ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ 2ನೇ ಹಂತಕ್ಕೆ 30 ಕೋಟಿ ರು ಕೊಟ್ಟ ಸುಧಾ ಮೂರ್ತಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 07: ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಗೆ 30 ಕೋಟಿ ರು ಗಳ ಚೆಕ್ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಬಿಎಂಆರ್ ಸಿಎಲ್ ಎಂಡಿ ಅಜಯ್ ಸೇಥ್,ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಭಾಗವಾಗಿರುವ ಇನ್ಫೋಸಿಸ್ ಫೌಂಡೇಷನ್-ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಅಭಿವೃದ್ಧಿಗಾಗಿ ಇನ್ಫೋಸಿಸ್ 100 ಕೋಟಿ ರು ನೀಡುತ್ತಿದೆ. ಇದರ ಎರಡನೇ ಕಂತಿನ ರೂಪದಲ್ಲಿ 30 ಕೋಟಿ ರು ಚೆಕ್ಕನ್ನು ಫೌಂಡೇಶನ್ನಿನ ಅಧ್ಯಕ್ಷೆ ಸುಧಾಮೂರ್ತಿ ಅವರು ನೀಡಿದ್ದಾರೆ ಎಂದರು.

ನೆರೆ ಪೀಡಿತ ರಾಯಚೂರು, ಬಾಗಲಕೋಟೆ ತಲುಪಿದ ಇನ್ಫಿ ನೆರವು ನೆರೆ ಪೀಡಿತ ರಾಯಚೂರು, ಬಾಗಲಕೋಟೆ ತಲುಪಿದ ಇನ್ಫಿ ನೆರವು

ಎರಡನೇ ಹಂತದಲ್ಲಿಆರ್ ವಿ ರಸ್ತೆಯಿಂದ ಬೊಮ್ಮಸಂದ್ರದ ತನಕ ನಮ್ಮ ಮೆಟ್ರೋ ಹಾದು ಹೋಗಲಿದೆ. ಈ ಹಾದಿಯಲ್ಲಿರುವ ಇನ್ಫೋಸಿಸ್ ಫೌಂಡೇಷನ್-ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದ ನಿರ್ವಹಣೆಯನ್ನು ಇನ್ಫೋಸಿಸ್ ನಡೆಸಲಿದೆ.

Infosys Foundation chairperson Sudha Murty gives Rs 30 crore to BMRCL

2018ರಲ್ಲಿರುವ ಒಪ್ಪಂದದಂತೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್ ಆರ್) ಅನುದಾನದಡಿಯಲ್ಲಿ ಕಳೆದ ಜುಲೈ ತಿಂಗಳಿನಲ್ಲಿ 10 ಕೋಟಿ ರುಗಳನ್ನು ಮೊದಲ ಕಂತಿನಲ್ಲಿ ಬಿಎಂಆರ್ ಸಿಎಲ್ ಗೆ ಸುಧಾಮೂರ್ತಿ ಅವರು ನೀಡಿದ್ದರು. ಸದ್ಯ 40 ಕೋಟಿ ರು ಸಂದಾಯವಾಗಿದ್ದು, ಮಿಕ್ಕ 60 ಕೋಟಿ ರುಗಳನ್ನು ಇನ್ನೆರಡು ಕಂತುಗಳಲ್ಲಿ ನೀಡಲಿದ್ದಾರೆ. ಡಿಸೆಂಬರ್ 31, 2021ರೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

English summary
Infosys Foundation chairperson Sudha Murty handed over a cheque of Rs 30 crore to Bangalore Metro Rail Corporation Limited (BMRCL) Chairman Ajay Seth on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X