ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲ್‌ ಬಾಗ್‌ನಲ್ಲಿ ಜ.9ರಿಂದ ಹಣ್ಣುಗಳ ಮೇಳ

By Super Admin
|
Google Oneindia Kannada News

ಬೆಂಗಳೂರು, ಜ. 6 : ಹಣ್ಣಿನ ಪ್ರಿಯರಿಗೆ ಸಿಹಿಸುದ್ದಿ. ಜ.9ರಿಂದ 11ರವರೆಗೆ ಮೂರು ದಿನಗಳ ಕಾಲ ಲಾಲ್‌ಬಾಗ್‌ನಲ್ಲಿ 'ಅಂತರರಾಜ್ಯ ತೋಟದ ಬೆಳೆಗಳ ಸಂಗಮ-2015' ನಡೆಯಲಿದ್ದು, ಕಿತ್ತಲೆ, ಸೇಬು, ಮರಸೇಬು, ಆಂಧ್ರದ ಮೂಸಂಬಿ ಸೇರಿದಂತೆ ಬಗೆಬಗೆಯ ಹಣ್ಣುಗಳ ರುಚಿಯನ್ನು ಸವಿಯಬಹುದಾಗಿದೆ.

ರಾಷ್ಟ್ರೀಯ ತೋಟಗಾರಿಕೆ ಮಂಡಳಿ ಮತ್ತು ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ಸಹಯೋಗದಲ್ಲಿ ಮೂರು ದಿನಗಳ ಈ ಮೇಳ ಆಯೋಜಿಸಲಾಗಿದೆ. ಲಾಲ್‌ ಬಾಗ್ ಉದ್ಯಾನದ ಗಾಜಿನಮನೆಯ ಸುತ್ತಲಿನ ಸಂಪಿಗೆ ಸಾಲು ಹಾಗೂ ಬೃಹತ್ ಬಂಡೆಯ ಪಕ್ಕದಲ್ಲಿ ಮಳಿಗೆಗಳನ್ನು ತೆರೆಯಲಾಗುತ್ತದೆ.

Lalbagh

ಮೇಳದಲ್ಲಿ ನೀವು ಕೇವಲ ಹಣ್ಣುಗಳನ್ನು ನೋಡುವುದು ಮಾತ್ರವಲ್ಲ, ಅವುಗಳನ್ನು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ. ಹಣ್ಣಿನ ವಿಶೇಷತೆಗಳ ಬಗ್ಗೆ ತಿಳಿಯಲು ನೀವು ಆಸಕ್ತಿ ಹೊಂದಿದ್ದರೆ ಅದನ್ನು ತಿಳಿಸಿಕೊಡಲು ಅವಕಾಶ ಕಲ್ಪಿಸಲಾಗಿದೆ. [ಜ.17ರಿಂದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ]

ಹರ್ಯಾಣ-ಪಂಜಾಬ್‌ನ ಕಿನೊ, ನಾಗಪುರದ ಕಿತ್ತಳೆ, ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಸೇಬು, ಕರ್ನಾಟಕ ಮತ್ತು ಮಹಾರಾಷ್ಟ್ರದ ದಾಳಿಂಬೆ, ಆಂಧ್ರ ಪ್ರದೇಶದ ಮೂಸಂಬಿ ಸೇರಿದಂತೆ ದೇಶದ ನಾನಾ ರಾಜ್ಯಗಳ ಹಣ್ಣುಗಳು ಮೇಳದಲ್ಲಿ ದೊರೆಯಲಿವೆ.

ಪ್ರತ್ಯೇಕ ಟಿಕೆಟ್ ಬೇಡ : ಒಟ್ಟು 60 ಮಳಿಗೆಗಳು ಮೇಳದಲ್ಲಿ ಇರಲಿದ್ದು, ಜ.9ರಂದು ಮಧ್ಯಾಹ್ನ 3 ಗಂಟೆಗೆ ಮೇಳದ ಉದ್ಘಾಟನೆ ನಡೆಯಲಿದೆ. ಜ.11ರವರೆಗೆ ಬೆಳಗ್ಗೆಯಿಂದ ಸಂಜೆಯವರೆಗೆ ಮೇಳ ನಡೆಯಲಿದ್ದು, ಯಾವುದೇ ಪ್ರತ್ಯೇಕ ಟಿಕೆಟ್ ತೆಗೆದುಕೊಳ್ಳಬೇಕಿಲ್ಲ. ಲಾಲ್‌ಬಾಗ್ ಪ್ರವೇಶಿಸಲು ಪಡೆಯುವ ಟಿಕೆಟ್ ಸಾಕು.

ಏನು ಸಿಗುತ್ತದೆ : ಮೂರು ದಿನಗಳ ಮೇಳದಲ್ಲಿ ಎಲ್ಲ ಬಗೆಯ ಸೊಪ್ಪು-ತರಕಾರಿಗಳು, ವಿಜಯಾಪುರದ ಗುಣಮಟ್ಟದ ಒಣದ್ರಾಕ್ಷಿ, ಒಣಗಿದ ನೆಲ್ಲಿಕಾಯಿ, ಬಾದಾಮಿ, ಪಿಸ್ತಾ, ಸಂಸ್ಕರಿಸಿದ ಹಣ್ಣಿನ ಪದಾರ್ಥಗಳು, ಗುಣಮಟ್ಟದ ಕೇಸರಿ, ಜೇನುತುಪ್ಪ, ಸಾಂಬಾರ ಪದಾರ್ಥಗಳು ದೊರೆಯಲಿವೆ.

English summary
National Horticulture Board (NHB) and Karnataka horticulture department has organized 3 days Inter-state Horticulture Fair 2015 form January 9 to 11 at Lalbagh Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X