ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮುಂದಿನ ಆರು ತಿಂಗಳಲ್ಲಿ 140 ಇವಿ ಚಾರ್ಜರ್ ಅಳವಡಿಕೆ

|
Google Oneindia Kannada News

ಬೆಂಗಳೂರು, ಜೂನ್ 15: ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಮುಂದಿನ ಆರು ತಿಂಗಳಲ್ಲಿ 140 ಇವಿ ಚಾರ್ಜರ್ ಅಳವಡಿಸುವುದಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹೇಳಿದೆ.

ಕರ್ನಾಟಕದಾದ್ಯಂತ 1,000 ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಖಾಸಗಿ-ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸ್ಥಾಪಿಸಲು ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಬೆಂಗಳೂರು: ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಸ್ಥಳದ ಕೊರತೆ ಬೆಂಗಳೂರು: ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಸ್ಥಳದ ಕೊರತೆ

"ರಾಜ್ಯದಲ್ಲಿ ಏಳು ಸ್ಮಾರ್ಟ್ ಸಿಟಿಗಳಿವೆ ಮತ್ತು ಈ ಸ್ಮಾರ್ಟ್ ಸಿಟಿಗಳಲ್ಲಿ ಸುಮಾರು 50 ಪ್ರತಿಶತ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ ಮತ್ತು ಬೆಂಗಳೂರು ಸುಮಾರು 150 ಚಾರ್ಜಿಂಗ್ ಸ್ಟೇಷನ್ ಹೊಂದಿದೆ. ಉಳಿದ ಚಾರ್ಜಿಂಗ್ ಸ್ಟೇಷನ್‌ಗಳನ್ನು ರಾಜ್ಯಾದ್ಯಂತ ಪ್ರತಿ ಜಿಲ್ಲಾ ಕೇಂದ್ರ ಮತ್ತು ಹೆದ್ದಾರಿಗಳಲ್ಲಿ ಏಕರೂಪವಾಗಿ ಹಂಚಿಕೆ ಮಾಡಲಾಗಿದೆ. ಸ್ಥಳಗಳನ್ನು ಗುರುತಿಸಲು ಮತ್ತು ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಸ್ಥಳೀಯವಾಗಿ ಕಾರ್ಯವನ್ನು ಸಂಘಟಿಸಲು ನಾವು ಇತರ ವಿತರಣಾ ಕಂಪನಿಗಳನ್ನು ತೊಡಗಿಸಿಕೊಂಡಿದ್ದೇವೆ" ಎಂದು ಅವರು ಹೇಳಿದರು.

ಎಲೆಕ್ಟ್ರಿಕ್ ವಾಹನ ಬ್ಯಾಟರಿ ವಿನಿಮಯ ಸಹಕಾರಿ ಹೇಗೆ? ಎಲೆಕ್ಟ್ರಿಕ್ ವಾಹನ ಬ್ಯಾಟರಿ ವಿನಿಮಯ ಸಹಕಾರಿ ಹೇಗೆ?

ಪ್ರಸ್ತುತ, ಬೆಸ್ಕಾಂ ಬೆಂಗಳೂರು ನಗರದಲ್ಲಿ 136 ಇವಿ ಚಾರ್ಜರ್‌ಗಳನ್ನು ಕಾರ್ಯ ನಿರ್ವಹಿಸುತ್ತಿದೆ. ಮಾರ್ಚ್‌ನಲ್ಲಿ, ಭಾರೀ ಕೈಗಾರಿಕೆಗಳ ಇಲಾಖೆಯು ಫೇಮ್ (FAME) ಸ್ಕೀಮ್ ಹಂತ-2 ಮೂಲಕ ರಾಜ್ಯಕ್ಕೆ 172 EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಮಂಜೂರು ಮಾಡಿತ್ತು. ಅದರಲ್ಲಿ ಬೆಂಗಳೂರು ನಗರವು 152 ಚಾರ್ಜಿಂಗ್ ಸ್ಟೇಷನ್‌ಗಳನ್ನು ಹಂಚಿಕೆ ಮಾಡಿದೆ.

ಬೆಂಗಳೂರಿನಾದ್ಯಂತ ಚಾರ್ಜಿಂಗ್ ಸ್ಟೇಷನ್‌

ಬೆಂಗಳೂರಿನಾದ್ಯಂತ ಚಾರ್ಜಿಂಗ್ ಸ್ಟೇಷನ್‌

ಬೆಂಗಳೂರಿನಾದ್ಯಂತ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಬೆಸ್ಕಾಂ, ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್‌ಟಿಪಿಸಿ) ಮತ್ತು ರಾಜಸ್ಥಾನ ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟ್ ಲಿಮಿಟೆಡ್ (ಆರ್‌ಇಐಎಲ್) ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ಹೇಳಿದರು.

ಬೆಸ್ಕಾಂ ಫೆಬ್ರವರಿ-2022 ರಲ್ಲಿ ಸುಮಾರು 6,500 ಮೆಗಾ ವ್ಯಾಟ್ ಗರಿಷ್ಠ ಲೋಡ್ ಅನ್ನು ದಾಖಲಿಸಿದೆ ಅದರಲ್ಲಿ ಸುಮಾರು 2,500 ಮೆಗಾ ವ್ಯಾಟ್ ಲೋಡ್ ಬೆಂಗಳೂರು ನಗರ ಜಿಲ್ಲೆಗೆ ಸರಬರಾಜಾಗಿದೆ. ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ಸರ್ಕಾರದ ಉತ್ತೇಜನದೊಂದಿಗೆ, ಮುಂದಿನ ದಿನಗಳಲ್ಲಿ ವಿತರಣಾ ಗ್ರಿಡ್‌ನಲ್ಲಿ ಇವಿ ಲೋಡ್‌ಗಳು ತುಂಬಾ ಹೆಚ್ಚಾಗುವ ಸಾಧ್ಯತೆಯಿದೆ.

ಐಎಸ್‌ಜಿಎಫ್ (ISGF) ಜೊತೆಗಿನ ಸಮನ್ವಯದಲ್ಲಿ, ಗ್ರಿಡ್‌ನಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಪ್ರಭಾವದ ಕುರಿತು ಬೆಸ್ಕಾಂ ಅಧ್ಯಯನವನ್ನು ನಡೆಸಿದೆ. ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಒಟ್ಟಾಗಿ ಇವಿ ಅಳವಡಿಕೆಗೆ ಅಗತ್ಯವಾದ ಕಾಮಗಾರಿಗಳನ್ನು ಕೈಗೊಳ್ಳಲು ಸಿದ್ಧವಾಗಿವೆ ಎಂದು ಚೋಳನ್ ಹೇಳಿದರು.

ಇವಿ ಚಾರ್ಜಿಂಗ್ ಸೆಂಟರ್ ಅಭಿಯಾನ

ಇವಿ ಚಾರ್ಜಿಂಗ್ ಸೆಂಟರ್ ಅಭಿಯಾನ

ಇಂಧನ ಇಲಾಖೆಯು ಜೂನ್ 23 ರಿಂದ 30 ರವರೆಗೆ ಇವಿ ಚಾರ್ಜಿಂಗ್ ಸೆಂಟರ್ ಅಭಿಯಾನ ನಡೆಸಲಿದೆ. ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ಭಾರತದಲ್ಲಿರುವ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರೊಂದಿಗೆ ಜೂನ್ 9 ರಂದು ಕರ್ನಾಟಕ ಇವಿ ಜಾಗೃತಿ ಪೋರ್ಟಲ್ ಇವಿ ಜಾಗೃತಿಗೆ ಚಾಲನೆ ನೀಡಿದ್ದರು.

ಇ-ಮೊಬಿಲಿಟಿ ಕುರಿತು ರಾಜ್ಯ-ನಿರ್ದಿಷ್ಟ ಮಾಹಿತಿ ಒದಗಿಸುವ ಮೂಲಕ, ಪೋರ್ಟಲ್ ರಾಜ್ಯದ ಗುರಿಗಳು, ಪ್ರೋತ್ಸಾಹಕಗಳು, ಬೆಂಬಲ ಕಾರ್ಯವಿಧಾನಗಳು ಮತ್ತು ವಿದ್ಯುತ್ ಚಲನಶೀಲತೆಗೆ ಸಂಬಂಧಿಸಿದ ಉಪಕ್ರಮಗಳ ಬಗ್ಗೆ ಒಳನೋಟಗಳನ್ನು ಒದಗಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.

ಜಾಗತಿಕ ಇವಿ ಲೈಟ್‌ಹೌಸ್ ಸಿಟಿ

ಜಾಗತಿಕ ಇವಿ ಲೈಟ್‌ಹೌಸ್ ಸಿಟಿ

'ಬೆಂಗಳೂರು ಅನ್ನು ಭಾರತದಲ್ಲಿ ಜಾಗತಿಕ ಇವಿ ಲೈಟ್‌ಹೌಸ್ ಸಿಟಿಯಾಗಿ ಪರಿವರ್ತಿಸುವ ಮಾರ್ಗಸೂಚಿ' ಎಂಬ ಶೀರ್ಷಿಕೆಯ ವರದಿಯನ್ನು ಸಚಿವ ಸುನಿಲ್ ಕುಮಾರ್ ಬಿಡುಗಡೆ ಮಾಡಿದ್ದಾರೆ.

2021ರ ಹೊತ್ತಿಗೆ, ಬೆಂಗಳೂರಿನಲ್ಲಿ 17,289 ದ್ವಿಚಕ್ರ ವಾಹನಗಳ ಎಲೆಕ್ಟ್ರಿಕ್ ವಾಹನಗಳಿವೆ, ಒಂದು ವರದಿಯ ಪ್ರಕಾರ 2030 ರಲ್ಲಿ ಈ ಸಂಕ್ಯೆ 1,918,434 ತಲುಪುತ್ತದೆ. ಎಲೆಕ್ಟ್ರಿಕ್ ವಾಹನಗಳನ್ನು ಪೂರೈಸಲು, 2030ರ ವೇಳೆಗೆ ನಗರದಲ್ಲಿ 58,000 ಚಾರ್ಜಿಂಗ್ ಸ್ಟೇಷನ್‌ಗಳ ಅಗತ್ಯವಿದೆ.

ಖಾಸಗಿ ಚಾರ್ಜರ್ ಕೇಂದ್ರಗಳು

ಖಾಸಗಿ ಚಾರ್ಜರ್ ಕೇಂದ್ರಗಳು

ಬೆಸ್ಕಾಂನ ಇವಿ ಚಾರ್ಜಿಂಗ್ ಕೇಂದ್ರಗಳ ಜೊತೆಗೆ, ಬೆಂಗಳೂರು ನಗರದಲ್ಲಿ 300 ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿವೆ. ಬೆಂಗಳೂರಿನ ಇವಿ ಚಾರ್ಜಿಂಗ್ ಜಾಗದಲ್ಲಿ ಸಕ್ರಿಯವಾಗಿರುವ ಅಥರ್ ಎನರ್ಜಿ, ರೈಡ್ಸ್ (rydS), ಮಹೀಂದ್ರಾ ಎಲೆಕ್ಟ್ರಿಕ್, ಲಿಥಿಯಂ ಅರ್ಬನ್ ಟೆಕ್ನಾಲಜೀಸ್ ಮತ್ತು ಇತರ ಸಂಸ್ಥೆಗಳು ಸೇರಿವೆ. ಬೆಂಗಳೂರಿನಲ್ಲಿರುವ ಜಿಮ್‌ಗಳು, ಕೆಫೆಗಳು, ಟೆಕ್ ಪಾರ್ಕ್‌ಗಳು ಮತ್ತು ಮಾಲ್‌ಗಳಲ್ಲಿ ಈ ಕಂಪನಿಗಳು ಚಾರ್ಜಿಂಗ್ ಸ್ಟೇಷನ್‌ಗಳು ಸ್ಥಾಪಿಸಿವೆ ಎಂದು ವರದಿಯಲ್ಲಿ ತಿಳಿಸಿದೆ.

English summary
The Bangalore Electricity Supply Company (BESCOM) said it will add 140 electric vehicle chargers in the next six months across Bengaluru Urban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X