ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಯದಲ್ಲಿ ಬದುಕುತಿಹ ಅಲ್ಪಸಂಖ್ಯಾತರು : ಎನ್ಆರ್‌ಎನ್ ಉವಾಚ

|
Google Oneindia Kannada News

ಬೆಂಗಳೂರು, ಅಕ್ಟೋಬರ್, 31: ದೇಶದಲ್ಲಿ ಸಾಹಿತಿಗಳು ಮತ್ತು ಅಲ್ಪಂಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಇದೆಲ್ಲ ನಿವಾರಣೆಯಾಗದ ಹೊರತು ಆರ್ಥಿಕ ಭದ್ರತೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಮೂರ್ತಿ, ಶಿವಸೇನೆ ದಕ್ಷಿಣ ಭಾರತದವರ ಮೇಲೆ 1967 ರಲ್ಲಿ ದಾಳಿ ಮಾಡಿದ್ದನ್ನು ಉಲ್ಲೇಖ ಮಾಡಿದ್ದಾರೆ.[ವರ್ಷದಲ್ಲಿ ದಲಿತರ ಮೇಲೆ 47,064 ಸಾರಿ ದೌರ್ಜನ್ಯ!]

narayana murthy

ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣ ಇದೆ, ಈ ಭಯವನ್ನು ನಿರ್ಮೂಲನೆ ಮಾಡದ ಹೊರಡು ದೇಶದ ಆರ್ಥಿಕ ಪ್ರಗತಿ ಅಸಾಧ್ಯ. ಸಮಸ್ಯೆಯನ್ನು ಹೇಗೆ ಪರಿಹಾರ ಮಾಡಬೇಕು ಎಂಬ ವಿಚಾರಗಳು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಾರೆ.[ಹುಷಾರ್.. ಹಿಂದೂ ವಿರೋಧಿ ಬರಹ ಬರದ್ರೆ ಬೆರಳು ಕಟ್]

ಪ್ರತಿಯೊಬ್ಬ ಭಾರತೀಯನಲ್ಲೂ ಆತ್ಮವಿಶ್ವಾಸ, ಉತ್ಸಾಹ ತುಂಬುವ ಕೆಲಸವನ್ನು ಸರ್ಕಾರಗಳು ಮಾಡಬೇಕು. ಆಗ ತನ್ನಿಂದ ತಾನೇ ಸುರಕ್ಷಾ ಮನೋಭಾವ ಬೆಳೆಯುತ್ತದೆ ಎಂದು ಹೇಳಿದ್ದಾರೆ. ನಾರಾಯಣಮೂರ್ತಿ ಹೇಳಿಕೆಗೆ ಸಹಮತ ವ್ಯಕ್ತಪಡಿಸಿ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಟ್ವೀಟ್ ಮಾಡಿದ್ದಾರೆ.

English summary
In the wake of protests by writers, artists, scientists and other groups against what they believe to be the rising tide of intolerance in India, Infosys founder NR Narayanamurthy said that there is considerable fear in the minds of minorities, adding that no country can make economic progress unless it removes strife and reassures its minorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X