ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ತಗುಲಿರುವ ಶಂಕೆ: ಬೆಂಗಳೂರಿನ ಇನ್ಫೋಸಿಸ್ ಕಚೇರಿ ಸ್ಥಳಾಂತರ

|
Google Oneindia Kannada News

ಬೆಂಗಳೂರು, ಮಾರ್ಚ್ 14: ನಗರದ ಇನ್ಫೋಸಿಸ್ ಕಚೇರಿ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ತನ್ನ ಕಚೇರಿಯೊಂದನ್ನು ಸ್ಥಳಾಂತರ ಮಾಡಿದೆ.

ನಮ್ಮಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವ ಶಂಕೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಐಐಪಿಎಂ ಕಟ್ಟಡದಲ್ಲಿನ ಕಚೇರಿಯನ್ನು ಸ್ಥಳಾಂತರ ಮಾಡಿದ್ದೇವೆ ಎಂದು ಇನ್ಫೋಸಿಸ್ ನ ಬೆಂಗಳೂರು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಗುರುರಾಜ್ ದೇಶಪಾಂಡೆ ಇ-ಮೇಲ್ ಮೂಲಕ ತಿಳಿಸಿದ್ದಾರೆ.

ಹನಿಮೂನ್ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದ ಟೆಕ್ಕಿ ದಂಪತಿಗೆ ಕೊರೊನಾ ಸೋಂಕುಹನಿಮೂನ್ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದ ಟೆಕ್ಕಿ ದಂಪತಿಗೆ ಕೊರೊನಾ ಸೋಂಕು

ವಿಸ್ತಾರವಾದ ಕ್ಯಾಂಪಸ್ ಹೊಂದಿರುವ ಇನ್ಫೋಸಿಸ್‌

ವಿಸ್ತಾರವಾದ ಕ್ಯಾಂಪಸ್ ಹೊಂದಿರುವ ಇನ್ಫೋಸಿಸ್‌

1990ರಿಂದ ಇನ್ಫೋಸಿಸ್ ಬೆಂಗಳೂರಿನಲ್ಲಿ ವಿಸ್ತಾರವಾದ ಕ್ಯಾಂಪಸ್ ನ್ನು ಹೊಂದಿದ್ದು 12ಕ್ಕೂ ಹೆಚ್ಚು ಕಟ್ಟಡಗಳನ್ನು ಹೊಂದಿದೆ.ಇದರಲ್ಲಿ ಇನ್ಫೋಸಿಸ್ ನ ಅಭಿವೃದ್ಧಿ ಕೇಂದ್ರ ಮತ್ತು ಕಾರ್ಪೋರೇಟ್ ಕಚೇರಿ ಕೂಡ ಇದೆ.

ಉದ್ಯೋಗಿಗಳ ಆರೋಗ್ಯ ರಕ್ಷಣೆಗೆ ಆದ್ಯತೆ

ಉದ್ಯೋಗಿಗಳ ಆರೋಗ್ಯ ರಕ್ಷಣೆಗೆ ಆದ್ಯತೆ

ನಮ್ಮ ಉದ್ಯೋಗಿಗಳ ರಕ್ಷಣೆಗೆ ನಾವು ತೆಗೆದುಕೊಳ್ಳುತ್ತಿರುವ ಕ್ರಮವಾಗಿದ್ದು ನಮ್ಮ ಸುರಕ್ಷತೆಗೆ ನಾವು ಕೆಲಸ ಮಾಡುವ ಸ್ಥಳಗಳನ್ನು ಸೂಕ್ಷ್ಮವಾಗಿ ನೋಡಿಕೊಳ್ಳುತ್ತಿದ್ದೇವೆ ಎಂದು ದೇಶಪಾಂಡೆ ತಿಳಿಸಿದ್ದಾರೆ.

ಒಂದು ವಾರಗಳ ಕಾಲ ಎಲ್ಲರಿಗೂ ವರ್ಕ್ ಫ್ರಂ ಹೋಮ್

ಒಂದು ವಾರಗಳ ಕಾಲ ಎಲ್ಲರಿಗೂ ವರ್ಕ್ ಫ್ರಂ ಹೋಮ್

ಸೋಷಿಯಲ್ ಮೀಡಿಯಾಗಳ ಮೂಲಕ ಯಾವುದೇ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಹಬ್ಬಿಸದಂತೆ ಕೂಡ ಉದ್ಯೋಗಿಗಳಿಗೆ ಇನ್ಫೋಸಿಸ್ ಸೂಚಿಸಿದೆ.

ನಿನ್ನೆ ಆದೇಶ ನೀಡಿದ್ದ ರಾಜ್ಯ ಸರ್ಕಾರ ಎಲ್ಲಾ ಐಟಿ-ಬಿಟಿ ಕಂಪೆನಿಗಳು ಇನ್ನು ಒಂದು ವಾರ ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಆದೇಶ ನೀಡುವಂತೆ ಹೇಳಿತ್ತು.
ಗ್ರೀಸ್‌ನಿಂದ ಬಂದ ಟೆಕ್ಕಿ ದಂಪತಿಗೆ ಕೊರೊನಾ ಸೋಂಕು

ಗ್ರೀಸ್‌ನಿಂದ ಬಂದ ಟೆಕ್ಕಿ ದಂಪತಿಗೆ ಕೊರೊನಾ ಸೋಂಕು

ಗ್ರೀಸ್‌ನಿಂದ ಹನಿಮೂನ್ ಮುಗಿಸಿ ಬಂದ ದಂಪತಿಗೆ ಕೊರೊನಾ ತಗುಲಿದೆ. ಅವರು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಬೆಂಗಳೂರಿಗೆ ಬಂದು ಬಳಿಕ ಆಗ್ರಾಕ್ಕೆ ತವರುಮನೆಗೆ ಹೋಗಿದ್ದಳು. ಇದೀಗ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೊದಲು ಪತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಪತ್ನಿಯ ತಪಾಸಣೆಯನ್ನೂ ನಡೆಸಲಾಗಿತ್ತು.

English summary
Global software major Infosys vacated one of its buildings in Bengaluru after a team member was suspected for coronavirus (COVID-19).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X