ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಇಂಟೆಲ್ ಇನ್ ಸೈಡ್, ಗಾರ್ಬೇಜ್ ಔಟ್ ಸೈಡ್!

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 08: ಆಸ್ತಿತೆರಿಗೆ ಪಾವತಿಸದ ಪ್ರತಿಷ್ಠಿತ ಇಂಟೆಲ್ ಸಂಸ್ಥೆ ಮುಂದೆ ಕಸದ ವಾಹನಗಳನ್ನು ನಿಲ್ಲಿಸಿ ಬಿಬಿಎಂಪಿ ವಿಶಿಷ್ಟವಾಗಿ ಎಚ್ಚರಿಕೆ ನೀಡಿದೆ. ಇಂಟೆಲ್ ಸಂಸ್ಥೆ ಸುಮಾರು 34 ಕೋಟಿ ರು ಬಾಕಿ ಉಳಿಸಿಕೊಂಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿನೂತನ ವಿಧಾನ ಅನುಸರಿಸುತ್ತಾ ಬಂದಿರುವುದು ಗೊತ್ತಿರಬಹುದು. ಸಾಲಗಾರ ಸಂಸ್ಥೆಗಳ ಮುಂದೆ ತಮಟೆ ಬಾರಿಸುವುದು, ದಿನ ಪತ್ರಿಕೆಯಲ್ಲಿ ವರದಿ, ನೋಟಿಸ್ ಜಾರಿಗೊಳಿಸುವುದು ಕೊನೆಗೆ ದಾಳಿ ಮಾಡುವುದು ನಡೆಸುವುದು ಗೊತ್ತೇ ಇದೆ. [ಮಾನ್ಯತಾ ಟೆಕ್ ಪಾರ್ಕ್ ಕಚೇರಿ ಜಪ್ತಿ ಮಾಡಿದ ಬಿಬಿಎಂಪಿ]

ಈಗ ಕಸ ಸಂಗ್ರಹಣಾ ವಾಹನಗಳನ್ನು ಕಚೇರಿ ಎದುರು ಸಾಲಾಗಿ ನಿಲ್ಲಿಸಲಾಗುತ್ತಿದೆ. ತೆರಿಗೆ ಪಾವತಿಸದಿದ್ದರೆ ಕಚೇರಿ ಆವರಣದೊಳಗೆ ಕಸ ಸುರಿಯುವುದಾಗಿ ಬಿಬಿಎಂಪಿ ಅಧಿಕಾರಿಗಳು ಎಂದು ಎಚ್ಚರಿಸಿದ್ದಾರೆ.

Intel Bengaluru in trouble over Tax issue BBMP

ಬೆಂಗಳೂರಿನ ಬೆಳ್ಳಂದೂರು ಬಳಿ ಇರುವ ಇಂಟೆಲ್ ಸಂಸ್ಥೆ ಒಟ್ಟು 34 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ತೆರಿಗೆ ಪಾವತಿಸುವಂತೆ ಇಂಟೆಲ್ ಸಂಸ್ಥೆಗೆ ಮುಂಚಿತವಾಗಿ ನೋಟಿಸ್ ನೀಡಲಾಗಿದೆ. ಆದರೆ, ಇದಕ್ಕೆ ಸಂಸ್ಥೆಯಿಂದ ಪ್ರತಿಕ್ರಿಯೆ ಸಿಗದ ಹಿನ್ನಲೆಯಲ್ಲಿ ಬಿಬಿಎಂಪಿ ಈ ಕ್ರಮಕ್ಕೆ ಮುಂದಾಗಿದೆ.

ನಗರದ 10 ಪ್ರತಿಷ್ಠಿತ ಕಂಪನಿಗಳು ತಮ್ಮ ಕಟ್ಟಡದ ವಿಸ್ತೀರ್ಣದ ಲೆಕ್ಕ ತಪ್ಪಾಗಿ ಘೋಷಿಸಿಕೊಂಡಿದ್ದಕ್ಕೆ ದಂಡ ಹಾಗೂ ಬಡ್ಡಿ ಸಮೇತ ಬಾಕಿ ವಸೂಲಿ ಮಾಡಲು ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ ಶಿವರಾಜು ಹೇಳಿದ್ದಾರೆ.[ಬಾಕಿ ಉಳಿಸಿಕೊಂಡಿರುವ ಟಾಪ್ 10 ಕಂಪನಿಗಳು]

ಇತ್ತೀಚೆಗೆ ಮಾನ್ಯತಾ ಟೆಕ್ ಪಾರ್ಕ್ ಮೇಲೆ ದಾಳಿ ನಡೆಸಿದ್ದ ಬಿಬಿಎಂಪಿ ಅಧಿಕಾರಿಗಳು, ಸಂಸ್ಥೆಯ ಆಡಳಿತ ಕಚೇರಿ ಬಂದ್ ಮಾಡಿ, ಆಸ್ತಿ ಜಪ್ತಿ ಮಾಡಿದ್ದನ್ನು ಸ್ಮರಿಸಬಹುದು. 10 ಕಂಪನಿಗಳಿಂದ ಒಟ್ಟು 231.66 ಕೋಟಿ ರು ವಸೂಲಿ ಮಾಡಲು ನೋಟಿಸ್‌ ನೀಡಲಾಗಿದೆ.

ಕೆಎಂಸಿ ಕಾಯ್ದೆಯ ಸೆಕ್ಷನ್‌ 14, ನಿಯಮ 26 ಹಾಗೂ 27ರ ಪ್ರಕಾರ ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಲಾಗುತ್ತಿದೆ. ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

English summary
Intel Bengaluru in trouble over not paying property tax over Rs 34 Cr. BBMP garbage collection lorries parked in front of the Bellandur unit of Intel today and demanded reply from Intel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X