ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್19: ವಿಶೇಷ ಚೇತನರಿಗೆ ದಿನಸಿ ಸಾಮಾಗ್ರಿ ನೀಡಿದ ಇನ್ಫೋಸಿಸ್

|
Google Oneindia Kannada News

ಬೆಂಗಳೂರು ಮೇ 04: ಕೊರೊನಾ ಕರ್ಫ್ಯೂನಿಂದಾಗಿ ಎಲ್ಲಾ ಸ್ತರದ ಜನರು ತೊಂದರೆಗೀಡಾಗಿದ್ದಾರೆ. ಅದರಲ್ಲೂ ರಾಜ್ಯ ಸರಕಾರದಿಂದ ದಿನಸಿ ಸಾಮಗ್ರಿಗಳನ್ನು ಪಡೆದುಕೊಳ್ಳಲು ರೇಷನ್‌ ಕಾರ್ಡ್‌ ಹೊಂದದೆ ಇರುವವರ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಇಂತಹ ಬಿಪಿಎಲ್‌ ಕಾರ್ಡ್‌ ಇಲ್ಲದೇ ಇರುವ ಹಾಗೂ ನೂರಾರು ಕುಟುಂಬಗಳಿಗೆ ಇಂದು ಇನ್ಫೋಸಿಸ್‌ ಫೌಂಡೇಶನ್‌ ವತಿಯಿಂದ ದಿನಸಿ ವಸ್ತುಗಳನ್ನು ಹೊಂದಿರುವ ಕಿಟ್‌ ಗಳನ್ನು ವಿತರಿಸಲಾಯಿತು. ಇದಲ್ಲದೆ ವಿಶೇಷ ಚೇತನರಿಗೆ ಕೂಡಾ ದಿನಸಿ ವಸ್ತುಗಳನ್ನು ವಿತರಿಸಲಾಯಿತು.

ಇನ್ಪೋಸಿಸ್‌ ಫೌಂಡೇಶನ್‌ನಿಂದ ಜಿಗಣಿ ಗ್ರಾಮಸ್ಥರಿಗೆ ಅಗತ್ಯ ವಸ್ತು ವಿತರಣೆ ಇನ್ಪೋಸಿಸ್‌ ಫೌಂಡೇಶನ್‌ನಿಂದ ಜಿಗಣಿ ಗ್ರಾಮಸ್ಥರಿಗೆ ಅಗತ್ಯ ವಸ್ತು ವಿತರಣೆ

Infosys foundation donates essential kits to BPL card

ರಮೇಶ್‌ ರೆಡ್ಡಿ ನೇತೃತ್ವದ ತಂಡ ಇಂದು ನಗರದ ತಲಘಟ್ಟಪುರ ಪೊಲೀಸ್‌ ಠಾಣೆಯ ಬಳಿ ಸುಮಾರು 500 ಇಂತಹ ಕುಟುಂಬಗಳಿಗೆ ರೇಷನ್‌ ಕಿಟ್‌ಗಳನ್ನು ವಿತರಿಸಿದರು. ಶ್ರೀಮತಿ ಸುಧಾಮೂರ್ತಿ ಅವರ ನೇತೃತ್ವದಲ್ಲಿ ಇನ್ಫೋಸಿಸ್‌ ಫೌಂಡೇಶನ್‌ ವತಿಯಿಂದ ರಾಜ್ಯಾದ್ಯಂತ ಕೊರೊನಾ ದಿಂದ ತೊಂದರೆಗೀಡಾಗಿರುವ ಕುಟುಂಬಗಳಿಗೆ ಅಗತ್ಯ ದಿನ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ.

 ಇನ್ಫೋಸಿಸ್ ಫೌಂಡೇಷನ್‍ನಿಂದ 100 ಹಾಸಿಗೆಗಳ ಕ್ವಾರಂಟೈನ್ ಸೌಲಭ್ಯ ಇನ್ಫೋಸಿಸ್ ಫೌಂಡೇಷನ್‍ನಿಂದ 100 ಹಾಸಿಗೆಗಳ ಕ್ವಾರಂಟೈನ್ ಸೌಲಭ್ಯ

Infosys foundation donates essential kits to BPL card

ಬೆಂಗಳೂರಿನಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗೆಂದೇ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆಗೆ ನೆರವನ್ನು ಇನ್ಫೋಸಿಸ್‌ ಫೌಂಡೇಷನ್ ಘೋಷಣೆ ಮಾಡಿತ್ತು. ಇದಲ್ಲದೇ, ದೇಶದ ಹಲವಾರು ಮಿಲಿಟರಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಮತ್ತು ಪಿಪಿಇ ಸಲಕರಣೆಗಳನ್ನು ಒದಗಿಸುವುದಾಗಿ ಪ್ರಕಟಿಸಿದೆ. ಇದಲ್ಲದೇ, ಫೌಂಡೇಷನ್ ಅಗತ್ಯವಿರುವ ಸಾವಿರಾರು ಜನರಿಗೆ ಆಹಾರ ಮತ್ತು ನೈರ್ಮಲ್ಯ ಕಿಟ್‌ಗಳನ್ನು ಪೂರೈಕೆ ಮಾಡಲು ಹಲವಾರು ಎನ್‌ಜಿಒಗಳಿಗೆ ನೆರವು ನೀಡುತ್ತಿದೆ.

English summary
Infosys foundation donated essential kits to those who doesn't had BPL card and disabled people near Talaghattapura police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X