ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಪ್ತಚರ ಇಲಾಖೆ ವರದಿ : ಬೆಂಗಳೂರಿನಲ್ಲಿ ಹೈ ಅಲರ್ಟ್‌

|
Google Oneindia Kannada News

Recommended Video

ಬೆಂಗಳೂರಿನ ಎಲ್ಲಕಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ..? | Oneindia Kannada

ಬೆಂಗಳೂರು, ಆಗಸ್ಟ್ 16 : ಕೇಂದ್ರ ಗುಪ್ತಚರ ಇಲಾಖೆ ವರದಿ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ. ದೇಶದ ನಾಲ್ಕು ನಗರಗಳ ಮೇಲೆ ದಾಳಿ ನಡೆಯಬಹುದು ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್ ನಗರಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಸಂಜೆಯಿಂದಲೇ ಭದ್ರತೆ ಹೆಚ್ಚಳ ಮಾಡಲಾಗಿದೆ.

ಬೆಂಗಳೂರು ಪೊಲೀಸ್ ಕಮೀಷನರ್ ಆಡಿಯೋ ವೈರಲ್: ತನಿಖೆಗೆ ಆದೇಶಬೆಂಗಳೂರು ಪೊಲೀಸ್ ಕಮೀಷನರ್ ಆಡಿಯೋ ವೈರಲ್: ತನಿಖೆಗೆ ಆದೇಶ

ಕೇಂದ್ರ ಗೃಹ ಇಲಾಖೆ ಬೆಂಗಳೂರು ನಗರ ಪೊಲೀಸರಿಗೆ ಗುಪ್ತಚರ ಇಲಾಖೆ ವರದಿ ಅನ್ವಯ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು. ಆದ್ದರಿಂದ, ತಕ್ಷಣದಿಂದಲೇ ನಗರದಲ್ಲಿ ಭದ್ರತೆ ಹೆಚ್ಚಳ ಮಾಡಲು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.

ಬೆಂಗಳೂರು: ಪೊಲೀಸರ ಚೀತಾ ಬೈಕ್ ಕದ್ದ ಐನಾತಿ ಕಳ್ಳಬೆಂಗಳೂರು: ಪೊಲೀಸರ ಚೀತಾ ಬೈಕ್ ಕದ್ದ ಐನಾತಿ ಕಳ್ಳ

police

ನಗರದ ಪ್ರಮುಖ ಪ್ರದೇಶಗಳಾದ ಮೆಟ್ರೋ ನಿಲ್ದಾಣ, ಮಾಲ್, ವಿಧಾನಸೌಧ, ಹೈಕೋರ್ಟ್, ಬಸ್ ನಿಲ್ದಾಣ, ವಿಕಾಸಸೌಧ ಸೇರಿದಂತೆ ಜನನಿಬೀಡ ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಫೋನ್ ಕದ್ದಾಳಿಕೆ ಪ್ರಕರಣ ತನಿಖೆಯಿಂದ ಹಿಂದಕ್ಕೆ ಸರಿದ ಐಪಿಎಸ್‌ ಅಧಿಕಾರಿಫೋನ್ ಕದ್ದಾಳಿಕೆ ಪ್ರಕರಣ ತನಿಖೆಯಿಂದ ಹಿಂದಕ್ಕೆ ಸರಿದ ಐಪಿಎಸ್‌ ಅಧಿಕಾರಿ

ಹಲವು ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಬೇಕು. ಜಂಟಿ ಆಯುಕ್ತರ ನೇತೃತ್ವದಲ್ಲಿ ಪೊಲೀಸರ ತಂಡ ಸನ್ನದ್ಧವಾಗಿರಬೇಕು ಎಂದು ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ.

English summary
High alert issued on 4 city's of India after central intelligence report. Security beefed up in Karnataka state capital Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X