ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಫೋಸಿಸ್‌ನಿಂದ 200 ಕೋಟಿ ವೆಚ್ಚದಲ್ಲಿ ಮೆಟ್ರೋ ನಿಲ್ದಾಣ

By Nayana
|
Google Oneindia Kannada News

ಬೆಂಗಳೂರು, ಜು.7: ಇನ್‌ಫೋಸಿಸ್‌ ಫೌಂಡೇಷನ್‌ ವತಿಯಿಂದ ಸುಮಾರು 200 ಕೋಟಿ ವೆಚ್ಚದಲ್ಲಿ ಮೆಟ್ರೋ ನಿಲ್ದಾಣವನ್ನು ನಿರ್ಮಿಸಲು ನಿರ್ಧರಿಸಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಕರ್ನಾಟಕ ಬಜೆಟ್‌: ಮೆಟ್ರೋ 3ನೇ ಹಂತ ವಿಸ್ತರಣೆಗೆ ಸಾವಿರ ಕೋಟಿಕರ್ನಾಟಕ ಬಜೆಟ್‌: ಮೆಟ್ರೋ 3ನೇ ಹಂತ ವಿಸ್ತರಣೆಗೆ ಸಾವಿರ ಕೋಟಿ

ಸುಧಾಮೂರ್ತಿಯವರು ಇನ್ಫೋಸಿಸ್‌ ಟ್ರಸ್ಟ್‌ ವತಿಯಿಂದ ಬೆಂಗಳೂರಿನ ಕೋನಪ್ಪನ ಅಗ್ರಹಾರ ಮೆಟ್ರೋ ಹಳಿ ಮತ್ತು ಸ್ಟೇಷನ್‌ ಕಾಮಗಾರಿಗೆ 200 ಕೋಟಿ ನೀಡುವುದಾಗಿ ತಿಳಿಸಿದ್ದಾರೆ, ಈವರೆಗೆ ಬಿಎಂಆರ್‌ಸಿಎಲ್‌ ಖಾಸಗಿ ಕಂಪನಿಗಳ ಜತೆಗೆ ಹೊಂದಾಣಿಗೆ ಮಾಡಿಕೊಂಡು ಟೆಂಡರ್‌ ಕರೆದು ಬಳಿಕ ಮೆಟ್ರೋ ಕಾಮಗಾರಿಯನ್ನು ಪ್ರಾರಂಭಿಸುತ್ತಿದ್ದರು. ಆದರೆ ಈ ಮೆಟ್ರೋ ನಿಲ್ದಾಣವನ್ನು ಇನ್‌ಫೋಸಿಸ್‌ ಸಂಸ್ಥೆಯವರೇ ನಿರ್ಮಿಸಲಿದ್ದಾರೆ.

Infosys foundation to build metro station in Rs.200 crore

ಜುಲೈ 19ರಂದು ಈ ಕುರಿತು ವಿಧಾನಸೌಧದಲ್ಲಿ ಬಿಎಂಅರ್ ಸಿಎಲ್ ಮತ್ತು ಇನ್ಪೋಸಿಸ್ ಫೌಂಡೇಶನ್ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಬೇರೆ ಕಾರ್ಪೋರೇಟ್ ಕಂಪನಿಗಳಿಗೆ ಮಾದರಿಯಾಗುವ ರೀತಿಯಲ್ಲಿ ನಡೆದುಕೊಂಡಿರುವ ಸುಧಾ ಮೂರ್ತಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮೆಟ್ರೋ ನಿಲ್ದಾಣ ನಿರ್ಮಿಸುವುದಲ್ಲದೆ 30 ವರ್ಷ ಅದನ್ನು ನಿರ್ವಹಣೆ ಮಾಡಲಾಗುತ್ತದೆ, ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಬೇಕು, ಆಡದೆ ಮಾಡುವವನು ರೂಢಿಯೊಳಗೆ ಉತ್ತಮನು ಎಂದು ಸುಧಾ ಮೂರ್ತಿ ಹೇಳಿದ್ದಾರೆ.

English summary
TChief minister H.D.Kumarswamy has revealed that Infosys foundation has decide decided to donate Rs.200 crores to build Konappana Agrahara metro station. He also thanked foundation chairman Dr. Sudha Murthy who has donated and urged other corporate companies to follow her way to help people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X