ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಉತ್ತರ ಕ್ಷೇತ್ರ ಫಲಿತಾಂಶದ ಬಗ್ಗೆ ಸಿಎಂಗೆ ಸಿಕ್ಕಿದೆ ನಿಖರ ಮಾಹಿತಿ

|
Google Oneindia Kannada News

Recommended Video

ಬೆಂಗಳೂರು ಉತ್ತರ ಕ್ಷೇತ್ರದ ಫಲಿತಾಂಶದ ಬಗ್ಗೆ ಸಿಎಂಗೆ ಸಿಕ್ಕಿದೆ ಗುಪ್ತಚರ ಇಲಾಖೆ ವರದಿ | Oneindia Kannada

ಬೆಂಗಳೂರು, ಮೇ 11: ಬೆಂಗಳೂರು ಉತ್ತರ ಕ್ಷೇತ್ರ ಚುನಾವಣೆ ಫಲಿತಾಂಶದ ಬಗ್ಗೆ ಸಿಎಂ ಅವರಿಗೆ ನಿಖರ ಮಾಹಿತಿ ಸಿಕ್ಕಿದೆಯಂತೆ. ಹೀಗೆಂದು ಅವರೇ ಸಚಿವ ಸಂಪುಟ ಸಭೆಯಲ್ಲಿ ಹೇಳಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸದಾನಂದ ಗೌಡ ವಿರುದ್ಧ ಕೃಷ್ಣಬೈರೇಗೌಡ ಅವರ ಗೆಲುವು ಬಹುತೇಕ ಪಕ್ಕಾ ಆಗಿದೆಯೆಂಬ ಮಾಹಿತಿಯನ್ನು ಕುಮಾರಸ್ವಾಮಿ ಅವರು ಸಂಪುಟ ಸಭೆಯಲ್ಲಿ ಹೇಳಿದ್ದಾರೆ, ಇದಕ್ಕೆ ಕೃಷ್ಣ ಬೈರೇಗೌಡ ಅವರು ಸಹ ಧನ್ಯವಾದ ಅರ್ಪಿಸಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಆದ್ದದ್ದಿಷ್ಟು, ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಮೊದಲಿಗೆ ಕೃಷ್ಣಬೈರೇಗೌಡ ಅವರು ಪ್ರಸ್ತಾವಿಕವಾಗಿ ಮಾತನಾಡುತ್ತಿದ್ದರು, ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಕುಮಾರಸ್ವಾಮಿ, 'ಕೃಷ್ಣಬೈರೇಗೌಡ ಅವರಿಗೆ ಶುಭಾಷಯಗಳು' ಎಂದು ಹೇಳಿದ್ದಾರೆ. ಶುಭಾಶಯಕ್ಕೆ ಅವಾಕ್ಕಾದ ಸಚಿವರು, ಶುಭಾಶಯ ಕೋರಿದ್ದಕ್ಕೆ ಕಾರಣವೇನೆಂದು ಗೊಂದಲಕ್ಕೆ ಒಳಗಾಗಿದ್ದಾರೆ.

ಇದೇನು ಕೃಷ್ಣ ಭೈರೇಗೌಡರ ವಿಶಿಷ್ಟ ರೀತಿಯ ಚುನಾವಣಾ ಪ್ರಚಾರ ಇದೇನು ಕೃಷ್ಣ ಭೈರೇಗೌಡರ ವಿಶಿಷ್ಟ ರೀತಿಯ ಚುನಾವಣಾ ಪ್ರಚಾರ

ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, 'ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೃಷ್ಣಬೈರೇಗೌಡ ಅವರ ಗೆಲುವು ಖಾಯಂ, ಈ ಬಗ್ಗೆ ನನಗೆ ನಿಖರ ಮಾಹಿತಿ ದೊರಕಿದೆ' ಎಂದು ಹೇಳಿದ್ದಾರೆ. ಆ ನಂತರ ಎಲ್ಲ ಸಚಿವರೂ ಕೃಷ್ಣಬೈರೇಗೌಡ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಸದಾನಂದಗೌಡ vs ಕೃಷ್ಣಬೈರೇಗೌಡ

ಸದಾನಂದಗೌಡ vs ಕೃಷ್ಣಬೈರೇಗೌಡ

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಸದಾನಂದಗೌಡ ಮತ್ತು ಜೆಡಿಎಸ್‌ ಬೆಂಬಲಿತ ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣಬೈರೇಗೌಡ ಅವರ ನಡುವೆ ನಿಕಟ ಸ್ಪರ್ಧೆ ಇದೆ. ಸಿಎಂ ಅವರು ಸಚಿವ ಸಂಪುಟ ಸಭೆಯಲ್ಲಿ ನುಡಿದ ಭವಿಷ್ಯಕ್ಕೆ ಗುಪ್ತಚರ ಇಲಾಖೆಯ ವರದಿಯೇ ಕಾರಣ ಎನ್ನಲಾಗುತ್ತಿದೆ.

ಲೋಕಸಭೆಗೆ ಸ್ಪರ್ಧಿಸಲು ದೇವೇಗೌಡರೇ ಕಾರಣ ಎಂದ ಕಾಂಗ್ರೆಸ್ ಸಚಿವ ಲೋಕಸಭೆಗೆ ಸ್ಪರ್ಧಿಸಲು ದೇವೇಗೌಡರೇ ಕಾರಣ ಎಂದ ಕಾಂಗ್ರೆಸ್ ಸಚಿವ

ಸದಾನಂದಗೌಡ ವಿರುದ್ಧ ಆಡಳಿತವಿರೋಧಿ ಅಲೆ

ಸದಾನಂದಗೌಡ ವಿರುದ್ಧ ಆಡಳಿತವಿರೋಧಿ ಅಲೆ

ಸದಾನಂದಗೌಡ ಅವರು ಎರಡು ಬಾರಿ ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿ ಈ ಬಾರಿ ಕೇಂದ್ರ ಮಂತ್ರಿ ಸಹ ಆಗಿದ್ದಾರೆ, ಈ ನಡುವೆ ಕ್ಷೇತ್ರದಲ್ಲಿ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಕೆಲಸ ಮಾಡಿದೆ ಎನ್ನಲಾಗಿದೆ. ಸದಾನಂದಗೌಡ ಅವರ ವಿರುದ್ಧದ ಅಲೆಯೇ ಕೃಷ್ಣಬೈರೇಗೌಡ ಅವರಿಗೆ ವರವಾಗಿ ಪರಿಣಮಿಸಿ ಅವರ ಹಾದಿ ಸುಗಮಗೊಳಿಸಿದೆ ಎಂದು ಮಾತುಗಳು ಕೇಳಿಬರುತ್ತಿವೆ.

ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು? ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು?

ಬೆಂ.ಉತ್ತರ ಕ್ಷೇತ್ರದಿಂದ ದೇವೇಗೌಡ ಸ್ಪರ್ಧಿಸಬೇಕಿತ್ತು

ಬೆಂ.ಉತ್ತರ ಕ್ಷೇತ್ರದಿಂದ ದೇವೇಗೌಡ ಸ್ಪರ್ಧಿಸಬೇಕಿತ್ತು

ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಉಮೇದು ಹೊಂದಿದ್ದರು, ಆದರೆ ಆ ನಂತರ ನಡೆದ ರಾಜಕೀಯ ಲೆಕ್ಕಾಚಾರದಿಂದಾಗಿ ಹೆಚ್ಚು ಸುರಕ್ಷಿತವಾದ ತುಮಕೂರನ್ನು ಆಯ್ದುಕೊಂಡರು. ಅಲ್ಲಿ ಅವರು ಬಿಜೆಪಿಯ ಜಿ.ಎಸ್.ಬಸವರಾಜು ಅವರ ವಿರುದ್ಧ ಸ್ಪರ್ಧಿಸಿದ್ದಾರೆ.

ಸದಾ ನಗುತ್ತಲಿರುವ ಸದಾನಂದಗೌಡರು ಈ ಪ್ರಶ್ನೆಗೆ ಸಿಟ್ಟಾಗಿದ್ದೇಕೆ? ಸದಾ ನಗುತ್ತಲಿರುವ ಸದಾನಂದಗೌಡರು ಈ ಪ್ರಶ್ನೆಗೆ ಸಿಟ್ಟಾಗಿದ್ದೇಕೆ?

ಎಲ್ಲ ಕ್ಷೇತ್ರಗಳ ಗುಪ್ತಚರ ವರದಿ?

ಎಲ್ಲ ಕ್ಷೇತ್ರಗಳ ಗುಪ್ತಚರ ವರದಿ?

ಕುಮಾರಸ್ವಾಮಿ ಅವರಿಗೆ ಬಹುತೇಕ ಎಲ್ಲ ಕ್ಷೇತ್ರ ಫಲಿತಾಂಶದ ಬಗ್ಗೆ ಗುಪ್ತಚರ ಇಲಾಖೆ ವರದಿಗಳು ಕೈಸೇರಿವೆ ಎಂಬ ಸುದ್ದಿ ಇದೆ. ಮಂಡ್ಯದಲ್ಲಿ ಭಾರಿ ನಿಕಟ ಪೈಪೋಟಿ ಏರ್ಪಟ್ಟಿದ್ದು, ಸುಮಲತಾ ಅವರ ಕೈ ಮೇಲಾಗುವ ಬಗ್ಗೆಯೂ ಗುಪ್ತಚರ ಇಲಾಖೆ ವರದಿ ಬಂದಿದೆ ಎನ್ನಲಾಗಿದೆ.

English summary
CM Kumaraswamy gets intelligence report about Bengaluru North constituency. Krishna Byre Gowda may win against BJP Sadananda Gowda in Bengaluru North said intelligence report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X