ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ಮಿಕರಲ್ಲಿ ಹೆಚ್ಚಿದ ವೈರಸ್ ಪ್ರಕರಣ: ಕಾರ್ಖಾನೆಗಳಲ್ಲಿ ಬಿಬಿಎಂಪಿ ಕೋವಿಡ್ ಪರೀಕ್ಷೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21: ಅನ್‌ಲಾಕ್ ಪ್ರಕ್ರಿಯೆ ಜಾರಿಯಾದ ಬಳಿಕ ಅನೇಕ ಕೈಗಾರಿಕೆಗಳು, ಉದ್ಯಮಗಳು ತಮ್ಮ ಚಟುವಟಿಕೆ ಆರಂಭಿಸಿವೆ. ಆದರೆ ಕಾರ್ಖಾನೆಗಳು ಆರಂಭವಾಗುತ್ತಿದ್ದಂತೆಯೇ ಅವುಗಳ ನೌಕರರಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಮುಖ್ಯವಾಗಿ ಜವಳಿ ಕಾರ್ಖಾನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ.

ಕಾರ್ಮಿಕರಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವುದರಿಂದ ಕಾರ್ಖಾನೆಗಳಲ್ಲಿ ಅಧಿಕ ಮಟ್ಟದಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಲು ಬಿಬಿಎಂಪಿ ಪ್ರಾರಂಭಿಸಿದೆ. ಬೊಮ್ಮನಹಳ್ಳಿ ವಲಯದ 16 ವಾರ್ಡ್‌ಗಳಲ್ಲಿ ಕೋವಿಡ್ ಪರೀಕ್ಷೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಭಾಗದಲ್ಲಿ ಅನೇಕ ನೌಕರರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಕೊರೊನಾ ವೈರಸ್ ಲಸಿಕೆ ಸಿಕ್ಕ ಬಳಿಕ ಮುಂದೇನು?: ಭಾರತಕ್ಕಿದೆ ಬಹುದೊಡ್ಡ ಸವಾಲುಗಳುಕೊರೊನಾ ವೈರಸ್ ಲಸಿಕೆ ಸಿಕ್ಕ ಬಳಿಕ ಮುಂದೇನು?: ಭಾರತಕ್ಕಿದೆ ಬಹುದೊಡ್ಡ ಸವಾಲುಗಳು

ಬೊಮ್ಮನಹಳ್ಳಿ ವಲಯದಲ್ಲಿನ ದೈನಂದಿನ ಪ್ರಕರಣಗಳ ವರದಿಗಳನ್ನು ಬಿಬಿಎಂಪಿ ಪಡೆದುಕೊಳ್ಳುತ್ತಿದೆ. ಸೆ. 12ರಂದು ಹೊರಡಿಸಿದ್ದ ಆದೇಶದಲ್ಲಿ, ಸೀಮಿತ ಸ್ಥಳದೊಳಗೆ ಅಪಾರ ಸಂಖ್ಯೆಯ ಕೆಲಸಗಾರರನ್ನು ನಿಯೋಜಿಸುತ್ತಿರುವುದರ ವಿರುದ್ಧ ಬಿಬಿಎಂಪಿ ಎಚ್ಚರಿಕೆ ನೀಡಿತ್ತು. ಇದು ಅತಿ ಕಡಿಮೆ ಅವಧಿಯಲ್ಲಿಯೇ ಎಲ್ಲ ಕಾರ್ಮಿಕರಿಗೂ ಕೋವಿಡ್ ಹರಡುವ ಗಂಭೀರ ಅಪಾಯಕ್ಕೆ ಎಡೆಮಾಡಿಕೊಡಲಿದೆ. ಜತೆಗೆ ನಗರವನ್ನು ಕೂಡ ಮತ್ತಷ್ಟು ಅಪಾಯಕ್ಕೆ ತಳ್ಳಲಿದೆ ಎಂದು ಅದು ಹೇಳಿತ್ತು.

''ಕೊರೊನಾ ವೈರಸ್ ವಿರುದ್ಧದ ಹೋರಾಟವು ಸ್ಥಳೀಯ ಮಟ್ಟದಲ್ಲಿ ನಡೆಯಬೇಕಿದೆ. ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದಲ್ಲಿ ಪರಿಸ್ಥಿತಿಯನ್ನು ನಿರ್ವಹಿಸುವಷ್ಟು ವಾರ್ಡ್‌ಗಳನ್ನು ಶಕ್ತಗೊಳಿಸಲಾಗಿದೆ. ಕೊರೊನಾ ವೈರಸ್ ವಿರುದ್ಧ ವಾರ್ಡ್‌ಗಳು ಪರಿಣಾಮಕಾರಿಯಾಗಿ ಹೋರಾಡುತ್ತಿವೆ'' ಎಂದು ವಲಯದ ವಿಶೇಷ ಅಧಿಕಾರಿಯಾಗಿರುವ ಕ್ಯಾಪ್ಟನ್ ಪಿ. ಮಣಿವಣ್ಣನ್ ತಿಳಿಸಿದ್ದಾರೆ. ಮುಂದೆ ಓದಿ...

ವೈದ್ಯರ ತಂಡ ಸನ್ನದ್ಧ

ವೈದ್ಯರ ತಂಡ ಸನ್ನದ್ಧ

''ಬೊಮ್ಮನಹಳ್ಳಿಯಲ್ಲಿ ರೋಗಿಗಳು ಆಸ್ಪತ್ರೆ ತಲುಪಿದ ತಕ್ಷಣವೇ ಅವರ ಆರೋಗ್ಯದ ಕಾಳಜಿ ತೆಗೆದುಕೊಳ್ಳಲು ಆಸ್ಪತ್ರೆ ಎಂಜಿಎಂಟಿ ತಂಡ ಸನ್ನಿದ್ಧವಾಗಿರುತ್ತದೆ. ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸುವುದರಿಂದ ರೋಗಿಗಳು ಬಿಡುಗಡೆಯಾಗಿ ಮನೆಗೆ ಮರಳುವವರೆಗೂ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿವೆ'' ಎಂದು ಕ್ಯಾಪ್ಟನ್ ಮಣಿವಣ್ಣನ್ ಮಾಹಿತಿ ನೀಡಿದ್ದಾರೆ.

ವಲಯದಲ್ಲಿನ ಕೈಗಾರಿಕೆಗಳು

ವಲಯದಲ್ಲಿನ ಕೈಗಾರಿಕೆಗಳು

ಬೊಮ್ಮನಹಳ್ಳಿ ವಲಯದ ಭಾಗಗಳಲ್ಲಿ ಕೋವಿಡ್ ತಪಾಸಣೆಗೆ ನಿರಂತರವಾಗಿ ಶಿಬಿರಗಳನ್ನು ನಡೆಸಲಾಗುತ್ತಿದೆ. 2016-17ರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ಪ್ರಕಾರ ಈ ವಲಯದಲ್ಲಿ 901 ಬೃಹತ್, 50 ಮಧ್ಯಮ ಮತ್ತು 1679 ಸಣ್ಣ ಕೈಗಾರಿಕೆಗಳಿವೆ. ಈ ಎಲ್ಲ ಕೈಗಾರಿಕೆಗಳಲ್ಲಿನ ನೌಕರರನ್ನೂ ತಪಾಸಣೆಗೆ ಒಳಪಡಿಸವ ಗುರಿ ಹೊಂದಲಾಗಿದೆ.

ಕೋವಿಡ್-19 ವಿಮೆ ರಕ್ಷಣೆಯಲ್ಲಿ ದಕ್ಷಿಣ ಭಾರತವೇ ಮುಂದುಕೋವಿಡ್-19 ವಿಮೆ ರಕ್ಷಣೆಯಲ್ಲಿ ದಕ್ಷಿಣ ಭಾರತವೇ ಮುಂದು

ವಿರೋಧಿಸಿದರೆ ಕ್ರಮ

ವಿರೋಧಿಸಿದರೆ ಕ್ರಮ

ಬಿಬಿಎಂಪಿ ನಡೆಸುತ್ತಿರುವ ತಪಾಸಣೆಗಳಿಗೆ ಅನೇಕ ಕಾರ್ಮಿಕರು ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ. ಇದು ತಮ್ಮ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿದ್ದಾರೆ. ಆದರೆ ಬಿಬಿಎಂಪಿ ನಡೆಸುವ ಕೊರೊನಾ ವೈರಸ್ ಪರೀಕ್ಷೆಗಳಿಗೆ ಸಹಕರಿಸದವರ ವಿರುದ್ಧ ಕಾರ್ಮಿಕ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕ್ಯಾಪ್ಟನ್ ಮಣಿವಣ್ಣನ್ ಹೇಳಿದ್ದಾರೆ.

Recommended Video

Corona ಲಸಿಕೆ ಭಾರತದಲ್ಲಿ ಉತ್ಪಾದನೆ ಆದ ಬಳಿಕ ಇರುವ ಸವಾಲುಗಳೇನು ? | Oneindia Kannada
ವಲಯದಲ್ಲಿ ಪಾಸಿಟಿವ್ ಪ್ರಕರಣಗಳು

ವಲಯದಲ್ಲಿ ಪಾಸಿಟಿವ್ ಪ್ರಕರಣಗಳು

ಬೆಂಗಳೂರು ನಗರದಲ್ಲಿ ಶೇ 21ರಷ್ಟು ಪಾಸಿಟಿವ್ ಪ್ರಕರಣಗಳಿವೆ ಎನ್ನಲಾಗಿದೆ. ಒಟ್ಟಾರೆ ನಗರದ ಪ್ರಕರಣಗಳಲ್ಲಿ ಬೊಮ್ಮನಹಳ್ಳಿ ವಲಯದಲ್ಲಿನ ಪ್ರಕರಣಗಳು ಶೇ 13ರಷ್ಟಿವೆ. ಈ ವಲಯದಲ್ಲಿ ಪ್ರತಿದಿನ ಸರಾಸರಿ 350 ಪ್ರಕರಣಗಳು ವರದಿಯಾಗುತ್ತಿವೆ. ನಗರದ ಸುತ್ತಲಿನ ಇತರೆ ವಲಯಗಳಲ್ಲಿ ಅನ್‌ಲಾಕ್ 4.0 ಶುರುವಾದ ಬಳಿಕ ಇನ್ನೂ ಅಧಿಕ ಪ್ರಕರಣಗಳು ವರದಿಯಾಗಿವೆ.

English summary
BBMP has started coronavirus testing programme within factories as the large number of workers are testing positive for the virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X