ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಗ್ರೀನ್‍ಫೀಲ್ಡ್ ಸ್ಮಾರ್ಟ್ ಕೈಗಾರಿಕಾ ನಗರದಿಂದ ರೋಡ್ ಶೋ

|
Google Oneindia Kannada News

ಬೆಂಗಳೂರು, ಮೇ 22: ಔರಂಗಾಬಾದ್ ಕೈಗಾರಿಕಾ ಟೌನ್‍ಶಿಪ್ ಲಿಮಿಟೆಡ್ ಇಂದು ನಗರದಲ್ಲಿ ಬೆಂಗಳೂರಿನ ಮತ್ತು ಕರ್ನಾಟಕದ ಉದ್ಯಮಗಳು, ಬಹುರಾಷ್ಟ್ರೀಯ ಸಂಸ್ಥೆಗಳು, ಉದ್ಯಮಶೀಲರು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ದೇಶೀಯ ಕೈಗಾರಿಕೆಗಳಿಗೆ ಮಾಹಿತಿ ನಿಡುವ ಉದ್ದೇಶದಿಂದ ರೋಡ್‍ಶೋ ಹಮ್ಮಿಕೊಂಡಿತ್ತು.

ದೇಶದ ಮೊಟ್ಟಮೊದಲ ಗ್ರೀನ್‍ಫೀಲ್ಡ್ ಕೈಗಾರಿಕಾ ಸ್ಮಾರ್ಟ್ ಸಿಟಿ (ಔರಿಕ್- ಔರಂಗಾಬಾದ್ ಕೈಗಾರಿಕಾ ನಗರ)ಯಲ್ಲಿ ಲಭ್ಯವಿರುವ ಅವಕಾಶಗಳು, ಲಾಭಗಳು ಮತ್ತು ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಈ ರೋಡ್‍ಶೋ ಹಮ್ಮಿಕೊಳ್ಳಲಾಗಿತ್ತು.

ನೆರೆದಿದ್ದ ಉದ್ಯಮಿಗಳನ್ನು ಉದ್ದೇಶಿಸಿ ಔರಂಗಾಬಾದ್ ಕೈಗಾರಿಕಾ ಟೌನ್‍ಶಿಪ್ ಲಿಮಿಟೆಡ್‍ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಗಜಾನನ ಪಾಟೀಲ್, ಕರ್ನಾಟಕ ಸಿಐಐ ಮಾಜಿ ಅಧ್ಯಕ್ಷ ಟಿ.ಪದ್ಮನಾಭನ್ ಸಂಜಯ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಕೋಕಿಲ್ ಮತ್ತು ಎಂಐಡಿಸಿ ಪ್ರಧಾನ ವ್ಯವಸ್ಥಾಪಕ ವಿಜಯ್ ಪಾಟೀಲ್ ಮಾತನಾಡಿದರು.

India’s first greenfield Smart Industrial City AURIC Roadshow

ಔರಂಗಾಬಾದ್ ಇಂಡಸ್ಟ್ರಿಯಲ್ ಸಿಟಿ (ಔರಿಕ್) ಒಂದು ಯೋಜಿತ ಹಾಗೂ ಏಕೈಕ ಗ್ರೀನ್‍ಫೀಲ್ಡ್ ಸ್ಮಾರ್ಟ್ ಕೈಗಾರಿಕಾ ನಗರವಾಗಿದ್ದು, ದೆಹಲಿ- ಮುಂಬೈ ಕೈಗಾರಿಕಾ ಕಾರಿಡಾರ್ (ಡಿಎಂಐಸಿ) ಭಾಗವಾಗಿ 10 ಸಾವಿರ ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಔರಂಗಾಬಾದ್ ಕೈಗಾರಿಕಾಟೌನ್‍ಶಿಪ್ ಲಿಮಿಟೆಡ್ (ಎಐಟಿಎಲ್) ಇದನ್ನು ಪ್ರವರ್ತಿಸಿದ್ದು, ಇದು ಭಾರತ ಸರ್ಕಾರದ ಏಜೆನ್ಸಿಯಾದ ಡಿಎಂಐಸಿಡಿಸಿ ಮತ್ತು ಮಹಾರಾಷ್ಟ್ರ ಸರ್ಕಾರದ ಹೂಡಿಕೆ ಉತ್ತೇಜನ ಮತ್ತು ಸೌಲಭ್ಯ ಸಂಸ್ಥೆಯಾದ ಎಂಐಡಿಸಿ ನಡುವಿನ ಪಾಲುದಾರಿಕಾ ವಿಶೇಷ ಉದ್ದೇಶದ ಸಂಸ್ಥೆಯಾಗಿದೆ.

ಔರಿಕ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಗಜಾನನ ಪಾಟೀಲ್ ಮಾತನಾಡಿ, ಔರಿಕ್ ಸುಮಾರು 60 ಸಾವಿರ ಕೋಟಿಯಿಂದ 70 ಸಾವಿರ ಕೋಟಿ ರೂಪಾಯಿ (600-700 ಶತಕೋಟಿ ರೂಪಾಯಿ) ಬಂಡವಾಳವನ್ನು ಜಾಗತಿಕ ಮಟ್ಟದ ಹೂಡಿಕೆದಾರರಿಂದ ಆಕರ್ಷಿಸುವ ನಿರೀಕ್ಷೆ ಇದ್ದು, ಲಕ್ಷಾಂತರ ಮಂದಿಗೆ ಉದ್ಯೋಗಾವಕಾಶ ಸೃಷ್ಟಿಸಲಿದೆ. ಇಲ್ಲಿಂದ ರಫ್ತಾಗುವ ಉತ್ಪನ್ನಗಳ ಒಟ್ಟು ಅಂದಾಜು ಮೌಲ್ಯ 11.6 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಒಟ್ಟು 46.2 ಶತಕೋಟಿ ಡಾಲರ್ ಮೌಲ್ಯದ ಕೈಗಾರಿಕಾ ಉತ್ಪನ್ನ ಉತ್ಪಾದನೆಯಾಗುವ ನಿರೀಕ್ಷೆ ಇದೆ ಎಂದರು.

English summary
Aurangabad Industrial Township Limited conducted a Roadshow in the City to apprise a business gathering comprising Industries, MNCs, entrepreneurs, corporates and domestic enterprises based in Bangalore and Karnataka region on the opportunities, benefits, and advantages offered by the India's first Greenfield Industrial Smart City - AURIC (Aurangabad Industrial City).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X