ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಪಿಎಲ್ ಫಲಾನುಭವಿಗಳಿಗೆ ಫೆ.20 ರಿಂದ ತ್ವರಿತ ಕಾರ್ಡ್ ವಿತರಣೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 16: ಆದಾಯ ಪ್ರಮಾಣಪತ್ರವನ್ನು ನೀಡಿದರೆ ಬಿಪಿಎಲ್ ಕುಟುಂಬಕ್ಕೆ ಸ್ಥಳದಲ್ಲೇ ಬಿಪಿಎಲ್ ಕಾರ್ಡ್ ನೀಡುವ ಅಭಿಯಾನಕ್ಕೆ ರಾಜ್ಯ ಸರ್ಕಾರ ಫೆ.20 ರಂದು ಚಾಲನೆ ನೀಡಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಆಹಾರ ಇಲಾಖೆ ಸಚಿವ ಯು.ಟಿ. ಖಾದರ್ ಮಾತನಾಡಿಮ ಫೆ.20 ರಂದು ಅಭಿಯಾನವನ್ನು ಪ್ರಾರಂಭಿಸಲಾಗುತ್ತದೆ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ರೇಷನ್ ಕಾರ್ಡ್ ವಿತರಣೆ ಮೂರನೇ ಹಂತದಲ್ಲಿ ಬಿಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಸ್ಥಳದಲ್ಲಿಯೇ ಕಾರ್ಡ್ ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದರು.

ವರ್ಷಕ್ಕೆ 1.2 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ಸ್ಥಳದಲ್ಲಿಯೇ ತಕ್ಷಣ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ. ಪಡಿತರ ಚೀಟಿ ಮುದ್ರಣ ಪ್ರತಿಯನ್ನು ಫಲಾನುಭವಿಗಳ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿಕೊಡಲಾಗುತ್ತದೆ. ಈ ವ್ಯವಸ್ಥೆಯನ್ನು ವಿಕಲಾಂಗರು, ಪಿಂಚಣಿದಾರರು ಮತ್ತು ಇತರರಿಗೂ ವಿಸ್ತರಿಸಲಾಗಿದೆ. ಹೊಸ ಕಾರ್ಡ್ ಗಳಲ್ಲದೆ ಈಗಿರುವ ಬಿಪಿಎಲ್ ಕಾರ್ಡ್ ಗಳನ್ನು ನವೀಕರಿಸಲಿಚ್ಛಿಸುವವರು ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

Instant BPL card facilities will resume from February 20
English summary
State Government is launching new program for distribution of BPL cards. According to that poor people will get BPL card instantly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X