ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜು.25ರಿಂದ ಬೆಂಗಳೂರಿನಲ್ಲಿ ವೈನ್ ಮೇಳ

|
Google Oneindia Kannada News

ಬೆಂಗಳೂರು, ಜು. 23 : ಬೆಂಗಳೂರಿನಲ್ಲಿ ಜು.25ರಿಂದ ಎರಡು ದಿನಗಳ ಕಾಲ ಅಂತರಾಷ್ಟ್ರೀಯ ವೈನ್ ಮೇಳವನ್ನು ಆಯೋಜಿಸಲಾಗಿದೆ. ತೋಟಗಾರಿಕಾ ಇಲಾಖೆ ಮತ್ತು ಕರ್ನಾಟಕ ವೈನ್ ಬೋರ್ಡ್ ಜಂಟಿಯಾಗಿ ಈ ಮೇಳವನ್ನು ಆಯೋಜಿಸಿವೆ.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ವೈನ್ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಕೃಷ್ಣ ಅವರು ಅಂತರಾಷ್ಟ್ರೀಯ ವೈನ್ ಮೇಳದ ಬಗ್ಗೆ ಮಾಹಿತಿ ನೀಡಿದರು. ಜು.25ರಂದು ಸಂಜೆ 4.30ಕ್ಕೆ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ವೈನ್ ಮೇಳವನ್ನು ಉದ್ಘಾಟಿಸಲಿದ್ದಾರೆ.

Wine Festival

ಕರ್ನಾಟಕ ವೈನ್ ಬೋರ್ಡ್ ಮತ್ತು ತೋಟಗಾರಿಕಾ ಇಲಾಖೆ ಜಂಟಿಯಾಗಿ ಆಯೋಜಿಸಿರುವ ಈ ಮೇಳ ಜು.25ರಿಂದ 27ರ ತನಕ ಜಯಮಹಲ್ ಅರಮನೆ ಹೋಟೆಲ್ ಆವರಣದಲ್ಲಿ ನಡೆಯಲಿದೆ. 35ಕ್ಕೂ ಹೆಚ್ಚು ವೈನ್ ಉತ್ಪಾದಕರು ಮತ್ತು ಏಳು ಅಂತರಾಷ್ಟ್ರೀಯ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸಲಿವೆ.

ವೈನ್ ಉತ್ಪಾದಕರಿಗೆ ಆಧುನಿಕ ತಂತ್ರಜ್ಞಾನ, ಹನಿ ನೀರಾವರಿ ಮುಂತಾದವುಗಳ ಬಗ್ಗೆ ಎರಡು ದಿನಗಳ ಮೇಳದಲ್ಲಿ ಮಾಹಿತಿ ನೀಡಲಾಗುತ್ತದೆ. ಅದಕ್ಕಾಗಿ ಹಲವಾರು ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ವೈನ್ ಮೇಳಕ್ಕೆ 49 ರೂ.ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. ಹಾಪ್ ಕಾಮ್ಸ್ ಗಳಲ್ಲಿ ಪ್ರವೇಶ ಶುಲ್ಕದ ಟಿಕೆಟ್ ದೊರೆಯಲಿದೆ. [ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ]

ರಾಜ್ಯದಲ್ಲಿನ ವೈನ್ ಉತ್ಪಾದನೆ : ಕರ್ನಾಟಕದಲ್ಲಿ ಪ್ರತಿವರ್ಷ 3.21 ಲಕ್ಷ ಟನ್ ಗಳಷ್ಟು ದ್ರಾಕ್ಷಿ ಬೆಳೆಯಲಾಗುತ್ತಿದೆ. ಪ್ರತಿ ವರ್ಷ 51 ಲಕ್ಷ ಲೀಟರ್ ಮಾರಾಟ ಮಾಡಲಾಗುತ್ತಿದೆ ಎಂದು ಕೃಷ್ಣ ಅವರು ಮಾಹಿತಿ ನೀಡಿದರು.

English summary
Department of Horticulture and Karnataka Wine Board jointly Organized two days International Wine Festival in Bangalore. On July 25 Minister for Horticulture Shamanur Shivashankarappa will inaugurate the festival. For more details visit http://www.karnatakawineboard.com/.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X