ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಲಂಕೇಶ್ ಸಾವಿನ ಬಗ್ಗೆ ಮಾತನಾಡಿದ್ದು ನೋವು ತಂದಿದೆ: ಇಂದ್ರಜಿತ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 3: ನನ್ನ ಅಕ್ಕ ಪತ್ರಕರ್ತೆ ಗೌರಿ ಲಂಕೇಶ್ ಸಾವಿನ ಬಗ್ಗೆ ಹೇಳಿಕೆ ನೀಡಿರುವುದು ನನಗೆ ತುಂಬಾ ನೋವು ತಂದಿದೆ ಎಂದು ಇಂದ್ರಜಿತ್ ಲಂಕೇಶ್ ಕಣ್ಣೀರು ಹಾಕಿದ ಘಟನೆ ಇಂದು ನಡೆದಿದೆ.

Recommended Video

Indrajith Lankesh First Reaction After CCB Enquiry | Sandalwood Drug Mafia | Filmibeat Kannada

ಈ ಕುರಿತು ಅವರ ನಿವಾಸದಲ್ಲಿ ಮಾತನಾಡಿದ ಇಂದ್ರಜಿತ್, ಅಕ್ಕ ಗೌರಿ ಲಂಕೇಶ್ ಅವರ ಬಗ್ಗೆ ಹೇಳಿಕೆ ನೀಡಿರುವುದು ತುಂಬಾ ದುಃಖ ತಂದಿದೆ. ಅವರ ತತ್ವ-ಸಿದ್ಧಾಂತ ಬೇರೆ ಇತ್ತು. ಅವರದ್ದು ಸೈದ್ಧಾಂತಿಕ ಕೊಲೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.

ಡ್ರಗ್ಸ್ ಬಗ್ಗೆ ಮತ್ತೊಂದು ಆಘಾತಕಾರಿ ಸುದ್ದಿ ತಿಳಿಸಿದ ಪ್ರಮೋದ್ ಮುತಾಲಿಕ್ಡ್ರಗ್ಸ್ ಬಗ್ಗೆ ಮತ್ತೊಂದು ಆಘಾತಕಾರಿ ಸುದ್ದಿ ತಿಳಿಸಿದ ಪ್ರಮೋದ್ ಮುತಾಲಿಕ್

ಈ ಹಿಂದೆ ಒಬ್ಬ ನಟನ ಕುರಿತು ನಾನು ಹೇಳಿಕೆ ನೀಡಿದ್ದೆ. ಆದರೆ ಸಾವಿನ ಬಳಿಕ ಈ ರೀತಿ ಹೇಳಬಾರದು ಎಂದು ನನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದೇನೆ. ನಮ್ಮಕ್ಕನ ಸಾವು ಸಾವಲ್ಲವೇ, ನಮಗೂ ತಾಯಿ ಇಲ್ಲವೇ, ಅವರು ಕ್ಯಾನ್ಸರ್ ರೋಗಿ, ಅವರಿಗೆ ನೋವಾಗುವುದಿಲ್ಲವೇ, ನಮ್ಮಕ್ಕನನ್ನು ಸಿದ್ಧಾಂತ ದೃಷ್ಟಿಯಿಂದ ಹಲವರು ಒಪ್ಪದಿರಬಹುದು. ಆದರೆ ಒಂದು ಸಾವು ತರುವಷ್ಟೂ ಸಿದ್ಧಾಂತ ಕ್ರೂರಿಯಾಗಿದೆಯೇ ಎಂದು ಪರೋಕ್ಷವಾಗಿ ಪ್ರಮೋದ್ ಮುತಾಲಿಕ್ ಅವರಿಗೆ ತಿರುಗೇಟು ನೀಡಿದರು.

Indrajit Lankesh Reaction To Pramod Muthalik Statement On Gowri Lankesh

ಬುಧವಾರದಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ""ಡ್ರಗ್ ವಿಚಾರದಲ್ಲಿ ಇಂದ್ರಜಿತ್ ಲಂಕೇಶ್ ಹೀರೋ ಆಗೋಕೆ ಹೊರಟಿದ್ದಿರಲ್ಲ. ನಿಮ್ಮ ಅಕ್ಕ ಗೌರಿ ಲಂಕೇಶ್ ಡ್ರಗ್ ಅಡಿಕ್ಟ್ ಆದಾಗ ನೀವು ಎಲ್ಲಿ ಹೋಗಿದ್ರಿ? ಅಂದು ಯಾಕೆ ಈ ವಿಚಾರದ ಬಗ್ಗೆ ನೀವು ಮಾತನಾಡಲಿಲ್ಲ? ಗೌರಿ ಲಂಕೇಶ್‌ರನ್ನು ಸುಧಾರಿಸುವ ಪ್ರಯತ್ನ ಏಕೆ ಮಾಡಲಿಲ್ಲ?'' ಎಂದು ಪ್ರಶ್ನಿಸಿದ್ದರು.

ನಿರ್ದೇಶಕ ಇಂದ್ರಜಿತ್ ಮಾತನಾಡಿ, ಸಿನಿಮಾ ಇಂಡಸ್ಟ್ರಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಡ್ರಗ್ಸ್ ಕಳಂಕದಿಂದ ಕೆಟ್ಟ ಹೆಸರು ಬರುತ್ತಿತ್ತು. ಇದನ್ನು ಸರಿಪಡಿಸುವ ಉದ್ದೇಶದಿಂದ, ಚಿತ್ರರಂಗವನ್ನು ಸ್ವಚ್ಛಗೊಳಿಸಬೇಕಿದೆ. ಇದರಲ್ಲಿ ಇತ್ತೀಚಿನ ನಟ, ನಟಿಯರು ಭಾಗಿಯಾಗಿದ್ದಾರೆ ಎಂದು ಪುನರುಚ್ಚರಿಸಿದರು.

ಈ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿಯು ಎಲ್ಲ ನಟ, ನಟಿಯರನ್ನು ಕರೆಸಿ ಎಚ್ಚರಿಕೆ, ಸಲಹೆ ನೀಡಿದ್ದರೆ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಇದಾವುದನ್ನೂ ವಾಣಿಜ್ಯ ಮಂಡಳಿ ಮಾಡಲಿಲ್ಲ. ಈ ರೀತಿ ಸ್ವಚ್ಛವಾಗುವುದರಿಂದ ಮುಂದೆ ಬರುವ ಯುವ, ನಟ, ನಟಿಯರಿಗೆ ಸಹಕಾರಿಯಾಗಲಿದೆ. ಹನಿಟ್ರ್ಯಾಪ್ ವಿಚಾರ ಬಂದಾಗಲೂ ಯಾರೂ ಕರೆಸಿ ಮಾತನಾಡಲಿಲ್ಲ ಎಂದು ದೂರಿದ್ದಾರೆ.

ತನಿಖಾಧಿಕಾರಿಗಳಿಗೆ ಸಹಕಾರ ನೀಡುವುದು ನಮ್ಮ ಕರ್ತವ್ಯ, ನಿಮಗೆ ಗೊತ್ತಿದ್ದರೆ ನೀವೂ ಬಂದು ಹೇಳಿ, ಒಟ್ಟಿನಲ್ಲಿ ಚಿತ್ರರಂಗ ಸ್ವಚ್ಛವಾಗಬೇಕು. ನಮಗೆ ಸಪೋರ್ಟ್ ಬೇಕು, ರಕ್ಷಣೆ ಅಗತ್ಯ ನನಗಿಲ್ಲ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

English summary
"It is very sad for me to make a some statement about Gowri Lankesh's death," Indrajit Lankesh tears today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X