ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮಾನದಲ್ಲಿ ಜನಿಸಿದ ಮಗುವಿಗೆ ಜೀವಮಾನವಿಡೀ ಉಚಿತ ಪ್ರಯಾಣ ಘೋಷಿಸಿದ ಇಂಡಿಗೋ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 9: ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಜನಿಸಿದ ಮಗುವಿಗೆ ವಿಮಾನಯಾನ ಸಂಸ್ಥೆ ಭರ್ಜರಿ ಆಫರ್ ನೀಡಿದೆ.

ಬುಧವಾರ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗ ಮಹಿಳೆಯು ಅವಧಿಪೂರ್ವ ಪ್ರಸವಕ್ಕೆ ಒಳಗಾಗಿ ಗಂಡುಮಗುವಿಗೆ ಜನ್ಮ ನೀಡಿದ್ದರು. ಈ ವಿಮಾನ ಸಂಜೆ 7.30ರ ವೇಳೆಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿತ್ತು. ಈ ಮಗುವಿನ ಫೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ದೆಹಲಿ-ಬೆಂಗಳೂರು ಇಂಡಿಗೋ ವಿಮಾನದಲ್ಲಿ ಮಗುವಿನ ಜನನದೆಹಲಿ-ಬೆಂಗಳೂರು ಇಂಡಿಗೋ ವಿಮಾನದಲ್ಲಿ ಮಗುವಿನ ಜನನ

ವಿಮಾನದಲ್ಲಿ ತುರ್ತು ಸೇವೆ ಸಲ್ಲಿಸಿ, ಮಹಿಳೆಯ ಸರಾಗ ಹೆರಿಗೆಗೆ ನೆರವಾದ ಇಂಡಿಗೋ ಸಿಬ್ಬಂದಿಯ ಪ್ರಯತ್ನ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಈ ನಡುವೆ ವಿಮಾನದಲ್ಲಿ ಜನಿಸಿದ ಮಗುವಿಗೆ ಇಂಡಿಗೋ ವಿಮಾನಯಾನ ಸಂಸ್ಥೆಯು ಜೀವಿತಾವಧಿ ಉಚಿತ ಪ್ರಯಾಣ ಟಿಕೆಟ್ ಘೋಷಿಸಿದೆ. ಇನ್ನು ಮುಂದೆ ಆ ಮಗು ಜೀವಮಾನ ಪರ್ಯಂತ ಇಂಡಿಗೋ ವಿಮಾನದಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

 IndiGo Offers Free Lifetime Tickets For Baby Who Born Onboard

ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಮಗು ನಿಲ್ದಾಣಕ್ಕೆ ಇಳಿಯುವ ವೇಳೆ ಇಂಡಿಗೋ ವಿಮಾನ ನಿಲ್ದಾಣದ ಸಿಬ್ಬಂದಿ 'ಬೆಂಗಳೂರಿಗೆ ಸ್ವಾಗತ' ಎಂಬ ಬ್ಯಾನರ್ ಹಿಡಿದು ಮಗುವನ್ನು ಸ್ವಾಗತಿಸಿದ್ದಾರೆ.

 IndiGo Offers Free Lifetime Tickets For Baby Who Born Onboard

ಮಹಿಳೆಗೆ ಪ್ರಸವ ವೇದನೆ ಆರಂಭವಾದ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಯೋಚಿಸಲಾಗಿತ್ತು. ಆದರೆ ವಿಮಾನದಲ್ಲಿದ್ದ ಇಬ್ಬರು ವೈದ್ಯರು ಹೆರಿಗೆ ಮಾಡಿಸಿದ್ದರಿಂದ ನೇರವಾಗಿ ಬೆಂಗಳೂರಿಗೆ ಬಂದೆವು ಎಂದು ವಿಮಾನದ ಪೈಲಟ್ ಕ್ಯಾಪ್ಟನ್ ಸಂಜಯ್ ಮಿಶ್ರಾ ತಿಳಿಸಿದ್ದಾರೆ.

English summary
Woman has delivered baby boy onboard Delhi-Bengaluru flight in Wednesday, IndiGo offered free lifetime ticket for the baby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X