ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಡ್ನಿ ಟೆಕ್ಕಿ ಪ್ರಭಾ ಕೊಲೆ ಪ್ರಕರಣ: ಸಂಬಂಧಿಕರಿಂದಲೇ ಹತ್ಯೆ?

By Ananthanag
|
Google Oneindia Kannada News

ಬೆಂಗಳೂರು, ಫೆಬ್ರವರಿ 9: ಆಸ್ಟ್ರೇಲಿಯಾದಲ್ಲಿ ಹತ್ಯೆ ಗೀಡಾದ ನಗರದ ಸಾಫ್ಟ್ ವೇರ್ ಉದ್ಯೋಗಿ ಪ್ರಭಾಶೆಟ್ಟಿ ಪ್ರಕರಣ ಕುರಿತು ಸಿಡ್ನಿಯ ಪೊಲೀಸರು ಈ ಹತ್ಯೆಯು ಅವರ ಆಪ್ತರಿಂದಲೇ ಜರುಗಿದೆ ಎಂಬುದು ತಿಳಿದುಬಂದಿದೆ. ಕೆಲವು ದಿನದಲ್ಲಿಯೇ ಹತ್ಯೆ ನಿಗೂಢತೆಯನ್ನು ಬಯಲು ಮಾಡುವುದಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ಈ ಪ್ರಕರಣ ಕುರಿತು 'ಎನ್‌ಎಸ್‌ಡಬ್ಲ್ಯು(ನ್ಯೂ ಸೌತ್‌ ವೇಲ್ಸ್‌) ನರಹತ್ಯೆ ವಿಭಾಗದ ಕ್ರೈಂ ಕಮಾಂಡ್ ರಿಚಿ ಸಿಮ್, ಹಿರಿಯ ಕಾನ್‌ಸ್ಟೇಬಲ್ ಗಳಾದ ಡೇನಿಯಲ್ ಲವೆಲ್ ಹಾಗೂ ಬಿಕ್ ಸಿಂಗ್ ಅವರ ತಂಡ ಜ.14ರಂದು ನಗರಕ್ಕೆ ಬಂದಿತ್ತು.

ಕುಟುಂಬದ ಆಪ್ತರ ಮೇಲೆಯೆ ಇರುವ ತೀವ್ರ ಶಂಕೆಯಿಂದಾಗಿ 28 ಜನರನ್ನು ವಿಚಾರಣೆಗೊಳಪಡಿಸಿ ದೃಶ್ಯ ಸಂಗ್ರಹವನ್ನು ಮಾಡಲಾಗಿತ್ತು. ವಿಚಾರಣೆಯಲ್ಲಿ ಪ್ರಭಾ ಪತಿ, ಅರುಣ್ ಕುಮಾರ್, ಅತ್ತೆ, ಮಾವ, ಪ್ರಭಾ, ಸ್ನೇಹಿತರು ಮತ್ತು ಪೋಷಕರನ್ನು ವಿಚಾರಣೆ ನಡೆಸಿದ್ದರು.[ಟೆಕ್ಕಿ ಪ್ರಭಾ ಅರುಣ್ ಕುಮಾರ್ ಮೃತದೇಹ ಬೆಂಗಳೂರಿಗೆ]

Prabha shetty

ಅಲ್ಲದೆ ಪತಿಯ ಕೈವಾಡ ವಿದೇಯೇ ಎಂಬ ಅನುಮಾನದಿಂದ ಎರಡು ಬಾರಿ ಅರುಣ್ ಕುಮಾರ್ ಅವರನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಪತಿ-ಪತ್ನಿ ಇಬ್ಬರೂ ಅನ್ಯೋನ್ಯ ವಾಗಿದ್ದೆವು. 2012ರಿಂದ ಮೂರು ವರ್ಷ ಆಕೆ ಆಸ್ಟ್ರೇಲಿಯಾದಲ್ಲಿದ್ದಳು. ಒಮ್ಮೆ ಮಾತ್ರ ನಾನು ಆಸ್ಟ್ರೇಲಿಯಾಕ್ಕೆ ಬರಲು ಸಾಧ್ಯವಾಗಿತ್ತು.

2015ರ ಮಾರ್ಚ್ 7ರಂದು ನನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ಕರೆ ಮಾಡಿದ್ದಳು ಆಗ ನಾನು ಆಕೆಗೆ ಧೈರ್ಯ ತುಂಬಿದ್ದೆ. ಆ ವೇಳೆಯಲ್ಲಿಯೇ ಆಕೆ ಚೀರಾಡಿದ್ದಳು ಕರೆ ಸ್ಥಗಿತವಾಗಿತ್ತು ಎಂದು ಅರುಣ್ ತಿಳಿಸಿದ್ದಾರೆ.

ಈ ವಿಚಾರಣೆಯಿಂದ ಸುಪಾರಿ ಹತ್ಯೆ ಎಂಬ ತೀರ್ಮಾನಕ್ಕೆ ಬಂದ ತಂಡ ನ್ಯಾಯಾಲಯಕ್ಕೆ ವರದಿಸಲ್ಲಿಸಿದೆ. ಇನ್ನು ಪ್ರಭಾ ಸಂಬಂಧಿಕ ನೊಬ್ಬ ಆಸ್ತಿ ಹಂಚಿಕೆ ವಿಚಾರವಾಗಿ ಪ್ರಭಾ ಪೋಷಕರ ಜತೆ ಗಲಾಟೆ ಮಾಡುತ್ತಿದ್ದ ಎಂಬ ವಿಚಾರ ತಿಳಿದು ಬಂದಿದ್ದು ಆಸ್ತಿ ವಿಚಾರವಾಗಿ ಸಂಚುರೂಪಿಸಿ ಸುಪಾರಿ ಹತ್ಯೆ ನಡೆದಿರ ಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

English summary
Indian techie Prabha Kumar's murder in sidney case, New South Wales police are probing the case a possible planned murder reported karnataka court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X