ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರಗ್ಸ್ ಕೇಸ್: ವಿಚಾರಣೆ ಎದುರಿಸಿದ ನಟ ಯೋಗಿ, ಕ್ರಿಕೆಟರ್ ಅಯ್ಯಪ್ಪ

|
Google Oneindia Kannada News

ಬೆಂಗಳೂರು, ಸೆ. 21: ನಿಷೇಧಿತ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಕಾಯ್ದೆ(NDPS) ಅಡಿಯಲ್ಲಿ ಸಿಸಿಬಿ ತನಿಖೆ ನಡೆಸುತ್ತಿದೆ. ಇನ್ನೊಂದೆಡೆ ಎನ್ ಸಿಬಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಈಗ ಕರ್ನಾಟಕ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗ(ISD) ದಿಂದ ಲೂಸ್ ಮಾದ ಎಂದು ಕರೆಸಿಕೊಳ್ಳುವ ನಟ ಯೋಗಿ ಹಾಗೂ ಇನ್ನಿಬ್ಬರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಿದೆ.

ವಿದೇಶಿ ಡ್ರಗ್ ಪೆಡ್ಲರ್ ಗಳ ಹೇಳಿಕೆ ಹಿನ್ನೆಲೆಯಲ್ಲಿ ಈಗಾಗಲೇ ಶ್ರೀಲಂಕಾದ ಕ್ಯಾಸಿನೋ ಮೂಲ ಬೆನ್ನು ಹತ್ತಿರುವ ಐಸಿಡಿ ವಿಭಾಗದ ಅಧಿಕಾರಿಗಳಿಗೆ ವಿಚಾರಣೆ ವೇಳೆ ನಟ ಯೋಗಿ, ಕ್ರಿಕೆಟರ್ ಎನ್ ಸಿ ಅಯ್ಯಪ್ಪ ಹೆಸರು ಕೇಳಿ ಬಂದಿತ್ತು.

ರಾಗಿಣಿ ದ್ವಿವೇದಿ ಆರೋಪಿ ನಂ.2, ರವಿಶಂಕರ್ ಹೆಸರು ನಾಪತ್ತೆ? ರಾಗಿಣಿ ದ್ವಿವೇದಿ ಆರೋಪಿ ನಂ.2, ರವಿಶಂಕರ್ ಹೆಸರು ನಾಪತ್ತೆ?

ಹೀಗಾಗಿ, ನಟಿ ಪ್ರೇಮಾ ಅವರ ಸೋದರ, ಕ್ರಿಕೆಟರ್, ಬಿಗ್ ಬಾಸ್ ಖ್ಯಾತಿಯ ಎನ್ ಸಿ ಅಯ್ಯಪ್ಪ ಹಾಗೂ ಜನಪ್ರಿಯ ನಟ ಯೋಗಿ ಅವರನ್ನು ವಿಚಾರಣೆಗೊಳಪಡಿಸಲಾಯಿತು.

Internal Security Division of Karnataka polcie to quiz actors in Drug Case

ಶಾಂತಿನಗರದಲ್ಲಿರುವ ಐಎಸ್ ಡಿ ಕಚೇರಿಗೆ ಸೋಮವಾರದಂದು ಹಾಜರಾದ ಇಬ್ಬರು ವಿಚಾರಣೆ ಎದುರಿಸಿದ್ದಾರೆ. ಐಎಸ್ ಡಿ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಅವರ ನೇತೃತ್ವದಲ್ಲಿ ಇಬ್ಬರ ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Recommended Video

Corona ಲಸಿಕೆ ಭಾರತದಲ್ಲಿ ಉತ್ಪಾದನೆ ಆದ ಬಳಿಕ ಇರುವ ಸವಾಲುಗಳೇನು ? | Oneindia Kannada

ಶ್ರೀಲಂಕಾದ ಕ್ಯಾಸಿನೋ ಮೂಲಕ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಕ್ಕೆ ಡ್ರಗ್ಸ್ ಪೂರೈಕೆಯಾಗುತ್ತಿರುವ ಶಂಕೆ ಇದೆ. ಶ್ರೀಲಂಕಾ ಮಾತ್ರವಲ್ಲದೆ, ಇಂಡೋನೇಶಿಯಾ, ಫಿಲಿಪೈನ್ಸ್, ಮಲೇಶಿಯಾದಿಂದಲೂ ಡ್ರಗ್ಸ್ ಪೂರೈಕೆ ಜಾಲವಿದೆ ಎಂಬ ಮಾಹಿತಿಯಿದೆ.

English summary
Internal Security Division of Karnataka police quiz Kannada actor in Drug Case
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X