ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿದ್ವಾಯಿ ಆಸ್ಪತ್ರೆಯ ಧರ್ಮಶಾಲೆ ನವೀಕರಿಸಿದ ಇನ್ಫೋಸಿಸ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 03: ಕಿದ್ವಾಯಿ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನಲ್ಲಿರುವ ಧರ್ಮಶಾಲೆಯ ನವೀಕರಣವನ್ನು ಪೂರ್ಣಗೊಳಿಸಿದ ಇನ್‍ಫೋಸಿಸ್ ಫೌಂಡೇಷನ್ ಪೂರ್ಣಗೊಳಿಸಿದೆ.

ಇನ್‍ಫೋಸಿಸ್‍ನ ಸಹಾಯಾರ್ಥ ಸೇವಾ ವಿಭಾಗವಾದ ಇನ್‍ಫೋಸಿಸ್ ಫೌಂಡೇಷನ್ ಬೆಂಗಳೂರಿನ ಕಿದ್ವಾಯ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನಲ್ಲಿ ಧರ್ಮಶಾಲೆಯ ನವೀಕರಣವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದೆ. ಈ ಧರ್ಮಶಾಲೆಯನ್ನು ಇನ್‍ಫೋಸಿಸ್ ಫೌಂಡೇಷನ್‍ನಿಂದ 2001ರಲ್ಲಿ ನಿರ್ಮಿಸಲಾಯಿತು.

ಕಲಬುರಗಿ: ಕಿದ್ವಾಯಿ ಸಂಸ್ಥೆಗೆ 'ಧರ್ಮಶಾಲಾ' ಕೊಟ್ಟ ಇನ್ಫೋಸಿಸ್ ಕಲಬುರಗಿ: ಕಿದ್ವಾಯಿ ಸಂಸ್ಥೆಗೆ 'ಧರ್ಮಶಾಲಾ' ಕೊಟ್ಟ ಇನ್ಫೋಸಿಸ್

ಈ ಪರಿಶ್ರಮದ ಅಂಗವಾಗಿ ಇನ್‍ಫೋಸಿಸ್ ಫೌಂಡೇಷನ್ ಹಲವಾರು ನವೀಕರಣ ಯೋಜನೆಗಳನ್ನು ಕೈಗೊಂಡಿತ್ತು.
ಸೆವೆದುಹೋಗಿದ್ದ ನೆಲ ಬದಲಾಯಿಸುವುದು ಮತ್ತು ಪ್ಲಂಬಿಂಗ್‍ನಲ್ಲಿದ್ದ ಹಲವಾರು ಸಮಸ್ಯೆಗಳನ್ನು ಸರಿಪಡಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸುಮಾರು 90 ಲಕ್ಷ ರೂ.ಗಳ ಈ ಯೋಜನೆಯಲ್ಲಿ ನೂತನ ಲಿಫ್ಟ್ ಶಾಫ್ಟ್ ಸೃಷ್ಟಿಸುವುದು ಮತ್ತು ನೂತನ ಲಿಫ್ಟ್ ವೊಂದರ ಸಂಪೂರ್ಣ ಸ್ಥಾಪನೆ ಸೇರಿತ್ತು.

ಕಿದ್ವಾಯಿ ಮಹಿಳಾ ಕ್ಯಾನ್ಸರ್ ರೋಗಿಗಳಿಗೆ ಉಚಿತ ವಿಗ್ ಕಿದ್ವಾಯಿ ಮಹಿಳಾ ಕ್ಯಾನ್ಸರ್ ರೋಗಿಗಳಿಗೆ ಉಚಿತ ವಿಗ್

2001ರಿಂದ ಕಿದ್ವಾಯ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನೊಂದಿಗೆ ಬಹಳ ಹತ್ತಿರದಲ್ಲಿ ಇನ್‍ಫೋಸಿಸ್ ಫೌಂಡೇಷನ್ ಕೆಲಸ ಮಾಡಿದೆ. ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ಚಂಡೀಗಢ, ಹುಬ್ಬಳ್ಳಿ ಮತ್ತು ಕಲ್ಬುರ್ಗಿಗಳಲ್ಲಿ ಧರ್ಮಶಾಲೆಗಳನ್ನು ಕಟ್ಟಲು ನೆರವು ನೀಡಿದೆ.

Infosys Foundation renovates Dharamshala at Kidwai Hospital

ಹೆಚ್ಚುವರಿಯಾಗಿ ಈ ಫೌಂಡೇಷನ್ ಬೆಂಗಳೂರಿನ ಕಿದ್ವಾಯ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ನಲ್ಲಿ ಶಸ್ತ್ರಕ್ರಿಯಾ ಕೊಠಡಿ ಸಂಕೀರ್ಣ ನಿರ್ಮಾಣಕ್ಕೆ, ಓಡಿಶಾದಲ್ಲಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಮತ್ತು ಮಹಾರಾಷ್ಟ್ರದಲ್ಲಿ ಆಸ್ಪತ್ರೆ ಘಟಕ ನಿರ್ಮಾಣಕ್ಕೆ, ಕರ್ನಾಟಕದಲ್ಲಿ ವೈದ್ಯಕೀಯ ವಾರ್ಡ್‍ಗಳು ಮತ್ತು ಪೆಥಾಲಜಿ ಪ್ರಯೋಗಾಲಯ ನಿರ್ಮಾಣಕ್ಕೆ, ಕರ್ನಾಟಕ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನು ಪಡೆದುಕೊಳ್ಳಲು ಮತ್ತು ಇತರೆ ಉಪಕ್ರಮಗಳಿಗೆ ನಿಧಿ ನೆರವು ನೀಡಿದೆ.

ಕ್ಯಾನ್ಸರ್ ಚಿಕಿತ್ಸೆ ನಂತರ ಮುಂಬೈಗೆ ಮರಳಿದ ಸೋನಾಲಿ ಬೇಂದ್ರೆ ಕ್ಯಾನ್ಸರ್ ಚಿಕಿತ್ಸೆ ನಂತರ ಮುಂಬೈಗೆ ಮರಳಿದ ಸೋನಾಲಿ ಬೇಂದ್ರೆ

ನವೀಕರಣ ಕಾರ್ಯಕ್ಕೆ 2 ಕೋಟಿ ರು ವೆಚ್ಚವಾಗಿದೆ. 40 ಕೋಟಿ ರು ಅನುದಾನ ಸಿಕ್ಕಿದೆ. ಸುಮಾರು 150ರಿಂದ 170 ಕೊಠಡಿಗಳ ಹೊಸ ಧರ್ಮಶಾಲಾ ನಿರ್ಮಾಣಕ್ಕೆ ಸರ್ಕಾರದ ಅನುಮತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

English summary
The Infosys Foundation renovated the existing Dharamshala facility at the Kidwai Memorial Institute of Oncology (KMIO) and also plan to construct more Dharmashalas across Karnataka.The Infosys Foundation renovated the existing Dharamshala facility at the Kidwai Memorial Institute of Oncology (KMIO) and also plan to construct more Dharmashalas across Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X