ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

8 ವರ್ಷದ ಮುಂಚೆ ಐಬಿಎಂ ಉದ್ಯೋಗಿ, ಈಗ ಅಂತಾರಾಜ್ಯ ಸರಗಳ್ಳ

|
Google Oneindia Kannada News

ಬೆಂಗಳೂರು, ಅ. 5: ಪೀಣ್ಯ ಪೊಲೀಸ್ ಠಾಣಾ ಸರಹದ್ದಿನ ಇಂದಿರಾನಗರ ಸರ್ಕಲ್ ಬಳಿ ಆಗಸ್ಟ್ ತಿಂಗಳಿನಲ್ಲಿ ಸರಗಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಸಾಫ್ಟ್ ವೇರ್ ಸಂಸ್ಥೆಯ ಉದ್ಯೋಗ ಬಿಟ್ಟು ಕಳ್ಳತನದ ಕಸುಬಿಗೆ ಕೈ ಹಾಕಿದ್ದ ಎಂದು ತಿಳಿದು ಬಂದಿದೆ.

ಆಗಸ್ಟ್ 13ರಂದು ರಾತ್ರಿ 07-40 ಗಂಟೆ ಸಮಯದಲ್ಲಿ ಪೀಣ್ಯ ಪೊಲೀಸ್ ಠಾಣಾ ಸರಹದ್ದಿನ ಇಂದಿರಾನಗರ ಸರ್ಕಲ್ ಕಡೆಯಿಂದ ನೆಲಗದರನಹಳ್ಳಿ ಮುಖ್ಯರಸ್ತೆಯಲ್ಲಿ ಪಿರ್ಯಾದಿ ಶ್ರೀಮತಿ ಸಿದ್ದಗಂಗಮ್ಮ ಗೃಹಲಕ್ಷೀಲೇಔಟ್‍ನಲ್ಲಿರುವ ತನ್ನ ಸ್ನೇಹಿತೆಯ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ಆಸಾಮಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದ.

ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಳ್ಳುವ ರಭಸದಲ್ಲಿ ಮಹಿಳೆ ನೆಲಕ್ಕೆ ಬಿದ್ದು, ಗಾಯಗಳಾಗಿದ್ದು ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಪರಾರಿಯಾಗಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ.

Inter state Chain Snatchers nabbed Rs 3.7 lakh gold ornaments seized

ಬಂಧಿತನ ವಿವರ: ತಮಿಳುನಾಡಿನ ಕೃಷ್ಣಗಿರಿ ಮೂಲದ 39 ವರ್ಷ ವಯಸ್ಸಿನ ಜಯಕುಮಾರ್ ಅಲಿಯಾಸ್ ಜಯ ಅಲಿಯಾಸ್ ಗಣಿ ಬಂಧಿತನಾಗಿದ್ದು, ಬೆಂಗಳೂರಿನಲ್ಲಿ ಸೋಂಪುರದಲ್ಲಿ ವಾಸವಾಗಿದ್ದ. ಆತನ ಬಳಿ ಸುಮಾರು 3.7 ಲಕ್ಷ ರೂ. ಬೆಲೆ ಬಾಳುವ 60 ಗ್ರಾಂ ತೂಕದ ಚಿನ್ನದ ಸರ ಮತ್ತು 2 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೀಣ್ಯ ಪೊಲೀಸರು ಹೇಳಿದರು.

ಐಬಿಎಂನಲ್ಲಿ ಟೀಂ ಮ್ಯಾನೇಜರ್:
ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿ 2012 ನೇ ಸಾಲಿನಲ್ಲಿ ಐಬಿಎಂ ಕಂಪನಿಯಲ್ಲಿ ಟೀಮ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ನಂತರ ಕೆಲಸ ಬಿಟ್ಟು ಕಾರ್ತೀಕ್ ಮತ್ತು ಅರುಣ್ ಎಂಬುವರೊಂದಿಗೆ ಸೇರಿಕೊಂಡು ಸರಗಳ್ಳತನ ಪ್ರಕರಣದಲ್ಲಿ ತೊಡಗಿರುತ್ತಾನೆ. 2019 ನೇ ಸಾಲಿನಲ್ಲಿ ಈತನನ್ನು ಬೆಂಗಳೂರು ನಗರದ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಿರುತ್ತಾರೆ.

Inter state Chain Snatchers nabbed Rs 3.7 lakh gold ornaments seized

ಆ ಸಮಯದಲ್ಲಿ ಈತನು ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಯ 22 ಸರಗಳ್ಳತನ ಮತ್ತು ತಮಿಳುನಾಡು ರಾಜ್ಯದಲ್ಲಿ 12 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಈತನು 2019 ನೇ ಸಾಲಿನ ಅಕ್ಟೋಬರ್ ತಿಂಗಳಿಂದ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳಿಗೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ. ಈತನು 10-15 ಸಿಮ್ ಕಾರ್ಡ್‍ಗಳನ್ನು ಸಂಬಂಧಿಕರ ಹೆಸರಿನಲ್ಲಿ ಪಡೆದುಕೊಂಡು 15 ದಿನಗಳಿಗೊಮ್ಮೆ ಸ್ಥಳ ಬದಲಾವಣೆ ಮಾಡಿ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.

ಆರೋಪಿಯ ಬಂಧನದಿಂದ ಪೀಣ್ಯ ಪೊಲೀಸ್ ಠಾಣೆಯ 1-ಸರಗಳ್ಳತನ ಪ್ರಕರಣ ಮತ್ತು ಮೈಕೋಲೇಔಟ್ ಪೊಲೀಸ್ ಠಾಣೆಯ-1, ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯ -1 ದ್ವಿಚಕ್ರವಾಹನ ಪತ್ತೆಯಾಗಿರುತ್ತದೆ.

Inter state Chain Snatchers nabbed Rs 3.7 lakh gold ornaments seized

Recommended Video

RR Nagar ಉಪಚುನಾವಣೆಯಲ್ಲಿ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ Muniratna | Oneindia Kannada

ಈ ಪ್ರಕರಣದಲ್ಲಿ ಎನ್.ಟಿ. ಶ್ರೀನಿವಾಸರೆಡ್ಡಿ, ಯಶವಂತಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಮುದ್ದರಾಜ್.ವೈ, ಪೊಲೀಸ್ ಇನ್ಸ್‍ಪೆಕ್ಟರ್, ಪೀಣ್ಯ ಪೋಲಿಸ್ ಠಾಣೆ ಮತ್ತು ಪಿಎಸ್‍ಐ ಗಳಾದ ರಘುಪ್ರಸಾದ್ ಎನ್., ರೇವಣಸಿದ್ದಪ್ಪ ಹೂಗಾರ, ಭಾನು ಪ್ರಕಾಶ್, ಇಬ್ರಾಹಿಂ ಹಾಗೂ ಸಿಬ್ಬಂದಿಯವರಾದ ಎಎಸ್‍ಐ ಕುಮಾರ ಸ್ವಾಮಿ, ರವಿಕುಮಾರ್ ಹೆಚ್‍ಸಿ-5282, ಶಿವಕುಮಾರ್ ಹೆಚ್‍ಸಿ-9767, ರಂಗಸ್ವಾಮಯ್ಯ, ಹೆಚ್‍ಸಿ-6985, ರಂಗನಾಥ ಹೆಚ್‍ಸಿ-7076, ಅನಂತರಾಮಯ್ಯ ಹೆಚ್‍ಸಿ-9870, ರಾಜಶೇಖರ್ ಪಿಸಿ-14156, ಲಕ್ಷ್ಮೀನಾರಾಯಣ್ ಪಿ.ಸಿ-3910, ಸೋಮನಾಥ ರೆಡ್ಡಿ ಪಿಸಿ-15634, ಅಯ್ಯಣ್ಣ ನಾಯಕ ಪಿಸಿ-14200 ರವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

English summary
Peenya station police have arrested Inter state Chain Snatchers nabbed Rs 3.7 lakh gold ornaments seized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X