ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯರ ಸೇವೆಯಲ್ಲಿ ಸರಳತೆಯ ಸಾಕಾರ 'ಮೂರ್ತಿ'

By ಬೆಂಗಳೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು: ಆಗಸ್ಟ್, 21: 'ರಾಯರ ಸೇವೆಯೇ ನನಗೆ ಪೂಜೆ, ಅದರಲ್ಲಿಯೇ ನೆಮ್ಮದಿ ಕಂಡಿದ್ದೇನೆ, ಕಾಣುತ್ತೇನೆ' ಎಂದು ಹೇಳುತ್ತ ಭಕ್ತರು ನೀಡಿದ್ದ ಕಾಣಿಕೆಗಳನ್ನು ಬೇರೆ ಬೇರೆ ಮಾಡುತ್ತ ಕುಳಿತಿದ್ದವರು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ.

ಹೌದು.. ಬೆಂಗಳೂರಿನ ಜಯನಗರದ ರಾಯರ ಮಠದಲ್ಲಿ ನಡೆಯುತ್ತಿದ್ದ ಆರಾಧನೆಯಲ್ಲಿ ಕಳೆದ ಮೂರು ದಿನಗಳಿಂದ ಈ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರು ತಂದು ಅರ್ಪಿಸಿದ ತರಕಾರಿ ಮತ್ತಿತರ ಕಾಣಿಕೆಗಳನ್ನು ಬೇರೆ ಮಾಡುವುದರಲ್ಲಿ ಸುಧಾ ಮೂರ್ತಿ ನಿರತರಾಗಿದ್ದರು.['ಇನ್ಪೋಸಿಸ್ ಫೌಂಡೇಶನ್ ನಿಂದ ಶಾಸ್ತ್ರೀಯ ಕಲೆಗಳ ಅಭಿವೃದ್ಧಿ']

ಮೂರು ದಿನಗಳ ಕಾಲ ನಿರಂತರವಾಗಿ ಮಠದಲ್ಲಿ ನಿರಂತರ ಸೇವೆ ಮಾಡಿದ ಸುಧಾ ಮೂರ್ತಿ ರಾಯರ ಕೃಪೆಗೆ ಪಾತ್ರರಾದರು.

ತರಕಾರಿ ಹೆಚ್ಚಿದರು

ತರಕಾರಿ ಹೆಚ್ಚಿದರು

ಆರಾಧನಾ ಮಹೋತ್ಸವದಲ್ಲಿ ಭಕ್ತರಿಗೆ ಊಟ ಬಡಿಸೋದು , ಅನ್ನ ಸಂತರ್ಪಣೆ ಗಾಗಿ ತರಾಕಾರಿ ತೊಳೆದು ಹೆಚ್ಚವುದು, ಪಂಚಾಮೃತಕ್ಕೆ ಹಣ್ಣುಗಳ ತೊಳೆಯುವುದು ಹೂವು ಕಟ್ಟುವುದು ಸೇರಿದಂತೆ ಆರಾಧನಾ ಮಹೋತ್ಸವದ ಅಷ್ಟೂ ಕೆಲಸ ಮಾಡಿದರು.

ಇಲ್ಲಿಯೂ ಮ್ಯಾನೇಜರ್

ಇಲ್ಲಿಯೂ ಮ್ಯಾನೇಜರ್

ಮಠದ ಅಧಿಕಾರಿಗಳು ಹೇಳುವಂತೆ ಮೂರ್ತಿ ಸ್ಟೋರ್ ಮ್ಯಾನೇಜರ್ ರೀತಿ ಮೂರು ದಿನ ಕೆಲಸ ಮಾಡಿದರು. ಚಿಕ್ಕ ಪುಟ್ಟ ಗೊಂದಲಗಳನ್ನು ಅವರು ನಿಭಾಯಿಸಿದ ರೀತಿ ಪ್ರತಿಯೊಬ್ಬರಿಗೂ ಮಾರ್ಗದರ್ಶಕ

ಮುಂಜಾನೆ 5.30 ಕ್ಕೆ ಆಗಮನ

ಮುಂಜಾನೆ 5.30 ಕ್ಕೆ ಆಗಮನ

ಪ್ರತಿದಿನ ಮುಂಜಾನೆ 5.30 ಕ್ಕೆ ಆಗಮಿಸುತ್ತಿದ್ದ ಮೂರ್ತಿ ತರಕಾರಿ ಹೆಚ್ಚುವುದರಲ್ಲಿ ನಿರತರಾಗುತ್ತಿದ್ದರು. ಮಧ್ಯೆ ಮಧ್ಯೆ ಸ್ಟೋರ್ ಗೆ ಭೇಟಿ ನೀಡಿ ಬರುತ್ತಿದ್ದರು.

ಪೂಜೆಗೆ ಬಾರದ ಮೂರ್ತಿ

ಪೂಜೆಗೆ ಬಾರದ ಮೂರ್ತಿ

ಮೂರು ದಿನಗಳ ಕಾಲ ಮಠದಲ್ಲಿದ್ದರೂ ಮೂರ್ತಿ ಪೂಜೆಗೆ ಆಗಮಿಸಲಿಲ್ಲ. ನನಗೆ ಸೇವೆಯೇ ಪೂಜೆ ಎಂದು ಹೇಳಿ ಕೆಲಸದಲ್ಲಿ ಮಗ್ನರಾಗಿಯೇ ಇದ್ದರು.

English summary
Infosys Foundation chairperson Sudha Murthy participated Raghavendra Swamy Aradhana Mahotsavam at Jayanagara Bengaluru. Total three days Sudha Murthy served like a common man in Raghavendra Swamy Mutt in a simple manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X