ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಚಯ: ಪಂಡಿತ್ ತರುಣ್ ಭಟ್ಟಾಚಾರ್ಯ, ವಿದುಷಿ ಬೀನಾ

ಪಂಡಿತ್ ತರುಣ್ ಭಟ್ಟಾಚಾರ್ಯ, ವಿದುಷಿ ಬೀನಾ ಸೇನ್ ಏಪ್ರಿಲ್ 1 ರಂದು, ಒಂದೇ ವೇದಿಕೆಯ ಮೇಲೆ ಕಚೇರಿ ಕೊಡಲಿದ್ದಾರೆ. ಭಾರತೀಯ ವಿದ್ಯಾ ಭವನದ ಖಿಂಚಾ ಸಭಾಂಗಣದಲ್ಲಿ ಸಂಜೆ 6 ಘಂಟೆಗೆ ಕಚೇರಿ ಆಯೋಜಿಸಲಾಗಿದೆ. ಇವರ ಪರಿಚಯಾತ್ಮಕ ಲೇಖನ ಇಲ್ಲಿದೆ

By ಅಶ್ವಿನಿ ಅನೀಶ್
|
Google Oneindia Kannada News

ಪಂಡಿತ್ ತರುಣ್ ಭಟ್ಟಾಚಾರ್ಯ, ವಿದುಷಿ ಬೀನಾ ಸೇನ್ ಏಪ್ರಿಲ್ 1 ರಂದು, ಒಂದೇ ವೇದಿಕೆಯ ಮೇಲೆ ಕಚೇರಿ ಕೊಡಲಿದ್ದಾರೆ. ಭಾರತೀಯ ವಿದ್ಯಾ ಭವನದ ಖಿಂಚಾ ಸಭಾಂಗಣದಲ್ಲಿ ಸಂಜೆ 6 ಘಂಟೆಗೆ ಕಚೇರಿ ಆಯೋಜಿಸಲಾಗಿದೆ. ಈ ಇಬ್ಬರು ಸಂಗೀತಗಾರರ ಪರಿಚಯಾತ್ಮಕ ಲೇಖನ ಇಲ್ಲಿದೆ.

ಪ್ಲೇಆನ್ ಇವೆಂಟ್ಸ್, ಸ್ಟೇಜ್ ಹಾಗು ಟ್ವಾಂಗ್ ಸಂಸ್ಥೆಯವರು ಆಯೋಜಿಸುತ್ತಿರುವ ಈ ಕಚೇರಿಗೆ ಉಚಿತ ಪ್ರವೇಶವಿದ್ದು, ಮೊದಲು ಬಂದವರಿಗೆ ಆಧ್ಯತೆ. ಹೆಚ್ಚಿನ ಮಾಹಿತಿಗಾಗಿ 99000 87990 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.

ಮೈಹರ್ ಘರಾನಾದ ಮೊದಲ ಸಂತೂರ್ ವಾದ್ಯಗಾರರಾದ ಪಂಡಿತ್ ತರುಣ್ ಭಟ್ಟಾಚಾರ್ಯ ಅವರು, "ಮನ್ಕಾಸ್ ಅಥವಾ ಶೃತಿ ಮಾಡುವ ಈ ಸಲಕರಣೆಯ ಪೇಟೆಂಟ್ ಪಡೆದಿದ್ದಾರೆ.

"ನೀವು ಯಾರಾದರು ಒಬ್ಬರು ಸಂತೂರು ವಾದ್ಯಗಾರರ ಸಂತೂರ್ ನಲ್ಲಿ ಇಂಥಾ ಮನ್ಕಾಸ್ ಕಂಡು ಬಂದಲ್ಲಿ, ಅದರ ಅರ್ಥ, ಅವರು ನನ್ನ ಶಿಷ್ಯರೆಂದು. ಈ ಮನ್ಕಾಸ್ ನನ್ನು ತಂತಿಗಳಿಗೆ ಅಳವಡಿಸಿ ನನ್ನಲ್ಲಿರುವ ಒಬ್ಬರು ಸಂತೂರ್ ತಯಾರಿಸುವ ಕಲಾವಿದರಲ್ಲಿ ಮಾಡಿಸುತ್ತೇನೆ," ಎನ್ನುತ್ತಾರೆ ತರುಣ್ ಭಟ್ಟಾಚಾರ್ಯ ಅವರು.

Interview of Pt Tarun Bhattacharya and Vidushi Smt Bina Sen

ಬಾಲ್ಯದಲ್ಲೇ ಸಂಗೀತದ ಬಗ್ಗೆ ಆಸಕ್ತಿ: ಸಂಗೀತಗಾರರ ವಂಶದಲ್ಲಿ ಹುಟ್ಟಿರುವ ಪಂಡಿತ್ ತರುಣ್ ಭಟ್ಟಾಚಾರ್ಯ ಅವರು ತಮ್ಮ ತಂದೆ ಹಾಗು ಗುರುಗಳಾದ ರೋಬಿ ಭಟ್ಟಾಚಾರ್ಯ ಅವರಿಂದ ಪ್ರಭಾವಿತರಾಗಿದ್ದರು. ಅವರ ತಂದೆ, ಒಬ್ಬರು ಸಿತಾರ್ ವಾದ್ಯಗಾರರು ಹಾಗು ಅವರ ತಾಯಿ, ಶೋವ ಭಟ್ಟಾಚಾರ್ಯ ಹಾಗು ಸಹೋದರಿ ಕೂಡ ಅವರ ತಂದೆಯ ಬಳಿ ಸಂಗೀತವನ್ನು ಕಲಿಯುತ್ತಿದ್ದರು.

ಸಣ್ಣ ವಯಸ್ಸಿಂದಲೇ ಸಂಗೀತದ ಬಗ್ಗೆ ಅಪಾರವಾದ ಶ್ರದ್ದೆ ಇದ್ದ ತರುಣ್ ಅವರು ಬಹಳಷ್ಟು ಸಮಯ ತಮ್ಮ ತಂದೆಯವರ ಸಂಗೀತ ಶಾಲೆಯಲ್ಲೇ ಕಳೆಯುತ್ತಿದ್ದರು.

ತಮ್ಮ ತಂದೆ ಪಂಡಿತ್ ರೋಬಿ ಭಟ್ಟಾಚಾರ್ಯ ಅಲ್ಲದೆ ಇವರು ಪಂಡಿತ್ ದುಲಾಲ ರಾಯ್ ಹಾಗು ಭಾರತ ರತ್ನ ಪುರಸ್ಕೃತ ಹಾಗು ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರಿಂದಲೂ ಸಂತೂರ್ ವಾದನವನ್ನು ಕಲಿತಿದ್ದಾರೆ.

"ನನಗೆ ಐದೂವರೆ ವರ್ಷಗಳಿದ್ದಾಗ ನನ್ನ ತಂದೆಯ ಶಾಲೆಯಲಿದ್ದ ಸಂಗೀತ ಅಭ್ಯಾಸಿಸುವ ಒಂದು ಸ್ಥಳದಲ್ಲಿ ಒಂದು ಸಣ್ಣ ಕಚೇರಿಯನ್ನು ನೀಡಿದ್ದೆ. ಆಗ ಅಲ್ಲಿ ಸುತ್ತ ಮುತ್ತ ಇದ್ದ ಜನರು ಬಂದು ಕುಳಿತು, ನನ್ನ ಸಂಗೀತ ಕೇಳಿ ಸ್ವಲ್ಪ ಹಣ ಹಾಗು ಚಾಕಲೇಟ್ ಕೊಟ್ಟಿದ್ದರು. ಆ ಸನ್ನಿವೇಶದಿಂದ ನಾನು ಸಂಗೀತ ಕಲಿಯ ಬೇಕೆಂಬ ಪ್ರೇರಣೆ ಆಗಿ ನಾನು ಅಂದಿನಿಂದ ನನ್ನನ್ನು ನಾನು ಸಂಗೀತಕ್ಕೆ ತೊಡಗಿಸಿಕೊಂಡೆ"

ಭಟ್ಟಾಚಾರ್ಯ ಅವರು ತಮ್ಮದೇ ಆದ ಸಂಗೀತ ಶಾಲೆ, 'ಸಂತೂರ್ ಆಶ್ರಮ' ದಲ್ಲಿ ಬಹಳಷ್ಟು ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಾರೆ. ಬಡ ಮಕ್ಕಳಿಗೆ ಉಚಿತವಾಗೇ ಪಾಠವನ್ನು ಹೇಳಿಕೊಡುತ್ತಾರೆ ಹಾಗು ಇಲ್ಲಿಗೆ ಸಂಗೀತ ಕಲಿಯಲು ಬರುವ ಬೇರೆ ದೇಶದ ಜನರು ಈ ಬಡ ಮಕ್ಕಳಿಗೆ ದೇಣಿಗೆಯ ರೂಪದಲ್ಲಿ ಸಹಾಯ ಮಾಡುತ್ತಾರೆ.

ಸಂಗೀತವನ್ನು ಕಲಿತು, ಅದರಲ್ಲಿ ತಲ್ಲೀನರಾಗುವವರೆಗು ಯಾರೂ ಕಚೇರಿಯನ್ನು ಕೊಡಬಾರದೆಂದು ತರುಣ್ ಅವರು ಅಭಿಪ್ರಾಯ ಪಡುತ್ತಾರೆ. ಕೋಲ್ಕತ್ತಾದವರಾಗಿದ್ದರೂ, ದಕ್ಷಿಣ ಭಾರತದ ಹಲವೆಡೆ ತಮ್ಮ ಕಚೇರಿಗಳನ್ನು ಕೊಟ್ಟಿದ್ದರೂ ಸಹ, ಕಚೇರಿಗೆ ತಮಗೆ ಬಹಳ ಪ್ರಿಯವಾದ ಸ್ಥಳ ಎಂದರೆ ಬೆಂಗಳೂರು ಎನ್ನುತ್ತಾರೆ.
***

Interview of Pt Tarun Bhattacharya and Vidushi Smt Bina Sen

ವಿಧುಷಿ ಬೀನಾ ಸೇನ್ ಅವರಿಂದ ಶಾಸ್ತ್ರೋಕ್ತವಾದ ಠುಮರಿ ಗಾಯನ
ಅಪ್ಪಟ ಠುಮರಿ ಶೈಲಿಯಲ್ಲಿ ಹಾಡುವ ಕೆಲವೇ ಕೆಲವು ಶಾಸ್ತ್ರೀಯ ಸಂಗೀತಗಾರರಲ್ಲಿ ವಿದುಷಿ ಬೀನಾ ಸೇನ್ ಕೂಡ ಒಬ್ಬರು. ಇವರು ತಮ್ಮ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪಾಠವನ್ನು ತಮ್ಮ ಎರಡೂವರೆ ವರ್ಷದಲ್ಲಿದ್ದಾಗಲೇ ಜಮಶೇಡ್ಪುರ್ ನ ಕಿರಾನಾ ಘರಾನಾದ ಪಂಡಿತ್ ಚಂಡಿತರ್ಕಿಲ್ ಅವರಿಂದ ಕಲಿತು, ಠುಮರಿ ಹಾಗು ದಾದ್ರಾ ಶೈಲಿಯ ಸಂಗೀತಕ್ಕೆ, ಆಕಾಶವಾಣಿ ಕಲಾವಿದರಾಗಿದ್ದ ಪಂಡಿತ್ ಪ್ರತಿತಿ ಮೋಹನ್ ಮಜುಮ್ದಾರ್ ಅವರ ಮೂಲಕ ಪರಿಚಯಗೊಂಡರು.

"ನನಗೆ ಸಂಗೀತದಲ್ಲಿ ಸಾಧನೆ ಮಾಡ ಬೇಕೆಂದು ಪ್ರೇರಣೆಯಾಗಿದ್ದು, ಸ್ವಾಮಿ ತಪಾನಂದ ಅವರ 'ನಾದ ಬ್ರಹ್ಮ ಸಾಧನ' ಪುಸ್ತಕವನ್ನು ಓದಿ. ಇದು ಅವರ ಆತ್ಮಚರಿತ್ರೆ ಹಾಗು ಇವರು ಸಂಗೀತಗಾರಾಗುವ ಜೊತೆಗೆ ಶ್ರೀ ರಾಮಕೃಷ್ಣ ಪರಹಂಸರ ಪತ್ನಿಯಾದ ಶಾರದಾ ದೇವಿಯ ಶಿಷ್ಯರಾಗಿದ್ದರು.

ಸ್ವಾಮಿಜಿಯನ್ನು 'ನಾದ ಸಿದ್ಧ' ಎಂದು ಕರೆಯುತ್ತಿದ್ದರು ಹಾಗು ಅವರು ನನಗೆ 'ಮಂತ್ರ ಗುರು' ಆಗಿದ್ದರು. ಸಂಗೀತದ ಬಗ್ಗೆ ನನಗಿದ್ದ ಒಲವನ್ನು ಅರಿತು ನನ್ನನ್ನು ನನ್ನ ಗುರುಗಳಾದ ಪಂಡಿತ್ ಚಂದ್ರತಾರ್ಕಿಲ್ ಅವರ ಬಳಿ ಸಂಗೀತ ಪಾಠಕ್ಕೆ ಕರೆದುಕೊಂಡು ಹೋದರು," ಎನ್ನುತ್ತಾರೆ ವಿದುಷಿ ಬೀನ ಸೇನ್ ಅವರು.

ಠುಮರಿ ಹಾಗು ದಾದ್ರಾ ಶೈಲಿಯ ಸಂಗೀತದ ಬಗ್ಗೆ ವಿಶೇಷವಾದ ಆಸಕ್ತಿಯನ್ನು ಇಟ್ಟುಕೊಂಡು, ಅದರ ಕಲಿಕೆಗೆಂದು ವಿದುಷಿ ಶಿಪ್ರಾ ಬೋಸ್ ಅವರ ಜೊತೆಗಿದ್ದು ಈ ಶೈಲಿಯನ್ನು 12 ವರ್ಷಗಳ ಕಾಲ ಕಲಿತು, ತಮ್ಮ ಗುರುಮಾ ಅವರ ಜೊತೆ ಬಹಳಷ್ಟು ಸಂಗೀತ ಕಚೇರಿಗಳನ್ನು ಕೊಟ್ಟರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶಿಕ್ಷಕಿಯಾಗಿ ಸುಮಾರು 30 ವರ್ಷಗಳ ಅನುಭವವಿರುವ ಇವರು ಹಾಲಿ, ತಮ್ಮ ಹೈದರಾಬಾದಿನ ಮನೆಯಲ್ಲೇ ಸಂಗೀತ ಪಾಠವನ್ನು ಹೇಳಿಕೊಡುತ್ತಿದ್ದಾರೆ.

ಸಂಗೀತವನ್ನು ದಿನಕ್ಕೆ ಅರ್ಧ ಘಂಟೆ ಅಭ್ಯಾಸಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ ಹಾಗು ಮೆದುಳಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಈ ಆಧಾರದ ಮೇಲೆ, ಐಐಟಿ, ಬೆಂಗಳೂರು ಸಂಸ್ಥೆಯ ಆವರಣದಲ್ಲಿ ಸಂಗೀತದ ಶಾಲೆಯೊಂದನ್ನು ಆರಂಭಿಸಲಾಗಿದೆ," ಎನ್ನುತ್ತಾರೆ ಬೀನಾ ಸೇನ್ ಅವರು.

ಬೀನಾ ಅವರು ಇದೇ ಠುಮರಿ ವಿಚಾರದಲ್ಲಿ ಪಿ.ಎಚ್.ಡಿ ಯನ್ನು ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿನ ಡಾ.ತಪಸಿ ಘೋಶ್ ಅವರ ಬಳಿ ಮಾಡುತ್ತಿದ್ದಾರೆ.

English summary
Interview of Pt Tarun Bhattacharya and Vidushi Smt Bina Sen who are performing on April 1, 2017 at Khincha Auditorium, Bharatiya Vidya Bhavan, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X