ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೆಡ್ ಝೋನ್ ಚೆನ್ನೈನಿಂದಲೇ ಬಂತು ಬೆಂಗಳೂರಿಗೆ ಮೊದಲ ವಿಮಾನ

|
Google Oneindia Kannada News

ಬೆಂಗಳೂರು, ಮೇ.25: ನೊವೆಲ್ ಕೊರೊನಾ ವೈರಸ್ ಹಾಗೂ ಭಾರತ ಲಾಕ್ ಡೌನ್ 4.0 ಜಾರಿ ನಡುವೆ ರಾಜ್ಯದೊಳಗೆ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ಇದರ ಮಧ್ಯೆ ಚೆನ್ನೈನಿಂದ ಮೊದಲ ವಿಮಾನವು ಬೆಂಗಳೂರಿಗೆ ಆಗಮಿಸಿದೆ.

Recommended Video

ಲಾಕ್ ಡೌನ್ ನಲ್ಲಿ ಮಧುಮೇಹ ರೋಗಿಗಳ ಆರೋಗ್ಯ ಅಪಾಯದಲ್ಲಿ!! | Exercise is must in Lockdown | Oneindia Kannada

ತಮಿಳುನಾಡಿನ ಚೆನ್ನೈನಿಂದ 110 ಪ್ರಯಾಣಿಕರನ್ನು ಹೊತ್ತ ಖಾಸಗಿ ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಎಲ್ಲ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್ ಹಾಗೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ಪಶ್ಚಿಮ ಬಂಗಾಳ, ಆಂಧ್ರ ಹೊರತುಪಡಿಸಿ ದೇಶೀಯ ವಿಮಾನ ಸೇವೆ ಪುನರಾರಂಭಪಶ್ಚಿಮ ಬಂಗಾಳ, ಆಂಧ್ರ ಹೊರತುಪಡಿಸಿ ದೇಶೀಯ ವಿಮಾನ ಸೇವೆ ಪುನರಾರಂಭ

ವಿಮಾನ ನಿಲ್ದಾಣದ ಹೊರಭಾಗದಲ್ಲಿ ಆಂಬುಲೆನ್ಸ್ ಹಾಗೂ ಬಿಎಂಟಿಸಿ ಬಸ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಸೋಂಕಿತ ಲಕ್ಷಣಗಳು ಕಂಡು ಬಂದಲ್ಲಿ ಅಂಥವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಅದಕ್ಕಾಗಿ 10 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

Inter-State Flight Opreation Start: First Flight Came From Chennai To Bengaluru


110 ಪ್ರಯಾಣಿಕರಿಗೆ ಕಡ್ಡಾಯ ಕ್ವಾರೆಂಟೈನ್:

ಚೆನ್ನೈನಿಂದ ಆಗಮಿಸಿದ 110 ಪ್ರಯಾಣಿಕರು ಏಳು ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಇರುವುದು ಕಡ್ಡಾಯವಾಗಿದೆ. ಈ ಮೊದಲು 14 ದಿನಗಳ ಕಾಲವಿದ್ದ ಕ್ವಾರೆಂಟೈನ್ ಅವಧಿಯನ್ನು ಏಳು ದಿನಕ್ಕೆ ಇಳಿಸಲಾಗಿದೆ. ಪ್ರಯಾಣಿಕರನ್ನು ಕ್ವಾರೆಂಟೈನ್ ನಲ್ಲಿ ಇರಿಸಲು ಕ್ವಾರೆಂಟೈನ್ ಕೇಂದ್ರವನ್ನು ವ್ಯವಸ್ಥೆ ಮಾಡಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ವೈದ್ಯಕೀಯ ತಪಾಸಣೆ ಮುಗಿದ ಬಳಿಕ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಕರನ್ನು ಕ್ವಾರೆಂಟೈನ್ ಕೇಂದ್ರಕ್ಕೆ ಶಿಫ್ಟ್ ಮಾಡಲಾಗುತ್ತದೆ. ಈ ಹಿನ್ನೆಲೆ 10 ಬಿಎಂಟಿಸಿ ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೊದಲ ಹಂತದಲ್ಲಿ ಕೆಎಸ್ಆರ್ ಟಿಸಿ ಬಸ್ ನಲ್ಲಿ 32 ಪ್ರಯಾಣಿಕರನ್ನು ಕರೆದುಕೊಂಡು ಹೋಗಲಾಗಿದೆ.

English summary
Inter-State Flight Opreation Start: First Flight Came From Chennai To Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X