ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಲಿಕುರ್ಚಿ ಕೇಳಿದ್ದಕ್ಕೆ ಆವಾಜ್ ಹಾಕಿದ ಪೈಲಟ್ ಅಮಾನತು

|
Google Oneindia Kannada News

ಬೆಂಗಳೂರು, ಜನವರಿ 15: ಚೆನ್ನೈನಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಬೆದರಿಕೆ ಹಾಕಿದ ಪೈಲಟ್‌ನನ್ನು ಅಮಾನತು ಮಾಡಲಾಗಿದೆ.

ಚೆನ್ನೈನಿಂದ ಬೆಂಗಳೂರಿಗೆ ಬಂದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಆ ವಿಮಾನದ ಪೈಲಟ್ ಬೆದರಿಕೆ ಹಾಕಿ ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದ ಆರೋಪದ ಮೇರೆಗೆ ಪೈಲಟ್‌ನನ್ನು ವಿಚಾರಣೆ ಮುಗಿಯುವವರೆಗೆ ಅಮಾನತಿನಲ್ಲಿ ಇರಿಸಲಾಗಿದೆ.

ಉಕ್ರೇನ್ ವಿಮಾನ ಪತನಕ್ಕೆ ಹೊಸ ತಿರುವು: ನಿಜವಾಗಲು ನಡೆದಿದ್ದೇನು?ಉಕ್ರೇನ್ ವಿಮಾನ ಪತನಕ್ಕೆ ಹೊಸ ತಿರುವು: ನಿಜವಾಗಲು ನಡೆದಿದ್ದೇನು?

ನಾನು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದೆ ಜೊತೆಗೆ 75 ವರ್ಷದ ತಾಯಿ ಕೂಡ ಇದ್ದರು. ತಾಯಿಗೆ ನಡೆಯಲು ಆಗದ ಕಾರಣ ಏರ್‌ಪೋರ್ಟ್‌ಗೆ ಗಾಲಿಕುರ್ಚಿಯನ್ನು ತರಲಾಗಿತ್ತು. ವಿಮಾನ ಇಳಿಯುವ ಸಂದರ್ಭದಲ್ಲಿ ವಿಮಾನದಲ್ಲೇ ಗಾಲಿಕುರ್ಚಿ ತೆಗೆದುಕೊಂಡು ಬರಲು ಅವಕಾಶ ಕೊಡಿ.

Indigo Pilot Suspended

ನನ್ನ ತಾಯಿಯನ್ನು ಕುಳ್ಳಿರಿಸಿ ಕರೆದುಕೊಂಡು ಹೋಗುವೆ ಎಂದು ಪೈಲಟ್ ಜಯಕೃಷ್ಣಗೆ ಮನವಿ ಮಾಡಿದೆ. ಆತ ಅವರು ನಮಗೆ ಬೆದರಿಕೆ ಹಾಕಿದರು. ರಾತ್ರಿ ಇಡೀ ಜೈಲಲ್ಲೇ ಕಳೆಯುತ್ತೀರಿ ಹುಷಾರ್ ಎಂದು ಹೇಳಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

ನನಗೆ ನೀವೇನೂ ಮಾಡಲು ಸಾಧ್ಯವಿಲ್ಲ ಎಂದು ಕೂಗಾಡಿದ ಎಂದೂ ಆರೋಪಿಸಿದ್ದಾರೆ. ಈ ಟ್ವೀಟ್ ಗಮನಿಸಿದ ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಪುರಿ ವಿಚಾರಣೆ ಮುಗಿಯುವವರೆಗೂ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಆದೇಶಿಸಿದ್ದಾರೆ.

English summary
A pilot who threatened a passenger on an Indigo flight from Chennai to Bengaluru has been suspended.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X