ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯ ಕರಿಬಸಪ್ಪಗೆ ಇನ್ಫೋಸಿಸ್ ಇನ್ನೋವೇಷನ್ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 26: ಇನ್ಫೋಸಿಸ್‍ನ ಸಮಾಜಸೇವಾ ಮತ್ತು ಸಿಎಸ್‍ಆರ್ ಅಂಗವಾದ ಇನ್ಫೋಸಿಸ್ ಪ್ರತಿಷ್ಠಾನವು, ಇಂದು ಆರೋಹಣ ಸೋಷಿಯಲ್ ಇನ್ನೋವೇಷನ್ ಪ್ರಶಸ್ತಿ, 2018-19 ಅನ್ನು ಘೋಷಿಸಿದೆ. ಭಾರತದಲ್ಲಿರುವ ಅವಕಾಶವಂಚಿತರ ಮೇಲೆ ದೊಡ್ಡ ಮಟ್ಟದಲ್ಲಿ ಸಕಾರಾತ್ಮಕ ಪರಿಣಾಮ ಬೀರುವಂಥ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಪೂರಕವಾಗುವಂಥ ವಿಶಿಷ್ಟ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ವ್ಯಕ್ತಿಗಳು, ತಂಡಗಳು ಅಥವಾ ಎನ್‍ಜಿಒಗಳನ್ನು ಗುರುತಿಸುವ ಮತ್ತು ಅವರಿಗೆ ಪ್ರತಿಫಲ ಒದಗಿಸುವ ನಿಟ್ಟಿನಲ್ಲಿ ಈ ಆರೋಹಣ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ.

ಪ್ರತಿಷ್ಠಾನವು ಒಟ್ಟು ಆರು ವಿಭಾಗಗಳಲ್ಲಿ ವಿಜೇತರನ್ನು ಗುರುತಿಸಿದೆ. ಅವೆಂದರೆ, ಆರೋಗ್ಯಸೇವೆ, ಗ್ರಾಮೀಣಾಭಿವೃದ್ಧಿ, ನಿರ್ಗತಿಕರ ಸೇವೆ, ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ, ಶಿಕ್ಷಣ ಮತ್ತು ಕ್ರೀಡೆ ಹಾಗೂ ಸುಸ್ಥಿರತೆ. ವಿಶೇಷ ಗಣ್ಯರನ್ನು ಒಳಗೊಂಡ ತೀರ್ಪುಗಾರರ ತಂಡವು 900ಕ್ಕೂ ಹೆಚ್ಚು ಅರ್ಜಿಗಳ ಮಹಾಪೂರದಲ್ಲಿ ವಿಜೇತರನ್ನು ಆಯ್ಕೆ ಮಾಡಿದೆ.

ಬೆಳ್ಳಿತೆರೆಗೆ ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಜೀವನಗಾಥೆಬೆಳ್ಳಿತೆರೆಗೆ ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಜೀವನಗಾಥೆ

ಪ್ರೊ. ತ್ರಿಲೋಚನ್ ಶಾಸ್ತ್ರಿ, ಮಾಜಿ ಡೀನ್, ಐಐಎಂ ಬೆಂಗಳೂರು; ಪದ್ಮಶ್ರೀ ಅರವಿಂದ್ ಗುಪ್ತಾ, ಭಾರತೀಯ ಆಟಿಕೆ ಸಂಶೋಧಕ ಮತ್ತು ವಿಜ್ಞಾನ ತಜ್ಞ; ಪ್ರೊ. ಅನಿಲ್ ಗುಪ್ತಾ, ಅತಿಥಿ ಉಪನ್ಯಾಸಕರು, ಐಐಎಂ ಹೈದರಾಬಾದ್, ಬೇರುಮಟ್ಟದ ಸಂಶೋಧನೆಗಳಿಗೆ ಸಂಬಂಧಿಸಿದ ಜಾಗತಿಕ ಮನ್ನಣೆ ಹೊಂದಿರುವ ವಿದ್ವಾಂಸರು ಮತ್ತು ಹನಿ ಬೀ ನೆಟ್ ವರ್ಕ್ ಸ್ಥಾಪಕರು; ಪ್ರೊ. ಜಿವಿವಿ ಶರ್ಮಾ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಉಪನ್ಯಾಸಕರು ಮತ್ತು ಕೋಆರ್ಡಿನೇಟರ್, ಟೀಚಿಂಗ್ ಲರ್ನಿಂಗ್ ಸೆಂಟರ್, ಐಐಟಿ ಹೈದರಾಬಾದ್; ಶ್ರೀಯುತ ಸುಮಿತ್ ವರ್ಮಾನಿ, ಹಿರಿಯ ಉಪಾಧ್ಯಕ್ಷ ಮತ್ತು ಜಾಗತಿಕ ಮುಖ್ಯಸ್ಥ- ಮಾರ್ಕೆಟಿಂಗ್, ಇನ್ಫೋಸಿಸ್ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಖ್ಯಾತ ಲೇಖಕಿ ಶ್ರೀಮತಿ. ಸುಧಾ ಮೂರ್ತಿ ಈ ತೀರ್ಪುಗಾರರ ತಂಡದಲ್ಲಿ ಇರಲಿದ್ದಾರೆ.

ಇನ್ನೋವೇಷನ್ ಪ್ರಶಸ್ತಿಗಳು 2018-19ರ ವಿಜೇತರು

ಇನ್ನೋವೇಷನ್ ಪ್ರಶಸ್ತಿಗಳು 2018-19ರ ವಿಜೇತರು

ಪ್ಲಾಟಿನಂ ಪ್ರಶಸ್ತಿ ವಿಜೇತರು. ಪ್ರತಿ ತಂಡಕ್ಕೆ 30 ಲಕ್ಷ ರೂ. ನಗದು ನೀಡಿ ಗೌರವಿಸಲಾಗುತ್ತದೆ.

ಆರೋಗ್ಯಸೇವೆ: ಪ್ರಶಾಂತ್ ಗಾಡೆ, ಮಧ್ಯಪ್ರದೇಶ. ಅತ್ಯಂತ ಕಡಿಮೆ ವೆಚ್ಚದ ಮ್ಯೋ-ಎಲೆಕ್ಟ್ರಿಕ್ ಕೃತಕ ಅಂಗವಾದ ಇನಾಲಿ ಆರ್ಮ್' ಅಭಿವೃದ್ಧಿ.ಶಿಕ್ಷಣ: ಖುಶ್ವಂತ್ ರೈ ಮತ್ತು ಅಂಜಲಿ ಖುರಾನಾ, ಪಂಜಾಬ್, ಅಗ್ಗದ ದರದಲ್ಲಿ ಪರ್ಸನಲ್ ಬ್ರೈಲ್ ಪ್ರಿಂಟರ್ ಅಭಿವೃದ್ಧಿ.

ಗೋಲ್ಡ್ ಪ್ರಶಸ್ತಿ ವಿಜೇತರು. ಪ್ರತಿ ತಂಡಕ್ಕೆ 20 ಲಕ್ಷ ರೂ. ನಗದು ಬಹುಮಾನ

ಸುಸ್ಥಿರತೆ: ಮಯೂರ್ ರಾಮರಾವ್ ಲಡೋಲೆ, ಗೌರವ್ ಘನಶ್ಯಾಮ್ ದಸ್ತಾನೆ ಮತ್ತು ನೀಲೇಶ್ ಲಕ್ಷ್ಮಣ್ ಜಾಧವ್, ಮಹಾರಾಷ್ಟ್ರ. ಇವರು ಉತ್ತಮವಾದ ಜಲ ಸೋಂಕುನಿವಾರಕ ಹ್ಯಾಂಡ್ ಪಂಪ್ ನಿರ್ಮಾತೃಗಳು.

ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ: ಮಹಾರಾಷ್ಟ್ರದ ಸಮಗ್ರ ಎಂಪವರ್‍ಮೆಂಟ್ ಫೌಂಡೇಷನ್. "ಸ್ಮಾರ್ಟ್ ಲೂ" ಎಂಬ ಪ್ಲಾಟ್‍ಫಾರಂ ಅಭಿವೃದ್ಧಿ

ಇನ್ಫೋಸಿಸ್ ಗೆ ಒಲಿದ ಐಟಿ ರಿಟನ್ಸ್ ಸರಳಗೊಳಿಸುವ ಗುತ್ತಿಗೆ ಇನ್ಫೋಸಿಸ್ ಗೆ ಒಲಿದ ಐಟಿ ರಿಟನ್ಸ್ ಸರಳಗೊಳಿಸುವ ಗುತ್ತಿಗೆ

ಆರೋಹಣ ಇನ್ನೋವೇಷನ್ ಪ್ರಶಸ್ತಿ

ಆರೋಹಣ ಇನ್ನೋವೇಷನ್ ಪ್ರಶಸ್ತಿ

ಸಿಲ್ವರ್ ಪ್ರಶಸ್ತಿ ವಿಜೇತರು- ಪ್ರತಿ ತಂಡಕ್ಕೆ 15 ಲಕ್ಷ ರೂ. ನಗದು ಬಹುಮಾನ
ನಿರ್ಗತಿಕರ ಸೇವೆ: ಸುಮಂತ್ ಮುದಲಿಯಾರ್ ಮತ್ತು ವಿಶ್ರುತ್ ಗೌರಂಗ್ ಕುಮಾರ್ ಭಟ್, ಗುಜರಾತ್. ವಿಕಲಚೇತನರಿಗೆ ಸಂಚರಿಸಲು ಅನುಕೂಲ ಕಲ್ಪಿಸುವಂಥ "ಹ್ಯಾಂಡಿಕೇರ್" ಎಂಬ ಸಾಧನ ಅಭಿವೃದ್ಧಿ.

ಆರೋಗ್ಯಸೇವೆ: ಆಕಾಶ್ ಭದಾನಾ, ವಸು ಕೌಶಿಕ್ ಮತ್ತು ರಾಹುಲ್ ಗುಪ್ತಾ, ಹರ್ಯಾಣ. ಉಸಿರಾಟದ ತೊಂದರೆಯಿರುವಂಥ ರೋಗಿಗಳಿಗೆ "ಕಾಯೆಲಿ" ಎಂಬ ಹೆಸರಿನ ಸ್ಮಾರ್ಟ್ ಸ್ವಯಂಚಾಲಿತ ಔಷಧಿ ವಿತರಣೆ ಮತ್ತು ಮಾಲಿನ್ಯ-ನಿಗ್ರಹ ಮಾಸ್ಕ್ ತಯಾರಿಕೆ.

ಕಂಚಿನ ಪ್ರಶಸ್ತಿ ವಿಜೇತರು. ಪ್ರತಿ ತಂಡಕ್ಕೆ ತಲಾ 10 ಲಕ್ಷ ರೂ. ನಗದು

ಗ್ರಾಮೀಣಾಭಿವೃದ್ಧಿ: ಶ್ರವಣ ಕುಮಾರ್ ಬೈಯ್ಯಾ, ರಾಜಸ್ಥಾನ. ಕಳೆಯನ್ನು ಕೀಳುವಂಥ ಮತ್ತು ಆ ಕಳೆಯನ್ನೇ ಹಸಿರು ಗೊಬ್ಬರವಾಗಿ ಮಾರ್ಪಡಿಸುವಂಥ ಅಗ್ಗದ ದರದ "ವೈಡರ್" ಎಂಬ ಯಂತ್ರ ಅಭಿವೃದ್ಧಿ.

ಶಿಕ್ಷಣ: ಸಂಸ್ಕೃತಿ ದಾವ್ಲೆ, ಕರ್ನಾಟಕ. ಭಾರತದಲ್ಲಿ ಬ್ರೈಲ್ ಸಾಕ್ಷರತೆಯ ಕುಂದನ್ನು ನಿವಾರಿಸುವಂಥ ಆಡಿಯೋ ಸಮಸ್ಯೆ ನಿವಾರಕ ಸಾಧನ "ಆನ್ನಿ" ಅಭಿವೃದ್ಧಿ.
ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ತಂಡಗಳು

ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ತಂಡಗಳು

ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ತಂಡಗಳು. ಈ ತಂಡಗಳಿಗೆ ತಲಾ 5 ಲಕ್ಷ ರೂ. ನಗದು ಪ್ರಶಸ್ತಿ

ಸುಸ್ಥಿರತೆ: ಗುಜರಾತ್‍ನ ಸಾಥಿ ಪ್ಯಾಡ್ಸ್. ಬಾಳೆಯ ದಿಂಡಿನ ಮೂಲಕ ಸ್ಯಾನಿಟರಿ ಪ್ಯಾಡ್ ತಯಾರಿಕೆ. ಇದು ಶೇಕಡಾ 100ರಷ್ಟು ಜೈವಿಕ ವಿಘಟನೀಯ ಮತ್ತು ಮಿಶ್ರಗೊಬ್ಬರವಾಗಿ ಬಳಕೆಯಾಗಬಲ್ಲಂಥ ಪ್ಯಾಡ್ ಆಗಿದೆ.

ಶಿಕ್ಷಣ: ಚಿರಾಗ್ ಭಂಡಾರಿ, ಸಿದ್ಧಾರ್ಥ್ ಗಾಲಾ ಮತ್ತು ಕಾವ್ಯ ಅನಂತ್, ಮಹಾರಾಷ್ಟ್ರ. "ಯೇಲೋ ಬ್ಯಾಗ್" ಅಭಿವೃದ್ಧಿ. ಇದೊಂದು ಶಾಲಾ ಬ್ಯಾಗ್ ಆಗಿದ್ದು, ಇದು ತನ್ನಿಂತಾನೇ ಬರೆಯುವ ಡೆಸ್ಕ್ ಆಗಿಯೂ ಮಾರ್ಪಾಡಾಗುತ್ತದೆ.

ಗ್ರಾಮೀಣಾಭಿವೃದ್ಧಿ: ಕರಿಬಸಪ್ಪ ಎಂ.ಜಿ., ದಯಾನಂದ ಕೆ. ಮತ್ತು ಅನಿಲ್ ಕುಮಾರ್ ಎಂ.ಕೆ. ಕರ್ನಾಟಕ. ಇವರು ಅಭಿವೃದ್ಧಿಪಡಿಸಿದ "ಸೋಲಾರ್ ಇನ್‍ಸೆಕ್ಟ್ ಟ್ರ್ಯಾಪ್"ನಿಂದಾಗಿ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ.

ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ: ಅಜಿಂಕ್ಯಾ ವಿಕಾಸ್ ಧಾರಿಯಾ, ಮಹಾರಾಷ್ಟ್ರ. "ಪ್ಯಾಡ್ ಕೇರ್" ಎಂಬ ಹೆಸರಿನ ವಿಕೇಂದ್ರೀಕೃತ ಸ್ಯಾನಿಟರಿ ಪ್ಯಾಡ್ ಕ್ರಿಮಿಶುದ್ಧೀಕರಣ, ವಿಘಟನೆ ಮತ್ತು ವಿಲೇವಾರಿ ಘಟಕ ಸ್ಥಾಪನೆ.

ಪ್ರತಿಷ್ಠಾನದ ಮುಖ್ಯಸ್ಥೆ ಶ್ರೀಮತಿ. ಸುಧಾ ಮೂರ್ತಿ

ವಿಜೇತರನ್ನು ಗೌರವಿಸಿದ ಬಳಿಕ ಮಾತನಾಡಿದ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಶ್ರೀಮತಿ. ಸುಧಾ ಮೂರ್ತಿ, ಭಾರತದಲ್ಲಿರುವ ಸಾಮಾಜಿಕ ಸವಾಲುಗಳಿಗೆ ಪರಿಹಾರ ಒದಗಿಸುವಂಥ ಜನರಿಗೆ ಉತ್ತೇಜನ ನೀಡುವ ಮೂಲಕ, ದೊಡ್ಡ ಮಟ್ಟದಲ್ಲಿ ಪರಿಣಾಮಕಾರಿ ಬದಲಾವಣೆಗೆ ಕಾರಣವಾಗುವುದೇ ಈ ಆರೋಹಣ ಸೋಷಿಯಲ್ ಇನ್ನೋವೇಷನ್ ಪ್ರಶಸ್ತಿಗಳ ಧ್ಯೇಯವಾಗಿದೆ. ಎಲ್ಲ ವಿಜೇತರು ಕೂಡ ತಮ್ಮ ತಮ್ಮ ಉತ್ಪನ್ನಗಳ ಮೂಲದಲ್ಲೇ ಇಂತಹುದೊಂದು ಸ್ಫೂರ್ತಿಯ ಚಿಲುಮೆಯನ್ನು ತೋರಿಸಿಕೊಟ್ಟಿದ್ದಾರೆ. ಅವರ ಪರಿಶ್ರಮವನ್ನು ಗುರುತಿಸಿರುವುದಕ್ಕೆ ನಾವೂ ಹೆಮ್ಮೆಪಡುತ್ತೇವೆ. ನಾನು ಇಲ್ಲಿ ಕೇವಲ ವಿಜೇತರನ್ನು ಮಾತ್ರವೇ ಅಭಿನಂದಿಸುವುದಿಲ್ಲ.

906 ಮಂದಿಗೂ ಅಭಿನಂದಿಸಲು ಬಯಸುತ್ತೇನೆ

ಬದಲಿಗೆ, ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಅತೀವ ಉತ್ಸಾಹದಿಂದ ದೇಶದ ಉದ್ದಗಲಕ್ಕೂ ಸಾಮಾಜಿಕ ನಾವೀನ್ಯತೆಯ ಬೆನ್ನುಹತ್ತಿ, ವಿರಮಿಸದೇ ಸತತ ಪರಿಶ್ರಮ ವಹಿಸುತ್ತಿರುವ ಪ್ರತಿಯೊಬ್ಬರಿಗೂ ಅಂದರೆ ಇಲ್ಲಿರುವ 906 ಮಂದಿಗೂ ಅಭಿನಂದಿಸಲು ಬಯಸುತ್ತೇನೆ. ಇನ್ಫೋಸಿಸ್ ಪ್ರತಿಷ್ಠಾನವು ಇಂಥ ಇನ್ನೋವೇಷನ್‍ಗಳಿಗೆ ನಿರಂತರ ಉತ್ತೇಜನ ನೀಡುವಲ್ಲಿ ಬದ್ಧವಾಗಿದೆ ಮತ್ತು ಇಂಥವರ ಸಂಶೋಧನೆಯು ಸಮಾಜದಲ್ಲಿ ಯಾರಿಗೆ ಅಗತ್ಯವಿದೆಯೋ ಅಂಥವರಿಗೆ ನೆರವಾಗುತ್ತಾ, ಅವರ ಬದುಕಲ್ಲಿ ಬದಲಾವಣೆ ತರುವಂಥ ಕೆಲಸ ಇನ್ನಷ್ಟು ಹೆಚ್ಚಾಗುವಂತೆಯೂ ಪ್ರೋತ್ಸಾಹ ನೀಡುತ್ತದೆ" ಎಂದರು.

ಇದಲ್ಲದೇ, ಇವರ ಇನ್ನೋವೇಷನ್ ಗಳಿಗೆ ಮತ್ತಷ್ಟು ವ್ಯಾಪ್ತಿ ಸಿಗುವಂತೆ, ಪ್ಲಾಟಿನಂ ಮತ್ತು ಗೋಲ್ಡ್ ಪ್ರಶಸ್ತಿ ವಿಜೇತರಿಗೆ ಐಐಟಿ ಹೈದರಾಬಾದ್‍ನಲ್ಲಿ 8- ವಾರಗಳ ರೆಸಿಡೆನ್ಶಿಯಲ್ ಮೆಂಟರ್ ಶಿಪ್ ನೀಡಲಾಗುತ್ತದೆ. ಇದರ ವೆಚ್ಚವನ್ನು ಐಐಟಿ ಹೈದರಾಬಾದ್ ಮತ್ತು ಇನ್ಫೋಸಿಸ್ ಪ್ರತಿಷ್ಠಾನವು ಜಂಟಿಯಾಗಿ ಭರಿಸಲಿವೆ.

English summary
Infosys Foundation, the philanthropic and CSR arm of Infosys, today presented Aarohan Social Innovation Awards, to catalyze social innovation in India. The objective of these awards is to accelerate innovation in the social sector, and provide a platform to help these solutions scale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X