ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಟ್ಸಾಪ್ ವಿಶೇಷ : ತಿರುಪತಿ ಶ್ರೀನಿವಾಸ ಮೂರ್ತಿಯ ವಿಸ್ಮಯ

By Prasad
|
Google Oneindia Kannada News

ಬೆಂಗಳೂರು, ಜೂ. 13 : ಸಂಕಟ ಬಂದಾಗ ವೆಂಕಟರಮಣನ ಪಾದಕ್ಕೆರುಗುವುದು ದೇವರ ಮೇಲೆ ನಂಬಿಕೆ ಇಟ್ಟಿರುವವರು ಪಾಲಿಸಿಕೊಂಡು ಬಂದಿರುವ ಪಾಲಿಸಿ. ಸಂಕಟ ಬಂದಿರದಿದ್ದರೂ ಆಗಾಗ ತಿರುಪತಿಯಿಂದ ಬೆಟ್ಟ ಹತ್ತಿ ತಿರುಮಲಕ್ಕೆ ಭೇಟಿ ನೀಡಿ ಶ್ರೀನಿವಾಸನ ದರ್ಶನ ಪಡೆದು ಬರುವವರ ಸಂಖ್ಯೆ ಎಣಿಸಲು ಸಾಧ್ಯವಿಲ್ಲ.

ಪರೀಕ್ಷೆಯಲ್ಲಿ ಪಾಸಾಯಿತೆಂದು, ಪರೀಕ್ಷೆಯಲ್ಲಿ ಪಾಸಾಗಲೆಂದು, ಒಳ್ಳೆ ಕೆಲಸ ಸಿಕ್ಕಿತೆಂದು, ಮಗಳಿಗೆ ಉತ್ತಮ ಗಂಡ ಸಿಗಲೆಂದು, ಹರಕೆ ತೀರಿಸಿಕೊಳ್ಳಲೆಂದು, ವೀಕೆಂಡಿನ ಮಸ್ತ್ ಮಜಾಕ್ಕೆಂದು... ಹೀಗೆ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಅಥವಾ ವಿನಾಕಾರಣ ಸುಖಾಸುಮ್ಮನೆ ಏಳುಕೊಂಡಲವಾಡ ಗೋವಿಂದನಿಗೆ ಗೋವಿಂದಾ ಅನ್ನುವವರಿದ್ದಾರೆ.

ವೆಂಕಟೇಶ್ವರನ ಆ ಅದ್ಬುತ ವಿಗ್ರಹ ನೋಡುತ್ತಲೇ ಭಕ್ತರ ಕಣ್ಣಲ್ಲಿ ಏನೋ ಆನಂದ, ಸಾಕ್ಷಾತ್ ದೇವರೇ ನನ್ನ ಕಣ್ಣ ಮುಂದೆ ನಿಂತಿದ್ದಾನೆ, ಜನ್ಮ ಸಾರ್ಥಕವಾಯಿತು ಎಂಬ ಭಾವ. ಸಿಕ್ಕಷ್ಟು ಸೆಕೆಂಡಿನಲ್ಲೇ ಸಾಧ್ಯವಾದಷ್ಟು ಕಣ್ಣು ತುಂಬಿಕೊಳ್ಳಲು ನೂಕುನುಗ್ಗಲು. ಆ ಮೂರ್ತಿಯೇ ಹಾಗಿದೆ. ಮೂರ್ತಿಯೊಂದೇ ಆದರೆ ಭಾವಗಳು ಕೋಟಿಕೋಟಿ.

ಆದರೆ, ಶ್ರೀನಿವಾಸನ ಆ ವಿಗ್ರಹ ಕಲ್ಲಿನಿಂದ ತಯಾರಿಸಿದ್ದೆ? ಅದು ಉದ್ಭವ ಮೂರ್ತಿಯೆ? ಶತಶತಮಾನಗಳಿಂದಲೂ ಮೂರ್ತಿ ತನ್ನ ಸ್ವರೂಪವನ್ನು ಹಾಗೇ ಉಳಿಸಿಕೊಂಡಿದ್ದಕ್ಕೆ ಕಾರಣವಾದರೂ ಏನು? ಈ ಪ್ರಶ್ನೆಗಳಿಗೆ ವಾಟ್ಸಾಪ್ ನಲ್ಲಿ ಒಂದಿಷ್ಟು ವಿವರಗಳು ಹರಿದುಬಂದಿವೆ. ಅವನ್ನು ಇಲ್ಲಿ ಯಥಾವತ್ ಮುದ್ರಿಸುತ್ತಿದ್ದೇವೆ. ನಂಬುವುದು, ಬಿಡುವುದು ಅವರವರಿಗೆ ಬಿಟ್ಟಿದ್ದು.

Interesting facts about Venkateshwara statue in Tirupati

1] ಶ್ರೀನಿವಾಸನ ಪೂರ್ತಿ ವಿಗ್ರಹ ಸಂಪೂರ್ಣವಾಗಿ ಸ್ವಯ೦ ಉದ್ಭವಮೂರ್ತಿ. ಇದನ್ನು ಯಾರೂ ಸ್ಥಾಪನೆಮಾಡಿಲ್ಲ. ಸ್ವಯ೦ ಉದ್ಭವ ಮೂರ್ತಿಯಾಗಿದ್ದರೂ ಅದರ ಪ್ರತಿಯೊ೦ದು ಅ೦ಗಾಂಗಳ ಗಾತ್ರ ಪ್ರಮಾಣಬದ್ಧವಾಗಿದೆ.

2] ಈ ರೀತಿಯಾದ ಶ್ರೀನಿವಾಸನ ವಿಗ್ರಹ ಜಗತ್ತಿನ ಬೇರೆಲ್ಲೂ ಇಲ್ಲ. ಜಗತ್ತಿನಲ್ಲಿರುವ ಈ ರೀತಿಯ ಏಕಮಾತ್ರ ವೆ೦ಕಟೇಶ್ವರನ ವಿಗ್ರಹ ಇದು.

3] ಕಲ್ಲುಗಳನ್ನು ಕೂಡಾ ಕರಗಿಸುವಷ್ಟು ಶಕ್ತಿಶಾಲಿಯಾಗಿರುವ ಪಚ್ಚ ಕರ್ಪೂರವನ್ನು ಮೂರ್ತಿಗೆ ಬಳಿದು, ಸಾಕಷ್ಟು ಸಮಯದ ನ೦ತರ ಮೂರ್ತಿಯನ್ನು ತೊಳೆದು ಅಭಿಷೇಕ ಮಾಡಲಾಗುತ್ತದೆ. ಹೀಗೆ ಶತಮಾನಗಳಿ೦ದ ಮೂರ್ತಿಗೆ ಅದರಿ೦ದ ಅಭಿಷೇಕ ಮಾಡುತ್ತಾ ಬ೦ದಿದ್ದರೂ, ಮೂರ್ತಿಯು ಒ೦ದಿಷ್ಟೂ ಹೊಳಪನ್ನು ಕಳೆದುಕೊ೦ಡಿಲ್ಲ, ಸ್ವಲ್ಪವೂ ಭಗ್ನವಾಗಿಲ್ಲ. ಶತಮಾನಗಳ ಹಿ೦ದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ.

4] ಬೆಳಿಗ್ಗೆ ಮೂರ್ತಿಗೆ ನೀರು & ಹಸುವಿನ ಹಾಲಿನಿ೦ದ ಅಭಿಷೇಕ ಮಾಡಿದ ನ೦ತರ, ಮೂರ್ತಿಯ ಮೇಲೆ ಬೆವರಿನ ಹನಿಗಳು ಮೂಡುತ್ತವೆ! ಅವುಗಳನ್ನು ಸ್ವಚ್ಛಗೊಳಿಸಿ ನ೦ತರ ಅಲ೦ಕಾರ ಮಾಡಲಾಗುತ್ತದೆ.

5] ಅನೇಕ ಜನ ಅರ್ಚಕರಿಗೆ ಮೂರ್ತಿಯ ಪಾದವನ್ನು ಸ್ಪರ್ಶಿಸುವಾಗ, ಜೀವ೦ತ ಪಾದವನ್ನು ಸ್ಪರ್ಶಿಸಿದ ಅನುಭವಗಳಾಗಿವೆ. (ನಿಮಗಾರಿಗಾದರೂ ಪಾದ ಸ್ಪರ್ಶಿಸುವ ಅವಕಾಶ ಸಿಕ್ಕಿತ್ತಾ?)

6] ಪುರಾಣಗಳ ಪ್ರಕಾರ ಈ ವಿಗ್ರಹ ದೇವತೆಗಳಿ೦ದಾಗಲಿ ಅಥವಾ ಶಿಲೆಯಿ೦ದಾಗಲಿ ಮಾಡಿದ್ದಲ್ಲ. ಅದು ಜನರ ಕಣ್ಣಿಗೆ ಶಿಲೆಯ೦ತೆ ಕಾಣುತ್ತದೆ ಅಷ್ಟೇ.

7] ತಜ್ಞರ ಪ್ರಕಾರ, ಈ ವಿಗ್ರಹ ಭೂಮಿಯ ಮೇಲಿನ ಶಿಲೆಯಿ೦ದ ಮಾಡಲ್ಪಟ್ಟಿದ್ದಲ್ಲ. ಅವರ ಪ್ರಕಾರ ಇದು ಭೂಮಿಯ ತಳಭಾಗದಲ್ಲಿನ ಒತ್ತಡದಿ೦ದು೦ಟಾದ ಶಿಲೆಯಿರಬಹುದು ಅಥವಾ ಇದು ಅನ್ಯಗ್ರಹದಿ೦ದ ಬ೦ದ ಶಿಲೆಯಾಗಿರಬಹುದು!

8] ಗ್ರ೦ಥಗಳ ಪ್ರಕಾರ ಈ ವಿಗ್ರಹ ಯುಗಗಳ ಹಿ೦ದೆಯೇ ಉದ್ಭವಿಸಿದ್ದು, ಆಧುನಿಕ ಅಧ್ಯಯನಗಳ ಪ್ರಕಾರ ಈ ವಿಗ್ರಹ ಎಷ್ಟು ಹಳೆಯದ್ದು ಎ೦ಬುದಕ್ಕೆ ಯಾವುದೇ ಖಚಿತ ಆಧಾರಗಳಿಲ್ಲ.

9] ರಾತ್ರಿಯ ಸಮಯದಲ್ಲಿ ಅಥವಾ ನೈವೇದ್ಯ ಸಮರ್ಪಣೆಗಾಗಿ ಗರ್ಭಗುಡಿಯ ಬಾಗಿಲು ಮುಚ್ಚಿದ ಕೆಲ ಸ೦ದರ್ಭಗಳಲ್ಲಿ, ಒ೦ದು ಬೆಕ್ಕು ಗರ್ಭಗುಡಿಯಿ೦ದ ನಿಗೂಢವಾಗಿ ಹೊರಬರುತ್ತದೆ. ಅದು ಬರುವ ದಾರಿಗಳಾಗಲಿ ಅಥವಾ ಹೇಗೆ ಪ್ರತ್ಯಕ್ಷವಾಗುತ್ತದೆ ಎನ್ನುವುದಾಗಲಿ ಎಲ್ಲವೂ ನಿಗೂಢ!

English summary
Interesting facts about Venkateshwara statue in Tirupati. When was it built? Is it made of stone or something else? It is learnt that one cat comes out of garbhagudi at the time of naivedya. From where it comes? Believe it or not, but these facts are going round on WhatsApp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X