ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾತಿ, ಮತಗಳನ್ನು ಮೀರಿದ ಆಚರಣೆ ಯೋಗ: ಅನಂತ್ ಕುಮಾರ್

|
Google Oneindia Kannada News

Recommended Video

International Yoga Day 2018 :ಯೋಗದ ಬಗ್ಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದು ಹೀಗೆ | Oneindia Kannada

ಬೆಂಗಳೂರು, ಜೂನ್ 21: ಪಿಇಎಸ್ ಕಾಲೇಜಿನ ಮೈದಾನದಲ್ಲಿ ಸಾವಿರಾರು ವಿದ್ಯಾರ್ಥಿಗಳ ಜತೆ ಕೇಂದ್ರ ಸಚಿವ ಅನಂತ್ ಕುಮಾರ್ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗಾಭ್ಯಾಸ ನಡೆಸಿದರು.

ಖ್ಯಾತ ಹಾಕಿ ಪಟು ಆಶಿಶ್ ಬಳ್ಳಾಲ್, ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ದೊರೆಸ್ವಾಮಿ ಸೇರಿದಂತೆ ಅನೇಕ ಪ್ರಮುಖರು ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.

ಬಿಜೆಪಿ ಕಚೇರಿಯಲ್ಲಿ ಯೋಗದ ಕಸರತ್ತು ನಡೆಸಿದ ಯಡಿಯೂರಪ್ಪಬಿಜೆಪಿ ಕಚೇರಿಯಲ್ಲಿ ಯೋಗದ ಕಸರತ್ತು ನಡೆಸಿದ ಯಡಿಯೂರಪ್ಪ

ಬಳಿಕ ಮಾತನಾಡಿದ ಸಚಿವ ಅನಂತ್ ಕುಮಾರ್, ಪ್ರಧಾನಿ ನರೇಂದ್ರ ಮೋದಿಯವರು ಯೋಗವನ್ನು ವಿಶ್ವ ವ್ಯಾಪಿಗೊಳಿಸಿದ್ದಾರೆ.
ಯೋಗ ದಿನದ ಆಚರಣೆಯ ಕುರಿತು ಮೋದಿ ಅವರು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿದ್ದರು.

international yoga day: union minister ananth kumar performs yoga

ಇದಕ್ಕೆ ಎಲ್ಲಾ 177 ದೇಶಗಳು ಅದಕ್ಕೆ ಮುಕ್ತವಾಗಿ ತಮ್ಮ ಆಚರಣೆ ಎಂಬಂತೆ ಬೆಂಬಲಿಸಿದವು. ಯೋಗ ಯಾವುದೇ ಜಾತಿಗೆ ಸಂಬಂಧಿಸಿದ್ದಲ್ಲ. ಅದು ಎಲ್ಲ ಜಾತಿ, ಮತ, ಪಂಥಗಳನ್ನು ಮೀರಿದ್ದು, ಜಗತ್ತಿನ ಆರೋಗ್ಯಕ್ಕೆ ಸಂಬಂಧಿಸಿದ್ದು ಎಂದು ಹೇಳಿದರು.

ಯೋಗ ನನ್ನ ಬಾಲ್ಯದಿಂದಲೂ ಜೀವನದಲ್ಲಿ ಹಾಸು ಹೊಕ್ಕಾಗಿದೆ. ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ಒತ್ತಡಗಳ ನಡುವೆ ನನ್ನ ಆರೋಗ್ಯವನ್ನು ಕಾಪಾಡಿರುವುದು ಯೋಗ.

international yoga day: union minister ananth kumar performs yoga

ನೀವು ಸಹ ನಿಮ್ಮ ಬದುಕಿನಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು. ಶ್ರೀಕೃಷ್ಣನ ಯೋಗ ಸೂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು. ಸ್ವಸ್ಥ ಮತ್ತು ಸಶಕ್ತ ಭಾರತಕ್ಕಾಗಿ ನಾವೆಲ್ಲರೂ ಸ್ವಸ್ಥರಾಗಬೇಕು ಎಂದು ಹೇಳಿದರು.

English summary
Union Minister Ananth Kumar said that the Yoga is has no boundary of caste or religion. It is beyond everything. He was performing Yoga at PES University in Bengaluru on the eve of International Yoga Day on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X