ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾ ಕ್ಯಾಂಟೀನ್‌ ಆಹಾರ ಗುತ್ತಿಗೆದಾರರಿಗೆ ಬಿತ್ತು 1.32 ಕೋಟಿ ದಂಡ

|
Google Oneindia Kannada News

Recommended Video

ಇಂದಿರಾ ಕ್ಯಾಂಟೀನ್‌ ಆಹಾರ ಗುತ್ತಿಗೆದಾರರಿಗೆ ಬಿತ್ತು 1.32 ಕೋಟಿ ದಂಡ..! | Oneindia Kannada

ಬೆಂಗಳೂರು, ಜನವರಿ 31: ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರವನ್ನು ಸರಬರಾಜು ಮಾಡುವ ಎರಡು ಗುತ್ತಿಗೆದಾರರಿಗೆ 1.32 ಕೋಟಿ ರೂ ದಂಡ ವಿಧಿಸಲಾಗಿದೆ.

ಆಹಾರದ ಗುಣಮಟ್ಟ, ಆಹಾರದ ಪ್ರಮಾಣ, ಸರಿಯಾದ ಸಮಯಕ್ಕೆ ಆಹಾರ ಒದಗಿಸದೇ ಇರುವುದು ಹಾಗೂ ಇನ್ನಿತರೆ ನಿಯಮಗಳನ್ನು ಪಾಲನೆ ಮಾಡದಿರುವ ಕಾರಣ ಎರಡು ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ.

ಬಿಎಂಪಿ ಸದಸ್ಯರಿಗೆ ಲಕ್ಷುರಿ ಭೋಜನ ಬದಲು ಇಂದಿರಾ ಕ್ಯಾಂಟೀನ್ ಊಟ ಬಿಎಂಪಿ ಸದಸ್ಯರಿಗೆ ಲಕ್ಷುರಿ ಭೋಜನ ಬದಲು ಇಂದಿರಾ ಕ್ಯಾಂಟೀನ್ ಊಟ

ಬಿಬಿಎಂಪಿಯು ಈ ಎರಡು ಗುತ್ತಿಗೆದಾರರಿಗೆ 1,32,38,450 ಕೋಟಿ ರೂ ದಂಡ ವಿಧಿಸಿದೆ. ನವೆಂಬರ್ 2017ರಿಂದ 2018ರ ಡಿಸೆಂಬರ್ ವರೆಗಿನ ಅವರ ಕಾರ್ಯವನ್ನು ಗಮನದಲ್ಲಿಟ್ಟುಕೊಳ್ಳಲಾಗಿತ್ತು, ಮಾಜಿ ಸೈನಿಕರು ಇವರ ಕಾರ್ಯದ ಮೇಲೆ ನಿಗಾ ಇಡುತ್ತಿದ್ದರು. ಮಾಜಿ ಸೈನಿಕರು ನಗರದಲ್ಲಿರುವ ಎಲ್ಲಾ 198 ವಾರ್ಡ್‌ಗಳ ಇಂದಿರಾ ಕ್ಯಾಂಟೀನ್‌ ಮೇಲೆ ನಿಗಾ ಇಟ್ಟಿದ್ದಾರೆ.

Indira canteen caterers fined Rs 1.32 crore

ಶೀಘ್ರದಲ್ಲೇ ಬದಲಾಗಲಿದೆ ಇಂದಿರಾ ಕ್ಯಾಂಟೀನ್ ಮೆನು ಶೀಘ್ರದಲ್ಲೇ ಬದಲಾಗಲಿದೆ ಇಂದಿರಾ ಕ್ಯಾಂಟೀನ್ ಮೆನು

ಕೇವಲ ಕಾರ್ಯವನ್ನು ಗಮನಿಸುವುದಷ್ಟೇ ಅಲ್ಲದೆ ಸಾರ್ವಜನಿಕರಿಂದ ಅಭಿಪ್ರಾಯವನ್ನೂ ಕೂಡ ಪಡೆಯುತ್ತಿದ್ದಾರೆ. ಸಿಬ್ಬಂದಿಗಳ ವಸ್ತ್ರ, ಆಹಾರ ಸರಬರಾಜಿನಲ್ಲಿ ವ್ಯತ್ಯಯ, ಸಿಬ್ಬಂದಿಗಳ ವರ್ತನೆ ಎಲ್ಲವನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ.

ಕಳೆದ ಕೆಲವು ತಿಂಗಳ ಹಿಂದೆ ಇಂದಿರಾ ಕ್ಯಾಂಟೀನ್ ಸಾಂಬಾರಿನಲ್ಲಿ ಇಲಿ ಪತ್ತೆಯಾಗಿತ್ತು, ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಏಕಾಏಕಿ ಇಂದಿರಾ ಕ್ಯಾಂಟೀನ್ ತಪಾಸಣೆಗೆಂದು ತೆರಳಿದಾಗ ಸ್ವಚ್ಛತೆ ಇಲ್ಲದಿರುವುದು ಗೋಚರವಾಗಿತ್ತು.

English summary
Two main caterers supplying food to Indira canteens have been fines Rs 1.32 crore for falling short on a range of parameters like quality, quantity, hygiene and timely service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X