ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸಂಚಾರ: ರೈಲು ನಿಲ್ದಾಣಕ್ಕೆ 12 ಬಸ್‌ಗಳ ಸೇವೆ

|
Google Oneindia Kannada News

ಬೆಂಗಳೂರು, ಜನವರಿ 04: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸೇವೆ ಇಂದಿನಿಂದ ಆರಂಭಗೊಂಡಿದೆ.

Recommended Video

ಇಂದಿನಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸಂಚಾರ | Oneindia Kannada

ಪ್ರಯಾಣಿಕರ ಅನುಕೂಲಕ್ಕಾಗಿ ಏರ್ಪೋರ್ಟ್ ಆಪರೇಟರ್ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (ಬಿಐಎಎಲ್) ರೈಲು ನಿಲ್ದಾಣಕ್ಕೆ 12 ಬಸ್ ಗಳ ಸೇವೆಯನ್ನು ಆರಂಭಿಸಿದೆ.

ಮೊದಲು ಬಸ್ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 5.25 ಕ್ಕೆ ಹೊರಟು ಬೆಳಿಗ್ಗೆ 5.45 ಕ್ಕೆ ನಿಲ್ದಾಣವನ್ನು ತಲುಪಲಿದೆ. ಮೊದಲು ಬಸ್ ಗಳು ಆಲ್ಫಾ -2, ಮೆನೆಜಸ್, ಏರ್ ಇಂಡಿಯಾ ಎಸ್‌ಎಟಿಎಸ್, ಬ್ರಾವೋ ಮತ್ತು ಕಾರ್ಗೋ ವಿಲೇಜ್‌ನಲ್ಲಿ ನಿಲ್ಲಲಿದ್ದು. ಅಲ್ಲಿಂದ ಪ್ರಯಾಣಿಕರನ್ನು ಹೊತ್ತು ನಿಲ್ದಾಣದತ್ತ ಸಾಗಲಿವೆ. ಬಸ್ ಗಳ ಕೊನೆಯ ಟ್ರಿಪ್ ರಾತ್ರಿ 9.40 ಕ್ಕೆ ಮತ್ತು ರಾತ್ರಿ 10 ಕ್ಕೆ ಕೊನೆಗೊಳ್ಳುತ್ತದೆ. ನಿಲುಗಡೆ ನಿಲ್ದಾಣದಿಂದ ಮೊದಲ ಬಸ್ ಬೆಳಿಗ್ಗೆ 6 ಗಂಟೆಗೆ ಹೊರಟು ಬೆಳಿಗ್ಗೆ 6.21 ಕ್ಕೆ ಆಗಮನದ ಗೇಟ್ ತಲುಪಲಿದೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸೇವೆ ಆರಂಭ: ಟಿಕೆಟ್ ದರ ಕೇವಲ 10 ರೂ. ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸೇವೆ ಆರಂಭ: ಟಿಕೆಟ್ ದರ ಕೇವಲ 10 ರೂ.

ನಿರ್ಗಮನ ದ್ವಾರದಲ್ಲಿ ನಿಲುಗಡೆ ಜೊತೆಗೆ ನಿರ್ದಿಷ್ಟಪಡಿಸಿದ ಸ್ಥಳಗಳಲ್ಲಿ ಈ ಬಸ್ ಗಳು ನಿಲ್ಲುತ್ತವೆ ಎಂದು BIAL ವಕ್ತಾರರು ತಿಳಿಸಿದ್ದಾರೆ.

ಬಿಐಎಎಲ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಮತ್ತು ಹೊಸ ಕೆಂಪೇಗೌಡ ರೈಲು ನಿಲ್ದಾಣದ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದೊಯ್ಯಲು 12 ಬಸ್ಸುಗಳನ್ನು ಓಡಿಸಲು ಯೋಜನೆ ರೂಪಿಸಿದೆ. ಬಸ್ ಸೇವೆಗಳನ್ನು ಖಾಸಗಿ ಆಪರೇಟರ್ ನಿರ್ವಹಿಸಲಿದ್ದಾರೆ. ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ತಲಾ ಆರು ಟ್ರಿಪ್‌ಗಳಲ್ಲಿ ಈ ಬಸ್ ಗಳು ಸೇವೆ ನೀಡಲಿವೆ ಎಂದು ತಿಳಿದುಬಂದಿದೆ.

ವಿಮಾನ ನಿಲ್ದಾಣದಲ್ಲಿ 28,000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಬಸ್ ಸೇವೆಯಿಂದ ಪ್ರಯೋಜನ ಪಡೆಯುವ ಸಿಬ್ಬಂದಿಗಳ ಸಂಖ್ಯೆಯ ಕುರಿತು, BIAL ವಕ್ತಾರರು ಮಾತನಾಡಿದ್ದು, 'ಇದು ರೈಲು ಮತ್ತು ವೇಳಾಪಟ್ಟಿಯನ್ನು ಅವಲಂಬಿಸಿರುತ್ತದೆ. ಈ ಸೇವೆ ಉಚಿತವಾಗಿರಲಿದ್ದು, ಸೋಮವಾರದಿಂದ ಅಂದರೆ ಇಂದಿನಿಂದಲೇ ಪ್ರಾರಂಭವಾಗಲಿದೆ. ವಿಮಾನ ನಿಲ್ದಾಣವನ್ನು ಪ್ರವೇಶಿಸಲು ಬಯಸುವವರಿಗೆ ಈ ಸೇವೆ ತೆರೆದಿರುತ್ತದೆ ಎಂದು ಹೇಳಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ಟಿಕೆಟ್ ದರ ಎಷ್ಟು?

ಕೆಂಪೇಗೌಡ ಏರ್‌ಪೋರ್ಟ್‌ಗೆ ಟಿಕೆಟ್ ದರ ಎಷ್ಟು?

ಕೆಎಸ್‌ಆರ್‌ನಿಂದ 10 ರೂಪಾಯಿ ಹಾಗೂ ಕಂಟೋನ್ಮೆಂಟ್‌ನಿಂದ 15 ರೂಪಾಯಿಗೆ ಹಾಲ್ಟ್ ಸ್ಟೇಷನ್ ತಲುಪಬಹುದಾಗಿದೆ.ಹಾಲ್ಟ್ ಸ್ಟೇಷನ್ ನಿಂದ ವಿಮಾನ ನಿಲ್ದಾಣಕ್ಕೆ ೫ ಕಿಲೋಮೀಟರ್ ದೂರವಿದ್ದು, ಬಿಐಎಎಲ್ ನಿಂದ ಉಚಿತ ಬಸ್ ಸೇವೆ ಕಲ್ಪಿಸಲಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರೈಲ್ವೆ ಸಚಿವ ಪಿಯೂಶ್ ಗೋಯಲ್, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹಾಲ್ಟ್ ಸ್ಟೇಷನ್ ರೈಲು ನಿಲ್ದಾಣ ಪ್ರಯಾಣಿಕರ ಸೇವೆಗೆ ಇಂದಿನಿಂದ ಮುಕ್ತವಾಗಿದೆ. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದ್ದು, ಜನ ದಟ್ಟಣೆಯನ್ನು ಪರಿಣಾಮಕಾರಿಯಾಗಿ ತಗ್ಗಿಸುವಲ್ಲಿ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ರೈಲುಗಳ ವೇಳಾಪಟ್ಟಿ, ಪ್ರಯಾಣಿಕರ ಆಸನ ವ್ಯವಸ್ಥೆ ಎಲ್ಲಾ ಮಾಹಿತಿ

ರೈಲುಗಳ ವೇಳಾಪಟ್ಟಿ, ಪ್ರಯಾಣಿಕರ ಆಸನ ವ್ಯವಸ್ಥೆ ಎಲ್ಲಾ ಮಾಹಿತಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹಾಲ್ಟ್ ಸ್ಟೇಷನ್ ನಲ್ಲಿ ರೈಲುಗಳ ವೇಳಾಪಟ್ಟಿ, ಪ್ರಯಾಣಿಕರ ಆಸನ ವ್ಯವಸ್ಥೆ, ಟಿಕೆಟ್ ಕೌಂಟರ್ ನಿಂದ ಹಿಡಿದು ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಂದು ಮುಂಜಾನೆ 4.45ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಟ ಮೊದಲ ರೈಲು 6 ಗಂಟೆ 2 ನಿಮಿಷಕ್ಕೆ ಕೆಐಎಡಿ ತಲುಪಿದೆ.
ಈ ವೇಳೆ ಸಂಸದ ಪಿ.ಸಿ ಮೋಹನ್ ಸೇರಿದಂತೆ ಮತ್ತಿತರರು ಇದಕ್ಕೆ ಸಾಕ್ಷಿಯಾದರು. ವಿಮಾನಗಳ ದಟ್ಟಣೆ ಅವಧಿಗೆ ಅನುಗುಣವಾಗಿ ಈ ರೈಲುಗಳ ವೇಳಾಪಟ್ಟಿಯನ್ನು ಸಿದ್ದಪಡಿಸಲಾಗಿದೆ.ವಿಮಾನಗಳು ಹೆಚ್ಚು ಸಂಚರಿಸುವ ವೇಳೆ ಉಪನಗರ ರೈಲುಗಳು ಕಾರ್ಯಚರಣೆ ಮಾಡಲಿವೆ.

ಮೊದಲ ರೈಲು ಸಂಚಾರ ಆರಂಭ

ಮೊದಲ ರೈಲು ಸಂಚಾರ ಆರಂಭ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹಾಲ್ಟ್ ಸ್ಟೇಷನ್ ಗೆ ರೈಲ್ವೆ ಸೇವೆ ಸೋಮವಾರ ಆರಂಭವಾಗಿದ್ದು, ಕೆಎಸ್ಆರ್-ದೇವನಹಳ್ಳಿ ಡೆಮು ರೈಲು ಇಂದು ಬೆಳಗ್ಗೆ 6.02ಕ್ಕೆ ತಲುಪಿತು.ವಿಮಾನ ನಿಲ್ದಾಣ ಕ್ಯಾಂಪಸ್ ಒಳಗೆ 6 ಕಡೆ ರೈಲು ನಿಲುಗಡೆಯಾಗಿದೆ. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಪ್ರಯಾಣಿಕರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಯಿತು.

ಸಂಸದ ಪಿಸಿ ಮೋಹನ್‌ರಿಂದ ಚಾಲನೆ

ಸಂಸದ ಪಿಸಿ ಮೋಹನ್‌ರಿಂದ ಚಾಲನೆ

ಹಲವು ಪ್ರಯಾಣಿಕರು ಆರಂಭ ದಿನವಾದ ಇಂದು ರೈಲಿನಲ್ಲಿ ಪ್ರಯಾಣಿಸಿ ಸಂತೋಷಪಟ್ಟರು. ಮೊದಲ ಬೋಗಿಯಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಇಂದು ನಸುಕಿನ ಜಾವ ಪ್ರಯಾಣಿಸಿದರು.
ಬೆಂಗಳೂರು ಕೇಂದ್ರ ಸಂಸದ ಪಿ ಸಿ ಮೋಹನ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಟೇಷನ್ ನಿಂದ ಪ್ರಯಾಣಿಸಿದರು. ರೈಲ್ವೆ ಸೀಟುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೆಂಪು ಬಣ್ಣದಿಂದ ಗೆರೆ ಎಳೆಯಲಾಗಿತ್ತು.

English summary
Indian Railways' South Western Railway zone started operating train services from Bengaluru city station to the newly built KIA, Devanahalli Railway halt station from today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X