ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಕೊರೊನಾ ತಡೆಯಲು HCQ ಮಾತ್ರೆ ನೀಡುವಂತೆ ICMR ಸೂಚನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 18: ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ICMR (Indian Council of Medical Research) ರಾಜ್ಯ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಜನರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ನೀಡುವಂತೆ ತಿಳಿಸಿದೆ.

Indian Council Of Medical Research Instructed State Health Department To Give Hydroxychloroquine

ಅಧಿಕ ಅಪಾಯವಿರುವ ಜನರಿಗೆ HCQ ಮಾತ್ರೆ ಕೊಡಲು ICMR ಸಲಹೆ ನೀಡಿದೆ. ಹಿರಿಯ ನಾಗರಿಕರು, ಈ ಹಿಂದೆಯಿಂದ ಹೃದಯ ಸಮಸ್ಯೆಯಲ್ಲಿ ಬಳಲುತ್ತಿರುವವರು, ಜಿ6ಪಿಡಿ ಕೊರತೆ ಹೊಂದಿರುವವರು, ಮತ್ತು 4-ಅಮಿನೋಕ್ವನೋಲೋನ್ಸ್ ಇದಕ್ಕೆ ಅತಿ ಸಂವೇದಿಯಾಗಿರುವ ವ್ಯಕ್ತಿಗಳು ಮತ್ತು ಇತತೆ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ವೈದ್ಯಕೀಯ ತಪಾಸಣೆ ಹಾಗೂ ತಜ್ಞರ ಸೂಕ್ತ ಸಲಹೆಯೊಂದಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪ್ರತಿಬಂಧಕ ಔಷಧಿಯಾಗಿ ಪಡೆಯಬೇಕುದಾಗಿದೆ. ಆದರೆ, 15 ವರ್ಷಗಳ ಕೆಳಗಿನ ಮಕ್ಕಳಿಗೆ ಈ ಮಾತ್ರೆ ಕೊಡದಂತೆ ಸೂಚನೆ ನೀಡಲಾಗಿದೆ.

ವುಹಾನ್ ನಲ್ಲಿ ಸಾವಿನ ಪ್ರಮಾಣ: ಚೀನಾ ಸರ್ಕಾರ ಕೊಟ್ಟಿದೆ 'ಹೊಸ' ಲೆಕ್ಕ.!<br>ವುಹಾನ್ ನಲ್ಲಿ ಸಾವಿನ ಪ್ರಮಾಣ: ಚೀನಾ ಸರ್ಕಾರ ಕೊಟ್ಟಿದೆ 'ಹೊಸ' ಲೆಕ್ಕ.!

Indian Council Of Medical Research Instructed State Health Department To Give Hydroxychloroquine

ಈ ಕೆಳಕಂಡ ವರ್ಗದವರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಆದ್ಯತೆಯ ಮೇರೆಗೆ ನೀಡಬೇಕಾದ ಅಗತ್ಯ ಇದೆ ಎಂದು ತಿಳಿಸಲಾಗಿದೆ.

1.ಆಸ್ಪತ್ರೆಗಳಲ್ಲಿ ವೈದ್ಯಕೀಯ, ಅರೆ ವೈದ್ಯಕೀಯ, ಕಾರ್ಯಪಡೆ ಸಿಬ್ಬಂದಿಗೆ ರೋಗ ನಿರೋಧಕ ಮಾತ್ರೆಯಾಗಿ ಕೊಡಲು ಸೂಚಿಸಿದೆ.

2.ಕೋವಿಡ್-19 ತಪಾಸಣೆಗೆ ಮನೆ-ಮನೆಗಳ ಭೇಟಿ ನೀಡುತ್ತಿರುವ ಕಣ್ಗಾವಲು ತಂಡಗಳಲ್ಲಿ ಕೆಲಸ ಮಾಡುತ್ತಿರುವ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು

3.ಕೋವಿಡ್-19 ದೃಢಪಟ್ಟ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದರಿಗೆ

4.ರೋಗ ನಿರೋಧಕ ಕ್ರಮವಾಗಿ ನಿಯಂತ್ರಿಕ ವಲಯದಲ್ಲಿ ಕೆಲಸ ಮಾಡುವವರಿಗೆ

5.ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲ ಅಧಿಕಾರಿಗಳಿಗೆ

6.ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್-19 ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರು

7.ಆಂಬ್ಯುಲೆನ್ಸ್ ವಾಹನಗಳಲ್ಲಿ ಕೋವಿಡ್-19 ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರು

8.ಪೊಲೀಸ್ ಇಲಾಖೆ ಹಾಗೂ ಇತರೆ ಯಾವುದೇ ಇಲಾಖೆಯಿಂದ ಕೋವಿಡ್-19 ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರು

9.ಕೋವಿಡ್-19 ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಖಾಸಗಿ ವೈದ್ಯಕೀಯ ವೃಂದ.

English summary
As Coronavirus cases increasing in karnataka, Indian Council of Medical Research instructed State Health Department to give Hydroxychloroquine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X