ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಿಳುನಾಡು-ಕರ್ನಾಟಕದಲ್ಲಿ ಏ.20 ಕೈಗಾರಿಕೆ ಕಾರ್ಯಾರಂಭ ಅನುಮಾನ

|
Google Oneindia Kannada News

ಬೆಂಗಳೂರು, ಏಪ್ರಿಲ್.19: ಭಾರತ ಲಾಕ್ ಡೌನ್ ನಡುವೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೈಗಾರಿಕೆಗಳ ಪುನರ್ ಆರಂಭಿಸುವ ಸರ್ಕಾರದ ನಿರ್ಧಾರವನ್ನು ಮುಂದೂಡಲಾಗಿದೆ. ಏಪ್ರಿಲ್.20ರಿಂದ ದೇಶಾದ್ಯಂತ ಪ್ರದೇಶಗಳಲ್ಲಿ ಲಾಕ್ ಡೌನ್ ಕೊಂಚ ಸಡಿಲಿಕೆ ಆಗಲಿದೆ.
ಆದರೆ, ಸೋಮವಾರದಿಂದಲೇ ಎರಡು ರಾಜ್ಯಗಳ ಮಹಾನಗರಗಳಲ್ಲಿ ಇರುವ ಕೈಗಾರಿಕೆಗಳಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ನಿರ್ದಿಷ್ಟ ಮಾರ್ಗಸೂಚಿಗಳ ಅಡಿಯಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸುವ ಚಿಂತನೆಯನ್ನು ತಡೆ ಹಿಡಿಯಲಾಗಿದೆ.

ಮಾಂಸಹಾರಿಗಳಿಗೆ ಸಿಹಿಸುದ್ದಿ: ಆನ್ ಲೈನ್ ನಲ್ಲೇ ಚಿಕನ್, ಫಿಶ್ ಮಾರಾಟ!
ತಮಿಳುನಾಡು ಮತ್ತು ಕರ್ನಾಟಕದಲ್ಲಿ ಅಶೋಕ್ ಲೈಲ್ಯಾಂಡ್, ಹುಂಡೈ, ಟೊಯೋಟಾ, ಕಿರ್ಲೋಸ್ಕರ್ ಸೇರಿದಂತೆ ಪ್ರಮುಖ ಕೈಗಾರಿಕೆಗಳು ಏಪ್ರಿಲ್.20ರಿಂದ ಕಾರ್ಯಾರಂಭ ಮಾಡುವುದು ಅನುಮಾನ. ಇದರ ಜೊತೆಗೆ ವಿಸ್ಟ್ರೋನ್, ಫಾಕ್ಸ್ ಕಾನ್ ಕೈಗಾರಿಕೆ ತೆರೆಯುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಗೋಚರಿಸುತ್ತಿದೆ.

Industries Not Opened From April.20 In Karnataka And Tamil nadu

ತಮಿಳುನಾಡಿನಲ್ಲಿ ತಜ್ಞರ ಸಮಿತಿ ಶಿಫಾರಸ್ಸು ಆಧರಿಸಿ ಕ್ರಮ:
ತಮಿಳುನಾಡಿನಲ್ಲಿ ಇರುವ ಕೈಗಾರಿಕೆಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿಯು ಅಧ್ಯಯನ ನಡೆಸಿ ಶಿಫಾರಸ್ಸು ವರದಿಯನ್ನು ಸೋಮವಾರ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಸಲ್ಲಿಸಲಿದೆ. ಈ ತಜ್ಞರ ಸಮಿತಿಯ ಶಿಫಾರಸ್ಸು ಆಧರಿಸಿ ಕೆಲವು ನಿರ್ಬಂಧಗಳನ್ನು ವಿಧಿಸಿ ಕೈಗಾರಿಕೆಗಳ ಪುನರ್ ಕಾರ್ಯಾರಂಭಕ್ಕೆ ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಕರ್ನಾಟಕದಲ್ಲಿ ಪ್ರತ್ಯೇಕ ಆದೇಶ ಹೊರಡಿಸಿದ ಸರ್ಕಾರದ ಕಾರ್ಯದರ್ಶಿ:
ಕರ್ನಾಟಕದಲ್ಲಿ ಕೈಗಾರಿಕಾ ಘಟಕಗಳಿಗೆ ಸರ್ಕಾರದ ಕೈಗಾರಿಕಾ ಕಾರ್ಯದರ್ಶಿ ಗೌರವ್ ಗುಪ್ತಾ ಪ್ರತ್ಯೇಕ ಆದೇಶ ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿ ಲಾಕ್ ಡೌನ್ ಮೇ.3ರವರೆಗೂ ಮುಂದುವರಿಯಲಿದ್ದು, ಕೈಗಾರಿಕೆಗಳ ತೆರೆಯುವುದರ ಕುರಿತು ಪರಿಶೀಲನೆ ನಡೆಸಲಾಗುತ್ತದೆ.

English summary
Industries Not Opened From April.20 In Karnataka And Tamil nadu. Two States Deferred Dicision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X