• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕದಲ್ಲಿ ಕಾರು ಉತ್ಪಾದಿಸಲು ಎಲಾನ್ ಮಸ್ಕ್​ಗೆ ಆಹ್ವಾನ ನೀಡಿದ ಮುರುಗೇಶ್ ನಿರಾಣಿ

|
Google Oneindia Kannada News

ಬೆಂಗಳೂರು, ಜನವರಿ 18: ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ ಆರಂಭಿಸಲು ಅಮೆರಿಕದ ಖ್ಯಾತ ಉದ್ಯಮಿ, ಸ್ಪೇಸ್​-ಎಕ್ಸ್​ ಮಾಲೀಕ ಹಾಗೂ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್‌ಗೆ ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಆಹ್ವಾನ ನೀಡಿದ್ದಾರೆ.

ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಸಂಶೋಧನಾ ಕೇಂದ್ರಗಳಿದ್ದು, 45ಕ್ಕೂ ಹೆಚ್ಚು ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್​ಅಪ್​ಗಳಿವೆ. ಹೀಗಾಗಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ ತೆರೆಯಲು ಕರ್ನಾಟಕವೇ ಸೂಕ್ತ ಸ್ಥಳ ಎಂದು ಮುರುಗೇಶ್ ನಿರಾಣಿ ಟ್ವೀಟ್ ಮೂಲಕ ಉದ್ಯಮಿ ಎಲಾನ್ ಮಸ್ಕ್ ಅವರಿಗೆ ಆಹ್ವಾನ ನೀಡಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಸಹ ಟ್ಯಾಗ್ ಮಾಡಿದ್ದಾರೆ.

ಮಸ್ಕ್​ಗೆ ಆಮಂತ್ರಣ ನೀಡಿದ್ದ ಮಹಾರಾಷ್ಟ್ರ, ತೆಲಂಗಾಣ
ಅಮೆರಿಕದ ಕಾರು ಎಲೆಕ್ಟ್ರಿಕ್ ಕಾರು ಉದ್ಯಮಿ ಎಲಾನ್ ಮಸ್ಕ್ ಅವರನ್ನು ಮಹಾರಾಷ್ಟ್ರದ ನೀರಾವರಿ ಸಚಿವ ಮತ್ತು ಎನ್​ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಇತ್ತೀಚೆಗೆ ತಮ್ಮ ರಾಜ್ಯಕ್ಕೆ ಸ್ವಾಗತಿಸಿದ್ದಾರೆ.

"ಮಹಾರಾಷ್ಟ್ರವು ಭಾರತದ ಮುಂದುವರೆದ ರಾಜ್ಯಗಳಲ್ಲಿ ಒಂದಾಗಿದ್ದು, ಭಾರತದಲ್ಲಿ ಟೆಸ್ಲಾ ಕಂಪನಿ ಸ್ಥಾಪನೆಯಾಗಲು ನಿಮಗೆ ಬೇಕಿರುವ ಎಲ್ಲ ಬಗೆಯ ನೆರವನ್ನು ಮಹಾರಾಷ್ಟ್ರ ಸರ್ಕಾರದಿಂದ ನಾವು ಕೊಡುತ್ತೇವೆ. ನಿಮ್ಮ ಉತ್ಪಾದನಾ ಘಟಕವನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸಬೇಕೆಂದು ಕೋರುತ್ತೇವೆ,'' ಎಂದು ಸಚಿವರು ಟ್ವೀಟ್ ಮಾಡಿದ್ದರು.

ಹೂಡಿಕೆ ಮಾಡಲು ಮಹಾರಾಷ್ಟ್ರ ಅತ್ಯುತ್ತಮ ಸ್ಥಳ ಎನಿಸಿದೆ ಎಂದು ಸಚಿವರು ಟ್ವೀಟ್​ನಲ್ಲಿ ವಿವರಿಸಿದ್ದರು. ಶನಿವಾರವಷ್ಟೇ (ಜ.15) ತೆಲಂಗಾಣ ಸರ್ಕಾರ ಎಲಾನ್ ಮಸ್ಕ್​ಗೆ ಇದೇ ರೀತಿಯ ಸ್ವಾಗತ ಕೋರಿದೆ.

Industrial Minister Murugesh Nirani Invite to Elon Musk to Produce Electric Car in Karnataka

"ನಿಮ್ಮ ಕಾರು ಭಾರತದಲ್ಲಿ ಯಾವಾಗ ಸಿಗುತ್ತದೆ," ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಎಲಾನ್ ಮಸ್ಕ್‌ರನ್ನು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಮಸ್ಕ್, "ಭಾರತದಲ್ಲಿ ಸರ್ಕಾರದ ನಿಯಮಗಳ ಅಡೆತಡೆ ಎದುರಿಸುತ್ತಿದ್ದೇನೆ," ಎಂದು ಜನವರಿ 13ರಂದು ಉತ್ತರಿಸಿದ್ದರು.

ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಮಸ್ಕ್ ನಿರ್ಧಾರಕ್ಕೆ ಪೂರಕವಾಗಿ ಸ್ಪಂದಿಸಿದ್ದ ತೆಲಂಗಾಣ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಕೆ.ಟಿ.ರಾಮರಾವ್, 'ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಮಸ್ಕ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ' ಎಂದಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕದ ಆರಂಭಿಸುವುದಾಗಿ ಎಲಾನ್ ಮಸ್ಕ್ 2020ರಲ್ಲಿ ಘೋಷಿಸಿದ್ದರು. ಇದಕ್ಕಾಗಿ ಟೆಸ್ಲಾ ಕಂಪನಿಯ ಅಧೀನದಲ್ಲಿ ಇಂಡಿಯಾ ಮೋಟಾರ್ಸ್ ಅಂಡ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದರು.

ಟೆಸ್ಲಾ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕದ ಆರಂಭಿಸುವುದರಿಂದ ಭಾರತದಲ್ಲಿ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕಾರು ಸಿಗಲಿವೆ. ಯಾವ ಘಟಕ ರಾಜ್ಯದಲ್ಲಿ ಆರಂಭಿಸಲಾಗುತ್ತದೆಯೋ ಆ ರಾಜ್ಯಕ್ಕೆ ಬಂಡವಾಳ ಹರಿದುಬರಲಿದೆ. ಅಲ್ಲದೇ ನೂರಾರು ಉದ್ಯೋಗಗಳು ಸೃಷ್ಟಿಯಾಗಲಿವೆ.

ಮುರುಗೇಶ್ ನಿರಾಣಿ
Know all about
ಮುರುಗೇಶ್ ನಿರಾಣಿ
English summary
Karnataka Large Scale Industrial Minister Murugesh Nirani invites Elon Musk to produce Electric car in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X