ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದ ಮೊಟ್ಟ ಮೊದಲ ಬಿಟ್ ಕಾಯಿನ್ ಎಟಿಎಂ ಬಂದ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 24: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಅನುಮತಿ ಇಲ್ಲದೆ ಬಿಟ್ ಕಾಯಿನ್ ಎಟಿಎಂ ಸ್ಥಾಪಿಸಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಗರದ ಕೆಂಪ್ ಫೋರ್ಟ್ ನಲ್ಲಿದ್ದ ಎಟಿಎಂ ಕಿಯೋಸ್ಕ್ ಜಪ್ತಿ ಮಾಡಲಾಗಿದೆ.

ಜಯನಗರದ ನಿವಾಸಿ, ತುಮಕೂರು ಮೂಲದ 37 ವರ್ಷ ವಯಸ್ಸಿನ ಹರೀಶ್ ಬಿವಿ ಎಂಬಾತನನ್ನು ಎಚ್ಎಎಲ್ ಠಾಣೆ ಹಾಗೂ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ನಿಷೇಧಿತ ಬಿಟ್ ಕಾಯಿನ್ ದಂಧೆ ನಡೆಸುತ್ತಿದ್ದ ಆರೋಪವನ್ನು ಹೊರೆಸಲಾಗಿದ್ದು, ಈ ಸಂಬಂಧ ಆರೋಪಿಯನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಟ್ ಕಾಯಿನ್ ಹಗರಣ : ರಾಜ್ ಕುಂದ್ರಾಗೆ 'ಇಡಿ' ಸಮನ್ಸ್ಬಿಟ್ ಕಾಯಿನ್ ಹಗರಣ : ರಾಜ್ ಕುಂದ್ರಾಗೆ 'ಇಡಿ' ಸಮನ್ಸ್

ಬಂಧಿತ ಆರೋಪಿ ಹರೀಶ್ ಬಳಿ ಇದ್ದ ಒಂದು ಮೊಬೈಲ್ ಫೋನ್, 2 ಲ್ಯಾಪ್‍ಟಾಪ್, 3 ಕ್ರೆಡಿಟ್‍ಕಾರ್ಡ್, 5 ಡೆಬಿಟ್‍ ಕಾರ್ಡ್, 1 ಪಾಸ್‍ಪೋರ್ಟ್, ಯುನೊಕಾಯಿನ್ ಕಂಪನಿಯ ಹೆಸರಿನ 5 ಸೀಲ್, 1 ಕ್ರಿಪ್ಟೋ ಕರೆನ್ಸಿಯ ಸಾಧನ ಮತ್ತು 1.8 ಲಕ್ಷ ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ

Indias first bitcoin ATM kiosk Bengaluru seized

ಕಾನೂನು ಬಾಹಿರವಾಗಿ ಆನ್‍ಲೈನ್ ಮೂಲಕ ಕ್ರಿಪ್ಟೋ ಕರೆನ್ಸಿ ವ್ಯವಹಾರ ನಡೆಸುತ್ತಿದ್ದ. ಹಳೆ ವಿಮಾನ ನಿಲ್ದಾಣ ರಸ್ತೆಯ ಕೆಂಪ್‍ಫೋರ್ಟ್ ಮಾಲ್‍ನಲ್ಲಿ ಯುನೊಕಾಯಿನ್ ಕಂಪನಿಯ ಹೆಸರಿನಲ್ಲಿ ಎಟಿಎಂ ಕಿಯಾಸ್ಕೋ ಅಳವಡಿಸಿದ್ದ.

ಬಿಟ್ ಕಾಯಿನ್ ಆದಾಯದ ಮೇಲೆ ತೆರಿಗೆ ಅಧಿಕಾರಿಗಳ ಕಣ್ಣುಬಿಟ್ ಕಾಯಿನ್ ಆದಾಯದ ಮೇಲೆ ತೆರಿಗೆ ಅಧಿಕಾರಿಗಳ ಕಣ್ಣು

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜಾಜಿನಗರದಲ್ಲಿ ಕಚೇರಿ ಹೊಂದಿರುವ ಯುನೋಕಾಯಿನ್ ಟೆಕ್ನಾಲಜೀಸ್ ಕಂಪನಿ ಸ್ಥಾಪಕ ಸಾತ್ವಿಕ್ ವಿಶ್ವನಾಥ್, ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಿಟ್ ಕಾಯಿನ್ ಮಾದರಿ ಕ್ರಿಪ್ಟೋ ಕರೆನ್ಸಿ ಬಳಕೆಗೆ ಭಾರತದಲ್ಲಿ ಕಾನೂನು ಮಾನ್ಯತೆ ಇಲ್ಲ ಎಂದಿದ್ದಾರೆ.

ಬಿಟ್ ಕಾಯಿನ್ ವ್ಯವಹಾರ: 5 ಲಕ್ಷ ಜನರಿಗೆ ಐಟಿ ನೋಟಿಸ್ಬಿಟ್ ಕಾಯಿನ್ ವ್ಯವಹಾರ: 5 ಲಕ್ಷ ಜನರಿಗೆ ಐಟಿ ನೋಟಿಸ್

Indias first bitcoin ATM kiosk Bengaluru seized

ಆದರೆ, ಎಟಿಎಂ ಅಳವಡಿಕೆಯಿಂದ ಕಾನೂನು ಉಲ್ಲಂಘನೆ ಆಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ಸುದ್ದಿಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಎಟಿಎಂ ಇನ್ನೂ ಪರೀಕಾರ್ಥವಾಗಿ ಬಳಸಲಾಗುತ್ತಿತ್ತು. ಯಾವ ಗ್ರಾಹಕರು ಇದನ್ನು ಉಪಯೋಗಿಸಿಲ್ಲ. ನಮ್ಮ ಕಂಪನಿ ಎಟಿಎಂ ಹಾಗೂ ಬಿಟ್ ಕಾಯಿನ್ ಬಗ್ಗೆ ಅನೇಕ ತಪ್ಪು ಮಾಹಿತಿಯುಳ್ಳ ವಿಡಿಯೋಗಳು ಪ್ರಸಾರವಾಗಿವೆ ಎಂದಿದ್ದಾರೆ.

English summary
A 37 year old man Harish BV a native of Tumakuru was arrested for installing and running India's first bitcoin ATM kiosk, which Bengaluru police called illegal and it had been set up without approvals
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X