ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಫೋಸಿಸ್ ಮೂವರು ಉದ್ಯೋಗಿಗಳ ಬಂಧನ, ಏನು ಕಾರಣ?

|
Google Oneindia Kannada News

ಬೆಂಗಳೂರು, ಮಾರ್ಚ್ 9: ಆದಾಯ ತೆರಿಗೆ ವಂಚನೆಗೆ ನೆರವು ನೀಡಿದ ಆರೋಪದ ಮೇಲೆ ಇನ್ಫೋಸಿಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂವರು ಉದ್ಯೋಗಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಆಂಧ್ರಪ್ರದೇಶ ಮೂಲದ ಕಲ್ಯಾಣ್ ಕುಮಾರ್, ದೇವೇಶ್ವರ್ ರೆಡ್ಡಿ ಹಾಗೂ ಪ್ರಕಾಶ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 3 ಲಕ್ಷ ರು ನಗದು, ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ. ಮೂವರು ಕೂಡಾ ಆದಾಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ಪ್ರಾಜೆಕ್ಟ್ (ಸಿಪಿಸಿ)ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ತೆರಿಗೆ ವಂಚನೆ ಹೇಗೆ?: ತೆರಿಗೆ ಪಾವತಿದಾರರನ್ನು ಸಂಪರ್ಕಿಸಿ, ತೆರಿಗೆ ವಂಚಿಸಲು ನೆರವಾಗುತ್ತಿದ್ದರು. ಇದಕ್ಕಾಗಿ ಶೇ 4 ರಿಂದ 5ರಷ್ಟು ಕಮಿಷನ್ ಗಳಿಸುತ್ತಿದ್ದರು. ಐಟಿ ಅಧಿಕಾರಿಯೊಬ್ಬರಿಗೆ ಈ ಬಗ್ಗೆ ತಿಳಿದು ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಆದಾಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ಪ್ರಾಜೆಕ್ಟ್ (ಸಿಪಿಸಿ)ಗೆ ಇನ್ಫೋಸಿಸ್ ಸಂಸ್ಥೆ ತಾಂತ್ರಿಕ ನೆರವು ಒದಗಿಸುತ್ತಿತ್ತು. ಇನ್ಫೋಸಿಸ್ ನಿಂದ ಐಟಿ ಇಲಾಖೆಗಾಗಿ ಈ ಮೂವರು ಕಾರ್ಯ ನಿರ್ವಹಿಸುತ್ತಿದ್ದರು.

Three Infosys employees arrested on Fraud charges

ತೆರಿಗೆ ಮರುಪಾವತಿ ಪಡೆಯಲು ಏಳು ದಿನಗಳ ಕಾಲಾವಕಾಶ ಇರುವುದನ್ನು ಲಾಭಕ್ಕಾಗಿ ಬಳಸಿಕೊಂಡ ಈ ಮೂವರು, ತೆರಿಗೆದಾರರಿಂದ ಹಣ ಪಡೆದು ಸುಳ್ಳು ಮಾಹಿತಿ ನೀಡಿ, ಇಲಾಖೆಗೆ ವಂಚನೆ ಮಾಡುತ್ತಿದ್ದರು ಎಂದು ಐಟಿ ಇಲಾಖೆ ಅಧಿಕಾರಿ ಮ್ಯಾಥ್ಯೂ ಎಂಬುವರು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದರು.

ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ತೆರಿಗೆದಾರರೊಬ್ಬರು ಈ ಮೂವರಿಗೆ ಕಮಿಷನ್ ಮೊತ್ತ ನೀಡಲು ನಿರಾಕರಿಸಿದ್ದರು. ಈ ತಂಡದ ಜೊತೆ ನಡೆಸಿದ ಆಡಿಯೋ ಸಂಭಾಷಣೆಯನ್ನು ಹಂಚಿಕೊಂಡಿದ್ದರು. ಇದಕ್ಕೆ ಪೂರಕವಾಗಿ ಆಂತರಿಕ ತನಿಖೆಯಿಂದ ಮೂವರು ವಂಚನೆ ಮಾಡಿರುವುದು ದೃಢಪಟ್ಟ ಮೇಲೆ ಪೊಲೀಸರಿಗೆ ದೂರು ತಲುಪಿದೆ. ಈ ಮೂವರು ಸುಮಾರು 15 ಲಕ್ಷ ರುಗೂ ಅಧಿಕ ಮೊತ್ತ ವಂಚಿಸಿರಬಹುದು ಎಂದು ಅಂದಾಜಿಸಲಾಗಿದೆ.

English summary
Three Infosys employees, attached to the Income Tax department's Centralised Processing Centre here, were arrested for allegedly taking commission from tax-payers for speedy processing of their refund, Electronics city police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X