ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿದ್ಯಾರ್ಥಿನಿಯರ ಜಗಮೆಚ್ಚಿದ ಸಾಧನೆ

By ಅನಂತ ಕೃಷ್ಣನ್
|
Google Oneindia Kannada News

ಬೆಂಗಳೂರು, ಜೂ. 29: ಪ್ರಧಾನಿ ನರೇಂದ್ರ ಮೋದಿ ಅವರ ನೀತಿಯಿಂದ ಸ್ಫೂರ್ತಿ ಪಡೆದ ಬೆಂಗಳೂರಿನ 5 ಜನ ವಿದ್ಯಾರ್ಥಿನಿಯರು ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ವಿದ್ಯಾರ್ಥಿನಿಯರು ಅಭಿವೃದ್ಧಿ ಪಡಿಸಿದ ಮೊಬೈಲ್ ಅಪ್ಲಿಕೇಶನ್ 10 ಸಾವಿರ ಅಮೆರಿಕನ್ ಡಾಲರ್ ಮೊತ್ತದ ಬಹುಮಾನವನ್ನು ಗೆದ್ದುಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.[ವಿಮಾನ ನಿಲ್ದಾಣದಲ್ಲೇ ಮಕ್ಕಳನ್ನು ಮಲಗಿಸಿದ ಏರ್ ಇಂಡಿಯಾ!]

students

ಬೆಂಗಳೂರಿನ ನ್ಯೂ ಹೊರೈಜಾನ್ ಪಬ್ಲಿಕ್ ಶಾಲೆಯ (ಎನ್ ಎಚ್ ಪಿಎಸ್) 9 ನೇ ತರಗತಿಯ ವಿದ್ಯಾರ್ಥಿನಿಯರು ತಯಾರಿಸಿರುವ ಸೆಲೆಕ್ಸೋ (Sellixo ) ಅಪ್ಲಿಕೇಶನ್ ಜಗ ಮನ್ನಣೆ ಪಡೆದುಕೊಂಡಿದೆ. ನೀವು ಈ ಅಪ್ಲಿಕೇಶನ್ ಮೂಲಕ ಒಣ ಕಸ ಮಾರಾಟ ಮತ್ತು ಖರೀದಿ ಮಾಡಬಹುದು.

ಅಡೋಬ್ ಫೌಂಡೇಶನ್ ನೇತೃತ್ವದ ಟೆಕ್ನೋವೇಶನ್ ಸ್ಫರ್ಧೆಗೆ ಪ್ರಪಂಚದಾದ್ಯಂತ ಅತಿ ಹೆಚ್ಚಿನ ಪ್ರಾಮುಖ್ಯವಿದೆ. Team Pentechan' ಹೆಸರಿನಲ್ಲಿ ಭಾಗವಹಿಸಿದ್ದ ಬೆಂಗಳೂರು ಬಾಲಕಿಯರು ಜೂನ್ 25 ರಂದು ನಡೆದ ಫೈನಲ್ ನಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ.

students

ಹೆಸರಾಂತ ಮಹಿಳಾ ತಂತ್ರಜ್ಞರ ಎದುರು ಬಾಲಕಿಯರು ತಮ್ಮ ಕೌಶಲ್ಯ ಪ್ರದರ್ಶನ ಮಾಡಿದರು. ಈ ಬಗ್ಗೆ ಮಾಹಿತಿ ನೀಡಿದ ಎನ್ ಎಚ್ ಪಿಎಸ್ ಶಾಲೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಮೋದಿ ಅವರ ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ ಮತ್ತು ಸೇವ್ ಗರ್ಲ್ ಚೈಲ್ಡ್ ಅಭಿಯಾನದಿಂದ ಪ್ರೇರೇಪಿತರಾಗಿ ಇಂಥ ಸಂಶೋಧನೆ ಮಾಡಿದ್ದಾರೆ ಎಂದು ತಿಳಿಸಿದರು.

ಅಪ್ಲಿಕೇಶನ್ ಏನು ಮಾಡುತ್ತದೆ?
ಮೊದಲೇ ಹೇಳಿದಂತೆ ಒಣ ಕಸ ಖರೀದಿ ಮತ್ತು ಮಾರಾಟ ಈ ಅಪ್ಲಿಕೇಶನ್ ನಿಂದ ಸಾಧ್ಯವಿದೆ. ಚಿಕ್ಕ ಚಿಕ್ಕ ಅಂಗಡಿ ಮಾಲಿಕರು, ಅಪಾರ್ಟ್ ಮೆಂಟ್, ರಿಸೈಕ್ಲಿಂಗ್ ಏಜೆಸ್ಸಿ, ಕಸ ಸಂಗ್ರಹಣೆದಾರರಿಗೆ ಇದು ಲಾಭದಾಯಕವಾಗಿ ಪರಿಣಮಿಸುತ್ತದೆ.

ಒನ್ಇಂಡಿಯಾ ದೊಂದಿಗೆ ಮಾತನಾಡಿ ಬಾಲಕಿಯರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಎನ್ ಎಚ್ ಪಿಎಸ್ ಸಂಸ್ಥೆ ಅಧ್ಯಕ್ಷ ಮೋಹನ್ ಮಂಘ್‌ ನಾನಿ, ಸಂಜನಾ ವಸಂತ, ಅನುಪಮ ಎನ್, ಮಹಿಮಾ ಮಹಂದಾಲೆ, ಸ್ವಾತಿ ಪಿ ರಾವ್ ಮತ್ತು ನವ್ಯಶ್ರೀ ಬಿ ತಂಡದ ಸಾಧಕರು ಎಂದು ತಿಳಿಸಿದರು.

students

ಶಾಲೆ ಆಡಳಿತ ಮಂಡಳಿ ಎಲ್ಲ ವಿದ್ಯಾರ್ಥಿನಿಯರಿಗೆ ತಲಾ 25 ಸಾವಿರ ರು. ಬಹುಮಾನ ಘೋಷಣೆ ಮಾಡಿದೆ. ಸಂಸ್ಥೆ ಇತ್ತೀಚೆಗೆ ಸ್ವಚ್ಛ ಭಾರತ ಅಭಿಯಾನಕ್ಕೆ 5 ಕೋಟಿ ರು. ದೇಣಿಗೆ ನೀಡಿತ್ತು ಎಂದು ತಿಳಿಸಿದರು.

ಜನವರಿಯಿಂದ ಆರಂಭ
ಅಪ್ಲಿಕೇಶನ್ ನ ಆರಂಭಿಕ ಕೆಲಸಗಳು ಈ ವರ್ಷದ ಜನವರಿಯಿಂದಲೇ ಆರಂಭವಾಗಿದ್ದವು. ಸ್ಫರ್ಧೆಯಲ್ಲಿ 64 ದೇಶಗಳಿಂದ ಸುಮಾರು 400 ತಂಡಗಳು ಭಾಗವಹಿಸಿದ್ದವು. ಅದರಲ್ಲಿ 10 ತಂಡಗಳು ಫೈನಲ್ ತಲುಪಿದ್ದವು.

students

ವಿದ್ಯಾರ್ಥಿನಿಯರು ತಮ್ಮ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು ಎಲ್ಲರ ಸಹಕಾರ ಮತ್ತು ಒಟ್ಟಾಗಿ ಪರಿಶ್ರಮ ಪಟ್ಟಿದ್ದು ಸಾಧನೆ ಮಾಡಲು ನೆರವಾಯಿತು ಎಂದು ಹೆಮ್ಮೆ ವ್ಯಕ್ತಪಡಿಸುತ್ತಾರೆ. ಅಪ್ಲಿಕೇಶನ್ ಫೇಸ್ ಬುಕ್ ಪೇಜ್ ಸಹ ವೀಕ್ಷಣೆ ಮಾಡಬಹುದು.
English summary
Inspired by Prime Minister Narendra Modi's series of initiatives, five girl students from Bengaluru made India proud by becoming world-beaters at the Technovation Challenge 2015 held at San Francisco last week.Team Pentechan, - all 9th standard students (14 years old), from the New Horizon Public School (NHPS) reached the summit at the global pitch and bagged $10,000 as seed funding to further in developing their mobile App.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X