ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತನ್ನ ಮನೆಯಲ್ಲೇ ಕಳ್ಳತನ ಮಾಡಿ ವಿದ್ಯಾರ್ಥಿ ಹಣ ನೀಡಿದ್ದಾದ್ರು ಯಾರಿಗೆ?

|
Google Oneindia Kannada News

ಬೆಂಗಳೂರು, ಏ.5: ಇನ್‌ಸ್ಟಾಗ್ರಾಂನಲ್ಲಿ ಆಕ್ಷೇಪಾರ್ಹ ಫೋಟೊ ಹಾಕುವುದಾಗಿ ಬೆದರಿಸಿ ವಂಚಕನೊಬ್ಬ ವಿದ್ಯಾರ್ಥಿಯಿಂದ ಬರೋಬ್ಬರಿ 6.4 ಲಕ್ಷ ರೂ ದೋಚಿದ್ದಾನೆ.

ಬುಧವಾರ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಲಾಗಿದ್ದು , 21 ವರ್ಷದ ಆರೋಪಿಯನ್ನು ಗುರುತಿಸಿರುವ ಪೊಲೀಸರು ಸದ್ಯದಲ್ಲಿಯೇ ಆತನನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್ ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್

ಯುವತಿ ಹೆಸರಿನಲ್ಲಿ ಆತ ನಕಲಿ ಖಾತೆ ಆರಂಭಿಸಿದ್ದ ಬಳಿಕ ವಿದ್ಯಾರ್ಥಿಯು ಇನ್‌ಸ್ಟಾಗ್ರಾಮ್‌ನಲ್ಲಿ ವಿದ್ಯಾರ್ಥಿಗೆ ಸ್ನೇಹಿತನಾಗಿದ್ದ, ಆತ ಆರೋಪಿಯನ್ನು ಹುಡುಗಿಯೆಂದೇ ಅಂದುಕೊಂಡಿದ್ದ.

Instagram impostor extorts Rs 6 lakh from Bengaluru student

ಆತನ ಬಳಿ ಕೆಲವು ಆಕ್ಷೇಪಾರ್ಹ ಫೋಟೊಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ ಹಾಗಾಗಿ ವಿದ್ಯಾರ್ಥಿ ಮನೆಯಲ್ಲಿಯೇ ಕಳ್ಳತನ ಮಾಡಿ ಆತನಿಗೆ ಹಣ ನೀಡಿದ್ದ.

ಮೊದಲು 50 ಸಾವಿರ ರೂ, ಫೆಬ್ರವರಿ ತಿಂಗಳಲ್ಲಿ ಅದೇ ಸ್ಥಳದಲ್ಲಿ 1.5 ಲಕ್ಷ ನೀಡಿದ. ಬಳಿಕ 36,ಸಾವಿರ, ಬೆಳ್ಳಿಯ ಸಾಮಾನನ್ನು ನೀಡಿದ. ಮತ್ತೆ ಮತ್ತೆ ಬೆದರಿಕೆ ಹಾಕಿದಾಗ 4 ಲಕ್ಷ ರೂಪಾಯಿ ಮತ್ತು ಬೆಳ್ಳಿ ಸಾಮಾನುಗಳನ್ನು ಕೂಡ ನೀಡಿದ್ದ.

English summary
An impostor on Instagram tricked a 17-year-old college student into sharing his nude photographs and exported Rs 6.4 lakh and ornaments through blackmail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X