ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ

|
Google Oneindia Kannada News

ನೆಲಮಂಗಲ, ನವೆಂಬರ್ 23: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪುರಸಭೆ ವತಿಯಿಂದ ನವೆಂಬರ್ 24 ರಂದು ಬೆಳಿಗ್ಗೆ 9 ಗಂಟೆಗೆ ನೆಲಮಂಗಲ ಪುರಸಭೆ ವ್ಯಾಪಿಗೆ ಒಳಪಡುವ ವಾರ್ಡ್ ನಂ. 19ರ ಪ್ರವಾಸಿ ಮಂದಿರದ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ.

ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನೋಕೆ ಹೋದ ಡಿಸಿಎಂ ಪೇಚಿಗೆ ಸಿಲುಕಿದ್ರು ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನೋಕೆ ಹೋದ ಡಿಸಿಎಂ ಪೇಚಿಗೆ ಸಿಲುಕಿದ್ರು

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಭೈರೇಗೌಡ ಇಂದಿರಾ ಕ್ಯಾಂಟೀನ್ ಅನ್ನು ಉದ್ಘಾಟಿಸಲಿದ್ದಾರೆ.

ಒಂದು ಇಂದಿರಾ ಕ್ಯಾಂಟೀನ್ ಬಣ್ಣ ಬದಲು, ಶುರುವಾಯ್ತು ಹೊಸ ವಿವಾದ ಒಂದು ಇಂದಿರಾ ಕ್ಯಾಂಟೀನ್ ಬಣ್ಣ ಬದಲು, ಶುರುವಾಯ್ತು ಹೊಸ ವಿವಾದ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಈ ಹಿಂದೆಯೇ (ಸಿದ್ದರಾಮಯ್ಯ ಆಡಿತದ ಕೊನೆಯ ಸಮಯದಲ್ಲಿ) ಇಂದಿರಾ ಕ್ಯಾಂಟೀನ್‌ಗಾಗಿ ಸ್ಥಳ ಗುರುತಿಸಲಾಗಿತ್ತು. ನಾಲ್ಕು ಜಿಲ್ಲೆಗಳಲ್ಲಿ ನೆಲಮಂಗಲದಲ್ಲಿ ಎರಡನೇ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳ್ಳಲಿದೆ.

Indira canteen inaguration program in Nelmangala on November 23

ನೆಲಮಂಗಲ ಶಾಸಕರಾದ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಹಸಿದ ಹೊಟ್ಟೆ ತಣಿಸುವ 4 ಇಂದಿರಾ ಕ್ಯಾಂಟೀನ್ ಉದ್ಘಾಟನೆ ಹಸಿದ ಹೊಟ್ಟೆ ತಣಿಸುವ 4 ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಸಂಸದರಾದ ಎಂ.ವೀರಪ್ಪ ಮೊಯಿಲಿ, ವಿಧಾನಪರಿಷತ್ ಸದಸ್ಯರಾದ ಎಸ್.ರವಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ, ನೆಲಮಂಗಲ ಪುರಸಭೆ ಅಧ್ಯಕ್ಷರಾದ ಹೆಚ್.ಜಿ.ಸುಜಾತಪ್ರಕಾಶ್, ಉಪಾಧ್ಯಕ್ಷರರಾದ ನಂದಿನಿಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪಿ.ಅರುಣ್‌ಕುಮಾರ್, ೧೯ನೇ ವಾರ್ಡ್‌ನ ಪುರಸಭೆ ಸದಸ್ಯರಾದ ಡಿ.ಸೀತಾರಾಮು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಹೇಮಂತ್ ಶರಣ್, ನೆಲಮಂಗಲ ತಾಲ್ಲೂಕು ತಹಸೀಲ್ದಾರ್ ರಾಜಶೇಖರ್, ಪುರಸಭೆ ಮುಖ್ಯ ಅಧಿಕಾರಿ ಪಿ.ಶಿವಪ್ರಸಾದ್, ಕಿರಿಯ ಅಭಿಯಂತರರಾದ ರವಿ.ಬಿ ಸೇರಿದಂತೆ ನೆಲಮಂಗಲ ಪುರಸಭೆಯ ಸದಸ್ಯರು ಹಾಗೂ ನಾಮ ನಿರ್ದೇಶಿತ ಸದಸ್ಯರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.

English summary
Indira canteen will be inagurated by minister Krishna Byregowda on November 24 in Nelamangala. This is Bengaluru rural district's first Indira canteen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X