ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾ ಕ್ಯಾಂಟೀನ್‌ ಮೆನು ಬದಲು : ಚಪಾತಿ, ರಾಗಿ ಮುದ್ದೆ ಸೇರ್ಪಡೆ?

|
Google Oneindia Kannada News

ಬೆಂಗಳೂರು, ಜುಲೈ 03 : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ ಮೆನು ಆಗಸ್ಟ್ ತಿಂಗಳಿನಿಂದ ಬದಲಾಗಲಿದೆ. ಕಾಫಿ, ಟೀ ಜೊತೆಗೆ ಹಲವು ಹೊಸ ತಿಂಡಿಗಳು ಕ್ಯಾಂಟೀನ್‌ನಲ್ಲಿ ಲಭ್ಯವಾಗಲಿದೆ.

ಇಂದಿರಾ ಕ್ಯಾಂಟೀನ್‌ಗಳಿಗೆ ಊಟ ಪೂರೈಕೆ ಮಾಡುವ ಈಗಿನ ಟೆಂಡರ್ ಅವಧಿ ಆಗಸ್ಟ್ 11ಕ್ಕೆ ಮುಕ್ತಾಯಗೊಳ್ಳಲಿದೆ. ಜನರು ನೀಡಿರುವ ಸಲಹೆಯನ್ನು ಆಧರಿಸಿ ಹೊಸ ಟೆಂಡರ್ ಪಡೆಯುವವರಿಗೆ ಮೆನು ಬದಲಾವಣೆ ಮಾಡುವಂತೆ ಸೂಚನೆ ನೀಡಲಾಗುತ್ತದೆ.

ಇಂದಿರಾ ಕ್ಯಾಂಟೀನ್‌ ಊಟದಲ್ಲಿ, ಬ್ಯಾಕ್ಟೀರಿಯಾ, ಫಂಗಸ್ ಪತ್ತೆಇಂದಿರಾ ಕ್ಯಾಂಟೀನ್‌ ಊಟದಲ್ಲಿ, ಬ್ಯಾಕ್ಟೀರಿಯಾ, ಫಂಗಸ್ ಪತ್ತೆ

ಆಗಸ್ಟ್‌ನಿಂದ ಬೆಂಗಳೂರು ನಗರದ ಇಂದಿರಾ ಕ್ಯಾಂಟೀನ್ ಮೆನು ಮಾತ್ರ ಬದಲಾಗಲಿದೆ. ಕಾಫಿ ಅಥವ ಟೀ, ಮಂಗಳೂರು ಬನ್ಸ್, ಬ್ರೆಡ್ ಜಾಮ್, ದಿನ ಬಿಟ್ಟು ದಿನ ಚಪಾತಿ, ರಾಗಿ ಮುದ್ದೆ ನೀಡುವ ಪ್ರಸ್ತಾವನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಿದೆ.

ಇಂದಿರಾ ಕ್ಯಾಂಟೀನ್‌ ಆಹಾರ ಗುತ್ತಿಗೆದಾರರಿಗೆ ಬಿತ್ತು 1.32 ಕೋಟಿ ದಂಡಇಂದಿರಾ ಕ್ಯಾಂಟೀನ್‌ ಆಹಾರ ಗುತ್ತಿಗೆದಾರರಿಗೆ ಬಿತ್ತು 1.32 ಕೋಟಿ ದಂಡ

Indira Canteen menu to change from August

'ಹೊಸ ತಿನಿಸುಗಳಿಗೆ ದರಗಳನ್ನು ನಿಗದಿ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ. ಕಾಫಿ ಅಥವ ಟೀ ನೀಡುವಂತೆ ಹಿಂದಿನಿಂದಲೂ ಬೇಡಿಕೆ ಬಂದಿತ್ತು. ಜುಲೈ 2ನೇ ವಾರದಲ್ಲಿ ಹೊಸ ಟೆಂಡರ್ ಕರೆಯಲಾಗುತ್ತದೆ' ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಇನ್ಮುಂದೆ ಟೀ, ಕಾಫಿನೂ ಸಿಗುತ್ತೆಇಂದಿರಾ ಕ್ಯಾಂಟೀನ್‌ನಲ್ಲಿ ಇನ್ಮುಂದೆ ಟೀ, ಕಾಫಿನೂ ಸಿಗುತ್ತೆ

'ಇಂದಿರಾ ಕ್ಯಾಂಟೀನ್‌ಗಳಲ್ಲಿ ಅಡುಗೆಗೆ ಬಳಸುವ ಪದಾರ್ಥಗಳ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ. ಕ್ಯಾಂಟೀನ್‌ಗಳಿಗೆ ಪ್ರತಿವಾರವೂ ಭೇಟಿ ನೀಡುತ್ತಿದ್ದೇನೆ. ಆಹಾರ ಗುಣಮಟ್ಟದ ಬಗ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ' ಎಂದು ಆಯುಕ್ತರು ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಬೆಂಗಳೂರು ನಗರದಲ್ಲಿ ಪ್ರತಿ ವಾರ್ಡ್‌ಗೊಂದು ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ. ಸಂಚಾರಿ ಕ್ಯಾಂಟೀನ್‌ಗಳು ಸಹ ಕಾರ್ಯ ನಿರ್ವಹಣೆ ಮಾಡುತ್ತಿವೆ.

English summary
From August month Indira Canteen menu will change. People will get Tea, Coffe, Chapathi, Ragi Mudde in canteens across Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X