಅರಮನೆ ಮೈದಾನದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಕಂಡು ಬರುತ್ತಿದ್ದ ಭಿಕ್ಷುಕರು ಅತ್ತ ಸುಳಿಯದಂತೆ ನೋಡಿಕೊಳ್ಳಲಾಗುತ್ತಿದೆ.

ಸಮಾವೇಶ ನಡೆಯುತ್ತಿರುವ ಸ್ಥಳದ ಸುತ್ತಮುತ್ತಲಿನ ರಸ್ತೆಗಳ ಸಿಗ್ನಲ್‌ಗಳಲ್ಲಿ ಹಲವು ಭಿಕ್ಷುಕರಿದ್ದರು. ಆದರೆ, ಸಮಾವೇಶಕ್ಕೆ ಚಾಲನೆ ಸಿಗುವ ಎರಡು ದಿನಗಳ ಮೊದಲೇ ಅವರನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗಿದೆ. ಮೂರು ದಿನಗಳ ಕಾಲ ಇತ್ತ ಸುಳಿದಾಡದಂತೆ ಪೊಲೀಸರು ಅವರಿಗೆ ಎಚ್ಚರಿಕೆ ನೀಡಿದ್ದಾರೆ.

English summary
Bruhat Bengaluru Mahanagara Palike (BBMP) officials were engaged to keep stray dogs out from Palace Grounds, the venue of the Invest Karnataka global business meet 2016. Reports suggest that the locality has around 150 stray dogs and organizers don’t want any dogs to come close to the venue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X