• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನುಭೂತಿ-ಸಂಗೀತ ದಿಗ್ಗಜರ ಜೊತೆ ಆತ್ಮೀಯ ರಸಸಂಜೆ

By Mahesh
|

ಬೆಂಗಳೂರು, ನ.25: ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಅವರ ಗೋಡ್ಖಿಂಡಿ ಮ್ಯೂಸಿಕ್ ಅಂಡ್ ಎಜುಟೈನ್ಮೆಂಟ್ ಹಾಗೂ ಇನ್ ಸಿಂಕ್ ಟಿವಿ ಚಾನೆಲ್ ಸಹಯೋಗದೊಂದಿಗೆ 'ಅನುಭೂತಿ'-ಸಂಗೀತ ದಿಗ್ಗಜರ ಜೊತೆ ಆತ್ಮೀಯ ರಸಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಗ್ಲೋಬಲ್ ಕಮ್ಯೂನಿಟಿ ಆಫ್ ಇಂಡಿಯನ್ ಮ್ಯೂಸಿಕ್ ಗೆ ಚಾಲನೆ ನೀಡಲಾಗುತ್ತದೆ ಹಾಗೂ ಇದು ಮೊಟ್ಟ ಮೊದಲ ಕಾರ್ಯಕ್ರಮ ಇದಾಗಿದೆ. ಸಂಗೀತ ಲೋಕದ ದಿಗ್ಗಜರು ಹಾಗೂ ಯುವ ಪ್ರತಿಭೆಗಳ ಸಂಗಮಕ್ಕೆ ವೇದಿಕೆ ಒದಗಿಸುವ ಮೊದಲ ಹಾಗೂ ವಿನೂತನ ಪ್ರಯೋಗ ನಿಮ್ಮ ಮುಂದಿಡಲಿದ್ದಾರೆ.[ಪಂಡಿತ್ ಗೋಡ್ಖಿಂಡಿರಿಂದ ವಿಶಿಷ್ಟ ಸಂಗೀತ ಸಾಹಸ]

ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಹಾಗೂ ಕೊಳಲು ವಾದಕ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರ ಸಂಗೀತಧಾರೆಯನ್ನು ಸವಿಯಬಹುದು. ಬಾಲಪ್ರತಿಭೆ ಷಡ್ಜ ಗೋಡ್ಖಿಂಡಿ ಅವರ ಪ್ರತಿಭಾ ಪ್ರದರ್ಶನವನ್ನು ಕಾಣಬಹುದು. ಅಪ್ಪ ಪ್ರವೀಣ್ ಹಾಗೂ ಮಗ ಷಡ್ಜ ಅವರ ಜುಗಲ್ ಬಂದಿ ಕಾರ್ಯಕ್ರಮದ ಆಕರ್ಷಣೆಯಾಗಲಿದೆ. ಇದಕ್ಕೆ ಪ್ರವೀಣ್ ಅವರ ಸೋದರ ಕಿರಣ್ ಗೋಡ್ಖಿಂಡಿ ತಬಲಾದಲ್ಲಿ ಸಾಥ್ ನೀಡಲಿದ್ದಾರೆ.

ಕಾರ್ಯಕ್ರಮ ವಿವರ:

ದಿನಾಂಕ: ನವೆಂಬರ್ 28, 2015

ಸಮಯ : 6 ಗಂಟೆ ನಂತರ

ಸ್ಥಳ: ಜ್ಞಾನಜ್ಯೋತಿ ಆಡಿಟೋರಿಯಂ, ಬೆಂಗಳೂರು

ಪಾಸ್ ದರ : 495 ಹಾಗೂ 295 ರು.

ಆನ್ ಲೈನ್ ಬುಕ್ಕಿಂಗ್ : ಬುಕ್ ಮೈ ಶೋ.ಕಾಂ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9845824725/26723855

ಪ್ರಾಯೋಜಕರು: ಟಾಟಾ ಹೌಸಿಂಗ್, ಐಸಿಐಸಿಐ ಬ್ಯಾಂಕ್, ಪುರವಂಕರ, ಅದ್ವೈತ್ ಹ್ಯುಂಡೈ, ಬೆಂಗಳೂರು ವಿಶ್ವವಿದ್ಯಾಲಯ, ಮೂವನ್ ಪಿಕ್, ಏರ್ ಟೆಲ್, ದಿ ಇಂಡಿಯನ್ ಎಕ್ಸ್ ಪ್ರೆಸ್, ಟಾಕ್ ಆಫ್ ದಿ ಟೌನ್.ಇನ್, ಬುಕ್ ಮೈ ಶೋ.

ವರ್ಷಕ್ಕೆ 6 ಕಚೇರಿಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ವಿದ್ವಾಂಸರು, ಸ್ಥಳೀಯ ಸಂಗೀತಗಾರರು, ಉದಯೋನ್ಮುಖ ಪ್ರತಿಭೆಗಳು ಪಾಲ್ಗೊಳ್ಳಲಿದ್ದಾರೆ. ಇದರ ಜೊತೆಗೆ ಪ್ರೇಕ್ಷಕರ ಜೊತೆ ಸಂವಾದ, ತರಬೇತಿ ಶಿಬಿರಗಳು, ವಿಚಾರ ಸಂಕಿರಣ ಕೂಡಾ ನಡೆಯಲಿದೆ ಎಂದು ಪ್ರವೀಣ್ ಗೋಡ್ಖಿಂಡಿ ಅವರು ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Enthral your senses and delve into an evening of melodious harmonies by world renowned musicians Pt. Shiv Kumar Sharma and Pt. Pravin Godkhindi on Nov 28, 2015. at Jnana Jyothi Auditorium, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more